ಮುಂಬೈ: ಕತ್ತಿ ದಾಳಿಯಿಂದ ತನ್ನ ಮಗನನ್ನು ರಕ್ಷಿಸಿಲು ತಾಯಿ ಕಲ್ಲು ಹಿಡಿದು ಗೂಂಡಾಗಳ ಬೆನ್ನಟ್ಟಿ ಪ್ರಾಣಾಪಾಯದಿಂದ ರಕ್ಷಿಸಿದ ಘಟನೆಯೊಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತನ್ನ ಜೀವವನ್ನು ಲೆಕ್ಕಿಸದೇ ಮಗನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ತಾಯಿಯ ಧೈರ್ಯವು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಜೈಸಿಂಗ್ಪುರದ ನಂದಿನಿ ನಾಕಾ ರೋಡ್ ಬಳಿ ಯುವಕನೊಬ್ಬ ಕತ್ತಿಯಿಂದ (Sword) ಹಲ್ಲೆ ನಡೆಸಿದ್ದಾನೆ. ರಸ್ತೆಯ ಸಿಸಿಟಿವಿಯಲ್ಲಿ ಹಲ್ಲೆ ನಡೆಸಿರುವ ಹಾಗೂ ತಾಯಿ ಬಂದು ಮಗನನ್ನು ರಕ್ಷಿಸಿರುವ ದೃಶ್ಯಾವಳಿಗಳು ಸೆರೆಯಾಗಿವೆ.
https://x.com/republic/status/1825539239687454846?ref_src=twsrc%5Etfw%7Ctwcamp%5Etweetembed%7Ctwterm%5E1825539239687454846%7Ctwgr%5E3b3fe05b6efe02eda1e399210b9067141a8b7982%7Ctwcon%5Es1_&ref_url=https%3A%2F%2Fpublictv.in%2Fmother-saves-sons-life-chasing-goons-with-a-stone%2F
ಕತ್ತಿಯಿಂದ ಮಗನನ್ನು ದಾಳಿ ಮಾಡಲು ಬಂದ ಗೂಂಡಾಗಳನ್ನು ಮಹಿಳೆ ಕಲ್ಲನ್ನು ಹಿಡಿದು ಬೆನ್ನಟ್ಟಿಕೊಂಡು ಹೋಗಿದ್ದಾಳೆ. ದಾಳಿ ಮಾಡಿದವರನ್ನು ಕಲ್ಲಿನಿಂದ ಅಟ್ಟಿಸಿಕೊಂಡು ಹೋಗಿ ಸೇಡು ತೀರಿಸಿಕೊಂಡಿದ್ದಾಳೆ. ಈ ಘಟನೆ ಸೋಮವಾರ ಮಧ್ಯಾಹ್ನ 1.20ರ ಸುಮಾರಿಗೆ ಜಯಸಿಂಗ್ಪುರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.