ಮಂಡ್ಯ:-ನಗರದ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿದ ಘಟನೆ ಜರುಗಿದೆ. ಅಲ್ಲದೇ ಗಂಡನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
4 ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕರ ದೌರ್ಜನ್ಯ ಖಂಡಿಸಿ ರೈಲ್ವೇ ತಡೆ!
ಸ್ವಾತಿ ಮೃತ ಗೃಹಿಣಿ(21). ಮೃತ ಗೃಹಿಣಿ ಪೋಷಕರು ಗಂಡನ ಮನೆಯವರ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಘಟನೆ ಬಳಿಕ ಮನೆಯಿಂದ ಗಂಡ ಹಾಗು ಆತನ ಪೋಷಕರು ಎಸ್ಕೇಪ್ ಆಗಿದ್ದಾರೆ.
ಸಾವಿನಿಂದ ಮನನೊಂದು ಮೃತ ಗೃಹಿಣಿ ಕಡೆಯವರಿಂದ ಗಂಡನ ಮನೆ ಮೇಲೆ ದಾಂಧಲೆ ನಡೆಸಿ ಮನೆಯ ಪೀಠೋಪಕರಣ ಧ್ವಂಸ ಮಾಡಲಾಗಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.