ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವಶ್ರೇಷ್ಠ ವಿಕೆಟ್ ಕೀಪರ್ ಆಡಮ್ ಗಿಲ್ಕ್ರಿಸ್ಟ್ ಅವರು ಸಾರ್ವಕಾಲಿಕ ಶ್ರೇಷ್ಠ ಮೂವರು ವಿಕೆಟ್ ಕೀಪರ್ಸ್ ಆಯ್ಕೆ ಮಾಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎರಡನೇ ಸ್ಥಾನ ನೀಡಿರುವ ವಿಶ್ವಕಪ್ ವಿಜೇತ ಆಟಗಾರ ಆಡಮ್ ಗಿಲ್ಕ್ರಿಸ್ಟ್
ಆಡಮ್ ಗಿಲ್ಕ್ರಿಸ್ಟ್ ಅವರು ರಾಡ್ನಿ ಮಾರ್ಷ್ ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಕರೆದಿದ್ದಾರೆ. ಜೊತೆಗೆ ಎಂಎಸ್ ಧೋನಿ ಅವರ ಶಾಂತ ಸ್ವಭಾವ ಹಾಗೂ ಚಾಣಾಕ್ಷ ರಣತಂತ್ರಗಳನ್ನು ಶ್ಲಾಘಿಸಿದ್ದಾರೆ.
003 ಹಾಗೂ 2007ರ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮೂಲಕ ಆಸ್ಟ್ರೇಲಿಯಾಕ್ಕೆ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದ ಗಿಲ್ಕ್ರಿಸ್ಟ್ ಅವರು ತಮ್ಮದೇ ದೇಶದ ರಾಡ್ನಿ ಮಾರ್ಷ್ ಅವರಿಗೆ ಸರ್ವಶ್ರೇಷ್ಠ ವಿಕೆಟ್ ಕೀಪರ್ಸ್ ಸಾಲಿನಲ್ಲಿ ಅಗ್ರ ಸ್ಥಾನ ಕೊಟ್ಟರೆ, ನಂತರದ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರಗೆ ನೀಡಿದ್ದಾರೆ.
1970 ರಿಂದ 1984ರವರೆಗೆ ಆಸ್ಟ್ರೇಲಿಯಾ ಪರ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದ ರಾಡ್ನಿ ಮಾರ್ಷ್ 94 ಪಂದ್ಯಗಳಿಂದ 16 ಸ್ಟಂಪ್ ಸಹಿತ ವಿಕೆಟ್ ಹಿಂದೆ 479 ಬಲಿ ಪಡೆದಿದ್ದರೆ, ಮಹೇಂದ್ರ ಸಿಂಗ್ ಧೋನಿ 195 ಸ್ಟಂಪ್ ಸಹಿತ 829 ಬ್ಯಾಟರ್ ಗಳಿಗೆ ಪೆವಿಲಿಯನ್ ಹಾದಿ ತೋರಿದ್ದರೆ, ಕುಮಾರ ಸಂಗಕ್ಕಾರ 139 ಸ್ಟಂಪ್ ಗಳೊಂದಿಗೆ 678 ಬಲಿ ಪಡೆದಿದ್ದಾರೆ. ಸ್ವತಃ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಆಡಮ್ ಗಿಲ್ಕ್ರಿಸ್ಟ್, 92 ಸ್ಟಂಪ್ಗಳೊಂದಿಗೆ 905 ಬಲಿ ಪಡೆದಿದ್ದಾರೆ.