ಕೂದಲುದುರುವುದನ್ನು ತಡೆದು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಕರಿಬೇವಿನ ಸೊಪ್ಪು, ಕೊಬ್ಬರಿ ಎಣ್ಣೆಯೇ ಸಾಕು. ಇದರ ಉಪಯೋಗ ನೀವು ಗ್ಯಾರಂಟಿ ಪಡೆಯಬಹುದು.
ಸಾಮಾಜಿಕ ನ್ಯಾಯದ ಪರವಾಗಿಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿಎಂ ಸಿದ್ದರಾಮಯ್ಯ
ನೀವು ಕರಿಬೇವಿನ ಸೊಪ್ಪು ಹಾಗೂ ತೆಂಗಿನೆಣ್ಣೆಯನ್ನು ಸರಿಯಾದ ವಿಧಾನದಲ್ಲಿ ಬಳಸುವ ಮೂಲಕ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದರ ಜೊತೆಗೆ ಕೂದಲುದುರುವಿಕೆ ಸಮಸ್ಯೆಯನ್ನು ಸಹ ನಿವಾರಿಸಬಹುದು. ಇದಕ್ಕಾಗಿ ಕರಿಬೇವಿನ ಎಣ್ಣೆ ಅತ್ಯುತ್ತಮ ಪರಿಹಾರವಾಗಿದೆ.
ಕರಿಬೇವಿನ ಎಲೆಗಳು ಉತ್ಕರ್ಷಣ ನೀರಿಧಕಗಳಲ್ಲಿ ಹೇರಳವಾಗಿದ್ದು ಬುಡದಿಂದಲೂ ಕೂದಲನ್ನು ಗಟ್ಟಿಯಾಗಿಸುತ್ತದೆ. ಜೊತೆಗೆ ಇದರಲ್ಲಿರುವ ಬೀಟಾ ಕ್ಯಾರೊತಿನ್ ಹಾಗೋ ಪ್ರೊಟೀನ್ ಕೂದಲು ಕಡು ಕಪ್ಪಾಗಲು ಸಹಕಾರಿ ಆಗಿದೆ.
ತೆಂಗಿನೆಣ್ಣೆಯೂ ಕೂಡಲಿನಲ್ಲಿ ಪ್ರೊಟೀನ್ ನಷ್ಟವಾಗುವುದನ್ನು ತಡೆಯುತ್ತದೆ. ಜೊತೆಗೆಇದು ನೆತ್ತಿಯನ್ನು ಪೋಷಿಸಿ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.
ಒಂದು ಕಪ್ ತೆಂಗಿನೆಣ್ಣೆಯಲ್ಲಿ ಒಂದು ಹಿಡಿ ತಾಜಾ ಕರಿಬೇವಿನ ಎಲೆಯಿಂದ ಸುಲಭವಾಗಿ ಕರಿಬೇವಿನ ಎಣ್ಣೆಯಾನ್ನು ತಯಾರಿಸಬಹುದು.
ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡಿ ಅದನ್ನು ಬಿಸಿಮಾಡಿ. ಬಳಿಕ ಒಂದು ಬಟ್ಟಲಿನಲ್ಲಿ ತೆಂಗಿನೆಣ್ಣೆ ಹಾಕಿ ಆ ನೀರಿನ ಕಾವಿನಲ್ಲಿ ಇರಿಸಿ. ಡಬಲ್ ಬಾಯ್ಲರ್ ನಿಂದಾಗಿ ಎಣ್ಣೆ ನಿಧಾನವಾಗಿ ಬಿಸಿಯಾಗುತ್ತದೆ.
ಬಟ್ಟಲಿನಲ್ಲಿರುವ ತೆಂಗಿನೆಣ್ಣೆ ಬೆಚ್ಚಗಾದ ಬಳಿಕ ಅದರಲ್ಲಿ ತಾಜಾ ಕರಿಬೇವಿನ ಎಲೆಗಳನ್ನು ಮಿಶ್ರಣ ಮಾಡಿ. ಸಣ್ಣ ಸಣ್ಣ ಗುಳ್ಳೆ ಬರುವವರೆಗೂ ಈ ಮಿಶ್ರಣ ಬಿಸಿಯಾಗಿಸಿ. ಇದು ಬಹುತೇಕ ಕಪ್ಪುಬಣ್ಣಕ್ಕೆ ತಿರುಗುವವರೆಗೂ ಬಿಸಿಯಾಗಲು ಬಿಡಿ.
ಎಣ್ಣೆ ತಣ್ಣಗಾದ ಬಳಿಕ ತೆಂಗಿನೆಣ್ಣೆಯಿಂದ ಕರಿಬೇವಿನ ಎಲೆಗಳನ್ನು ಬೇರ್ಪಡಿಸಿ, ಈ ಎಣ್ಣೆಯನ್ನು ಗಾಜಿನ ಸೀಸದಲ್ಲಿ ಶೇಖರಿಸಿಡಿ. ಈ ರೀತಿ ಸಂಗ್ರಹಿಸಿಟ್ಟ ಎಣ್ಣೆಯನ್ನು ವಾರದಲ್ಲಿ ಒಂದೆರಡು ಬಾರಿ ನಿಯಮಿತವಾಗಿ ಬಳಸುತ್ತಾ ಬಂದರೆ ಬಿಳಿ ಕೂದಲು ಕಪ್ಪಾಗಿ, ಕೂದಲು ಬುಡದಿಂದಲೂ ಗಟ್ಟಿಯಾಗುತ್ತದೆ. ಈ ರೀತಿ ಸಂಗ್ರಹಿಸಿಟ್ಟ ಎಣ್ಣೆಯನ್ನು ವಾರದಲ್ಲಿ ಒಂದೆರಡು ಬಾರಿ ನಿಯಮಿತವಾಗಿ ಬಳಸುತ್ತಾ ಬಂದರೆ ಬಿಳಿ ಕೂದಲು ಕಪ್ಪಾಗಿ, ಕೂದಲು ಬುಡದಿಂದಲೂ ಗಟ್ಟಿಯಾಗುತ್ತದೆ.