ಬೆಂಗಳೂರು:- ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ವೀಕೆಂಡ್ ನಲ್ಲಿ ಎಲ್ಲಿ ನೋಡಿದರೂ ಜನವೋ ಜನ ಕಾಣ್ತಿದ್ದಾರೆ.
Accident: ಬಸ್-ಕಾರು ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ದಾರುಣ ಸಾವು!
ಸ್ವತಂತ್ರ ದಿನಾಚರಣೆಯ ಪ್ರಯುಕ್ತವಾಗಿ ಡಾ ಬಿ.ಆರ್. ಅಂಬೇಡ್ಕರ್ ಅವರ ಥೀಮ್ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಈ ಫ್ಲವರ್ ಶೋ ಆಗಸ್ಟ್ 19 ರವರೆಗೂ ಇರಲಿದ್ದು, ಇಂದು ಭಾನುವಾರವಾಗಿರುವ ಕಾರಣ ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಪ್ರವಾಸಿಗರು ಫ್ಲವರ್ ಶೋ ಗೆ ಬರುತ್ತಿದ್ದಾರೆ. ಹೀಗಾಗಿ ಲಾಲ್ ಬಾಗ್ನಲ್ಲಿ ಎಲ್ಲಿ ನೋಡಿದ್ರು ಜನರೆ ಕಾಣುಸ್ತಾ ಇದ್ದಾರೆ.
ಅಂದಹಾಗೇ ಈ ವರ್ಷದ ಫ್ಲವರ್ ಶೋ ನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ, ಹಳೆಯ ಸಂಸತ್ ಭವನ, ಅಂಬೇಡ್ಕರ್ ಅವರ ಜನ್ಮ ಭೂಮಿ, ಅಂಬೇಡ್ಕರ್ ಅವರ ಪುಣ್ಯಭೂಮಿ, ರಾಜಗೃಹ, ಬೌದ್ದ ಧರ್ಮದ ಸ್ವೀಕಾರ ಸಂದರ್ಭ ಸೇರಿದಂತೆ ಅಂಬೇಡ್ಕರ್ ಅವರು ಹುಟ್ಟಿ, ಬೆಳೆದು ಬಂದ ಹಾದಿಯನ್ನ ಫ್ಲವರ್ ಶೋನಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಅಂಬೇಡ್ಕರ್ ಅವರ ಫ್ಲವರ್ ಶೋಗೆ ಜನರು ಫುಲ್ ಫಿದಾ ಆಗಿದ್ದಾರೆ.
ಇನ್ನು ಫ್ಲವರ್ ಶೋನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಕಂಗೊಳಿಸುತ್ತಿದ್ದು, ಆರ್ಕಿಡ್, ಲಿಲ್ಲಿ, ಸುಗಂಧರಾಜ, ಬೆರಾ, ರೆಡ್ ಹಾರ್ಟ್, ನಂದಿನಿರಿಧಾಮ ಇಂಪೆಷನ್ಸ್, ಕೋಲಾಂಬಿಯಾ, ಆಂಥೋರಿಯಮ್, ನೆದರ್ ಲ್ಯಾಂಡ್ ನಾ ಬೆಲ್ಜಿಯಂ ಹೂಗಳು ನೋಡುಗರನ್ನ ಸೆಳೆಯುತ್ತಿವೆ.
ಕಳೆದ 8 ದಿನದಿಂದ ಫ್ಲವರ್ ಶೋಗೆ ಒಟ್ಟು 5 ಲಕ್ಷದಷ್ಟು ಜನರು ವಿಸಿಟ್ ಮಾಡಿದ್ದು, ಒಟ್ಟು 2 ಕೋಟಿಯಣ್ಟು ಹಣ ಕಲೆಕ್ಟ್ ಆಗಿದೆ. ಇನ್ನು ನಿನ್ನೆ ಒಂದೇ ದಿನ 70 ಸಾವಿರಕ್ಕು ಹೆಚ್ಚು ಜನರು ವಿಸಿಟ್ ಮಾಡಿದ್ದಾರೆ. ಇನ್ನು ಫ್ಲವರ್ ಶೋಗೆ ಬರುವವರಿಗೆ ನಾಲ್ಕು ಗೇಟ್ ಗಳಲ್ಲಿ ಎಂಟ್ರಿ ನಿಗದಿ ಮಾಡಿದ್ದು, ಹೆಚ್ಚಿನ ಪೊಲೀಸರು, ಹೋಮ್ ಗಾರ್ಡ್ಸ್, ಲಾಲ್ ಬಾಗ್ ಸಿಬ್ಬಂದಿಗಳನ್ನ ಕೂಡ ನಿಯೋಜನೆ ಮಾಡಲಾಗಿದೆ.
ಲಾಲ್ ಬಾಗ್ ಮೆಟ್ರೋ ಸ್ಟೇಷನ್ ವರೆಗೂ ಅಂಬೇಡ್ಕರ್ ಥೀಮ್ ಗೆ ಗುಡ್ ರೆಸ್ಪಾನ್ಸ್ ಸಿಗ್ತಿದೆ. ಇನ್ನು, ಇಂದು ಭಾನುವಾರವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಲಾಲ್ ಬಾಗ್ ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ