ಬೆಂಗಳೂರು:- ನಗರದ ವಿನಾಯಕ ನಗರ ಲೇಔಟ್ನಲ್ಲಿ ಫುಡ್ ಡೆಲಿವರಿ ಮಾಡಲು ಬಂದಿದ್ದ ವೇಳೆ ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
Muda Scam: CM ಸಿದ್ದು ವಿರುದ್ಧ ಕೇಳಿಬಂತು ಮತ್ತೊಂದು ಗಂಭೀರ ಆರೋಪ; ಏನದು ಗೊತ್ತಾ!?
ಇಂದು ಮಧ್ಯೆ ರಾತ್ರಿ 1 ಗಂಟೆ ವೇಳೆ ಡೆಲಿವರಿ ಬಾಯ್ ಮೇಲೆ ನಡೆದಿರುವ ಹಲ್ಲೆಯ ವಿಡಿಯೊ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿನಾಯಕ ನಗರ ಲೇಔಟ್ನಲ್ಲಿ ಮನೆಯೊಂದರಿಂದ ಹೊರಬರುತ್ತಿದ್ದಾಗ ಡಿಯೋ ಸ್ಕೂಟರ್ನಲ್ಲಿ ಹೋದ ಮೂವರು ಯುವಕರು, ಡೆಲಿವರಿ ಬಾಯ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವಕರು ಮಾರಕಾಸ್ತ್ರ ತೆಗೆಯುತ್ತಿದ್ದಂತೆ ಡೆಲಿವರಿ ಬಾಯ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಹೋಗಿರುವ ಯುವಕರು, ಮೊಬೈಲ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಡೆಲಿವರಿ ಬಾಯ್ ಮೇಲೆ ನಡೆದ ದಾಳಿ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.