ಕಡಪ:- ನಗರದ ಅಗಡಿಬೀದಿಯಲ್ಲಿರುವ ಟೈಟಾನಿಕ್ ಕಟ್ಟಡದಲ್ಲಿ ಸೈಕಲ್ನಲ್ಲಿ ತೆರಳುತ್ತಿದ್ದ ಇಬ್ಬರು ಮಕ್ಕಳಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಓರ್ವ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ.
ಕಂದಕಕ್ಕೆ ಉರುಳಿದ ಆಟೋ: ದೇವರ ದರ್ಶನ ಪಡೆದು ಮರಳುತ್ತಿದ್ದ ವೇಳೆ ದುರ್ಘಟನೆ!
ಕಡಪದ ಅಗಡಿ ಬೀದಿಯಲ್ಲಿ ತನ್ವೀರ್ ಮತ್ತು ಆದಂ ಎಂಬ ಹತ್ತು ವರ್ಷದ ವಿದ್ಯಾರ್ಥಿಗಳು ಸೈಕಲ್ ತುಳಿಯುತ್ತಿದ್ದಾರೆ. ಟೈಟಾನಿಕ್ ಕಟ್ಟಡದ ಬಳಿ ಬರುತ್ತಿದ್ದಂತೆ ವಿದ್ಯುತ್ ತಂತಿ ತಗುಲಿ ಇಬ್ಬರು ಸೈಕಲ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಅದರಲ್ಲಿ ಒಬ್ಬ ಶಾಕ್ನಿಂದ ಸುಟ್ಟು ಕರಕಲಾಗಿದ್ದಾರೆ.
ಆದರೆ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ತಂತಿಗಳು ಸೈಕಲ್ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಓರ್ವ ಬಾಲಕ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಬಾಲಕನ ಸಾವಿಗೆ ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು, ನ್ಯಾಯಕ್ಕಾಗಿ ಪೋಷಕರು ಧರಣಿ ಆರಂಭಿಸಿದ್ದಾರೆ.