ಮೊದಲೇ ಹೆಣ್ಣು ಸಿಗುತ್ತಿಲ್ಲ ಎಂಬ ಚಿಂತೆಯಲ್ಲಿರುವ ಗಂಡು ಮಕ್ಕಳಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಮಹಿಳೆಯರು ಮುಂದಿನ ಹತ್ತು ವರ್ಷಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ರೋಬೋಟ್ಗಳನ್ನು ಲೈಂಗಿಕ ಉದ್ದೇಶಕ್ಕಾಗಿ ಬಳಸುತ್ತಾರೆ ಎಂಬ ಶಾಕಿಂಗ್ ವರದಿಯೊಂದು ಹೊರ ಬಂದಿದೆ.
ಜೊತೆಗೆ ಯಂತ್ರಗಳ ಜೊತೆಗೆ ಪ್ರೀತಿ ಉಂಟಾಗಬಹುದು ಎಂದು ತಿಳಿಸಿದೆ.
ಡಾ ಇಯಾನ್ ಪಿಯರ್ಸನ್ ಎಂಬ ಭವಿಷ್ಯಶಾಸ್ತ್ರಜ್ಞರು ಮುಂಬರುವ ವರ್ಷಗಳಲ್ಲಿ ಏನಾಗಲಿದೆ ಎಂಬುದನ್ನು ಊಹಿಸಿ ವರದಿ ನೀಡಿದ್ದಾರೆ. ಮಹಿಳೆ ಶೀಘ್ರದಲ್ಲೇ ಪುರುಷರಿಗಿಂತ ಹೆಚ್ಚಾಗಿ ರೋಬೋಟ್ಗಳ ಜೊತೆ ಇರಲು ನಿರತರಾಗುತ್ತಾರೆ ಎಂದು ಅವರು ಸೂಚಿಸಿದ್ದಾರೆ.
ಇಯಾನ್ ಪ್ರಕಾರ, ನಾವು ಈಗಿರುವ ಕ್ಷಣದಲ್ಲಿ ಇದು ತುಂಬಾ ದೂರವೇನು ಇಲ್ಲಾ. ಮುಂಬರುವ ದಿನಗಳಲ್ಲಿ ಮಹಿಳೆಯರು ಪೋರ್ನ್ ವಿಡಿಯೋಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ರೋಬೋಟ್ಗಳ ಜೊತೆಗೆ ಲೈಂಗಿಕ ಕ್ರೀಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ವಾಸ್ತವವಾಗಿ ನೋಡುವುದಾದರೆ 2050ರ ವೇಳೆಗೆ ಇದು ರೋಬೋಟ್ ಹಾಗೂ ಮಾನವನ ಪ್ರೀತಿ ಆರಂಭವಾಗಲಿದೆ ಎಂದಿದ್ದಾರೆ.
ಬಹಳಷ್ಟು ಜನರು ಇನ್ನು ಮುಂದೆ ಮೊದಲು ರೋಬೋಟ್ಗಳ ಜೊತೆಗೆ ಲೈಂಗಿಕತೆಯನ್ನು ಹೊಂದಲು ಭಯಸುತ್ತಾರೆ. ಮತ್ತು ಕ್ರಮೇಣವಾಗಿ ಅವರು ಅದಕ್ಕೆ ಒಗ್ಗಿಕೊಳ್ಳುತ್ತಾರೆ ಎಂದಿದ್ದಾರೆ. AI ಮತ್ತು ಯಾಂತ್ರಿಕ ನಡವಳಿಕೆ ಮತ್ತು ಅವರ ಭಾವನೆ ಸುಧಾರಿಸುತ್ತದೆ ಮತ್ತು ಅವರು ಬಲವಾದ ಭಾವನಾತ್ಮಕ ಬಂಧಗಳೊಂದಿಗೆ ರೋಬೋಟ್ಗಳ ಜೊತೆಗೆ ಸ್ನೇಹಿತರಾಗಲು ಯತ್ನಿಸುತ್ತಾರೆ ಎಂದು ಅವರು ಬೊಂಡಾರಾ ನಿಯೋಜಿಸಿದ ವರದಿಯಲ್ಲಿ ಹೇಳಿದ್ದಾರೆ.
ರೋಬೋಟ್ಗಳನ್ನು ಪ್ರೀತಿಸುವವರನ್ನು ರೋಬೋಫಿಲಿಯಾ ಎಂದು ಕರೆಯುತ್ತಾರೆ ಮತ್ತು ಈ ಕಲ್ಪನೆಯು ಅವರಿಗೆ ಇನ್ನಷ್ಟು ಮನಸ್ಸಿಗೆ ನೆಮ್ಮದಿಯನ್ನು ನೀಡಲಿದೆ ಎಂದು ಹೇಳಲಾಗಿದೆ.