ಒಲಂಪಿಕ್ಸ್ ನಲ್ಲಿ ಅನರ್ಹಗೊಂಡ ವಿನೇಶ್ ಫೋಗಟ್ಗೆ ತವರಲ್ಲಿ ಚಿನ್ನದ ಪದಕ ಹಾಕಿ ಸನ್ಮಾನಿಸಲಾಗಿದೆ.
ಒಲಿಂಪಿಕ್ಸ್ನಲ್ಲಿ ಪದಕ ವಂಚಿತರಾಗಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಶನಿವಾರ ರಾತ್ರಿ ತಮ್ಮ ತವರು, ಹರ್ಯಾಣದ ಬಲಾಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದ್ದು, ಗ್ರಾಮಸ್ಥರೇ ಚಿನ್ನದ ಪದಕವೊಂದನ್ನು ವಿನೇಶ್ ಕೊರಳಿಗೆ ಹಾಕಿದ್ದಾರೆ.
ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್: ಸುಪ್ರೀಂ ನಲ್ಲಿ ಇಂದು ವಿಚಾರಣೆ!
ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 50 ಕೆಜಿ ತೂಕದ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ಗೆ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ನಡೆದ ತೂಕ ಪರಿಶೀಲನೆ ವೇಳೆ ಅನುಮತಿಸಲಾದ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ಇದೇ ಕಾರಣದಿಂದಾಗಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಫೈನಲ್ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಈ ಮನವಿಯನ್ನು ಸಿಎಎಸ್ ವಜಾಗೊಳಿಸಿದೆ. ಇದರೊಂದಿಗೆ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್ ಅವರ ಕನಸು ಕೂಡ ಭಗ್ನಗೊಂಡಿದೆ.
ಈ ನೋವಿನಲ್ಲೇ ಭಾರತಕ್ಕೆ ಹಿಂತಿರುಗಿದ್ದ ವಿನೇಶ್ ಫೋಗಟ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅಲ್ಲದೆ ಸ್ವಗ್ರಾಮ ಬಾಳಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಫೋಗಟ್ ಅವರಿಗೆ ಖಾಪ್ ಪಂಚಾಯತ್ ಮುಖ್ಯಸ್ಥ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.