ರೇಷ್ಮೆಯಂತಹ ಕೂದಲಿಗೆ ಅಲೋವೇರಾ ಜೆಲ್ ಹಚ್ಚುವ ಸುಲಭ ವಿಧಾನ ನೀವು ತಿಳಿಯಲೇಬೇಕು.ಅಲೋವೆರಾ ನಮ್ಮ ಚರ್ಮದ ಜೊತೆಗೆ ನಮ್ಮ ಕೂದಲಿಗೂ ತುಂಬಾ ಪ್ರಯೋಜನಕಾರಿ. ಇದು ಕೂದಲನ್ನು ಒಳಗಿನಿಂದಲೇ ಬಲಪಡಿಸುತ್ತದೆ ಮತ್ತು ರೇಷ್ಮೆಯಂತೆ ಹೊಳೆಯುವ ಹಾಗೆ ಮಾಡುವ ಜೊತೆಗೆ ಕೂದಲನ್ನು ಬಲವಾಗಿ ಮಾಡುತ್ತದೆ.
ಅಲೋವೆರಾ ಮತ್ತು ತೆಂಗಿನ ಎಣ್ಣೆ
2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ನೀವು ಮನೆಯಲ್ಲೇ ತಯಾರಿಸಿ ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. 30-40 ನಿಮಿಷಗಳ ಕಾಲ ಬಿಟ್ಟು, ನಂತರ ಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.
ಅಲೋವೆರಾ ಮತ್ತು ನಿಂಬೆ ರಸ
ಒಂದು ಬಟ್ಟಲಿನಲ್ಲಿ 2 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಅಲೋವೆರಾ ಮತ್ತು ಮೊಸರು
2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ಮೊಸರನ್ನು ಸೇರಿಸಿ ನಯವಾಗುವವರೆಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಬಿಡಿ.
ಅಲೋವೆರಾ ಮತ್ತು ಆಲಿವ್ ಎಣ್ಣೆ
2 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದನ್ನು 30-40 ನಿಮಿಷಗಳ ಕಾಲ ಬಿಡಿ.ಬಳಿಕ ತಲೆಗೆ ಸ್ನಾನ ಮಾಡಿ
ಅಲೋವೆರಾ ಮತ್ತು ಮೊಟ್ಟೆ
1 ಮೊಟ್ಟೆಯನ್ನು ಒಡೆದು ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಹೇರ್ ಮಾಸ್ಕ್ ಅನ್ನು 20-30 ನಿಮಿಷಗಳ ಕಾಲ ಬಿಡಿ. ತಣ್ಣೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.