ಪ್ಯಾನ್ ಇಂಡಿಯಾ ಸ್ಟಾರ್, ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಸಿನಿಮಾ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
ಅಯಾ ಮುಖರ್ಜಿ ನಿರ್ದೇಶನ ಮಾಡುತ್ತಿರುವ ವಾರ್ 2 ಸಿನಿಮಾದ ಶೂಟಿಂಗ್ನಲ್ಲಿ ಜ್ಯೂನಿಯರ್ ಎನ್ಟಿಆರ್ಗೆ ಪೆಟ್ಟಾಗಿದೆ. ಜ್ಯೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಇಬ್ಬರು ಸ್ಟಾರ್ ನಟರಿಗೆ ಒಳ್ಳೆಯ ಓಪನಿಂಗ್ ಸೀನ್ ನೀಡಲಾಗುತ್ತಿತ್ತಂತೆ. ಹೀಗಾಗಿ ಈ ಇಬ್ಬರು ಸ್ಟಾರ್ ನಟರಿಂದ ಓಪನಿಂಗ್ ಸೀನ್ ಚಿತ್ರೀಕರಣ ಮಾಡುತ್ತಿದ್ದ ಸಂಬಂರ್ಧದಲ್ಲಿ ಜ್ಯೂನಿಯರ್ ಎನ್ಟಿಆರ್ ಅವರ ಕೈಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಾರ್ 2’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಜೂನಿಯರ್ ಎನ್ಟಿಆರ್ ಅವರು ಪ್ರಮುಖ ಆ್ಯಕ್ಷನ್ ದೃಶ್ಯವನ್ನು ಮಾಡುತ್ತಿದ್ದರು. ಆಗ ಅವರ ಕೈಗೆ ಗಾಯ ಆಗಿತ್ತು. ಅವರಿಗೆ ಎರಡು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ, ಮುಂಬೈನಲ್ಲಿ ನಡೆಯಬೇಕಿದ್ದ ‘ವಾರ್ 2’ ಶೂಟಿಂಗ್ ಎರಡು ತಿಂಗಳು ಮುಂದಕ್ಕೆ ಹೋಗಿದೆ. ಇದರಿಂದ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಗೆ ನಷ್ಟ ಉಂಟಾಗಿದೆ.
‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರಿಗೆ ಭರ್ಜರಿ ಎಂಟ್ರಿ ಇರಲಿದೆ. ಇದನ್ನು ಈಗ ಶೂಟ್ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಅಕ್ಟೋಬರ್ನಲ್ಲಿ ಇದನ್ನು ಶೂಟ್ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ‘ದೇವರ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27ರಂದು ರಿಲೀಸ್ ಆಗಲಿದೆ. ಇದಾದ ಬಳಿಕವೇ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಶೂಟ್ನಲ್ಲಿ ತೊಡಗಿಕೊಳ್ಳಲಿದ್ದಾರೆ
ದೇವರ’ ಸಿನಿಮಾದ ಪ್ರಚಾರದಲ್ಲಿ ಜೂನಿಯರ್ ಎನ್ಟಿಆರ್ ಭಾಗಿ ಆಗಲಿದ್ದಾರೆ. ಈ ಚಿತ್ರದ ಪ್ರಮೋಷನ್ಗಾಗಿ ನಾನಾ ಕಡೆಗಳಿಗೆ ಅವರು ಭೇಟಿ ಮಾಡಿ ಸಿನಿಮಾ ನೋಡುವಂತೆ ಕೋರಿಕೊಳ್ಳಲಿದ್ದಾರೆ. ಸದ್ಯ ಹೃತಿಕ್ ರೋಷನ್ ಹಾಗೂ ಕಿಯಾರಾ ಅಡ್ವಾಣಿ ಅವರ ದೃಶ್ಯಗಳನ್ನು ಶೂಟ್ ಮಾಡಲು ತಂಡ ಮುಂದಾಗಿದೆ