ಚಿತ್ರದುರ್ಗ:- ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು CM ಸಿದ್ದರಾಮಯ್ಯ ಅವರು ಆಕ್ರೋಶ ಹೊರ ಹಾಕಿದ್ದಾರೆ.
Arrest: ತಾಯಿ-ಮಗನನ್ನು ಕಿಡ್ನ್ಯಾಪ್ ಮಾಡಿ ಕಿರುಕುಳ: 9 ಆರೋಪಿಗಳು ಅರೆಸ್ಟ್!
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ಕೂಡಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ, ಮತ್ತೊಬ್ಬ ಕೇಜ್ರಿವಾಲ್ ಆಗಬೇಡಿ ಎಂದರು.
ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ಬಗ್ಗೆ ರಾಜ್ಯಪಾಲರನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ. ದಾಖಲೆ ಅವಲೋಕಿಸಿ ನಿರ್ಧರಿಸುವ ಹಕ್ಕು ರಾಜ್ಯಪಾಲರಿಗಿದೆ. ಇಡೀ ರಾಜ್ಯ ಹೋರಾಟ ಮಾಡುವಾಗ ರಾಜ್ಯಪಾಲರು ಕೈಕಟ್ಟಿರಬೇಕಾ?,” ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಜೈಲಿಗೆ ಹೋದರೆ ಅವರ ಒಂದೊಂದೇ ಭ್ರಷ್ಟಾಚಾರದ ಪ್ರಕರಣಗಳು ಬಯಲಿಗೆ ಬರುತ್ತವೆ. ಅವರು ಮಾತುಮಾತಿಗೂ ತಮ್ಮ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಅವರು ಕರಿ ಕಾಗೆ ಆಗಿದ್ದಾರೆ. ಕಪ್ಪಾಗಿರುವ ಅವರಲ್ಲಿ ಕಪ್ಪು ಚುಕ್ಕೆ ತೋರಿಸುವುದು ಹೇಗೆ’ ಎಂದು ಇಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ಪ್ರಕರಣದ ಬಗ್ಗೆ ಹಿಂದೆ ಮಾತನಾಡಿದ್ದ ಅವರು ರಾಜ್ಯಪಾಲರು ಕಾನೂನು ಪಾಲನೆ ಮಾಡಿದ್ದಾಗಿ ಹೇಳಿದ್ದರು. ಈಗ ರಾಜ್ಯಪಾಲರು ಕಾನೂನು ಉಲ್ಲಂಘಿಸಿದ್ದಾರೆಯೇ ? ಗೃಹಸಚಿವ ಪರಮೇಶ್ವರ ಸೇರಿ ಕಾಂಗ್ರೆಸ್ ಮುಖಂಡರು ಎರಡು ನಾಲಗೆ ಕತೆ ಹೇಳುವುದನ್ನು ನಿಲ್ಲಿಸಲಿ’ ಎಂದರು.
ಎಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ಪ್ರಕರಣಗಳು ತನಿಖೆಗೆ ಯೋಗ್ಯವಾಗಿರಲಿಲ್ಲ. ಹೀಗಾಗಿ ಅವುಗಳನ್ನು ಪ್ರಾಸಿಕ್ಯೂಷನ್ಗೆ ಕೊಟ್ಟಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಎಲ್ಲೂ ಟೇಪ್ ಕತ್ತರಿಸುವ ಕೆಲಸ ಮಾಡಿಲ್ಲ. ಇಂತಹ ಸರ್ಕಾರ ಬೇಕಾ? ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದರು