ಬೆಂಗಳೂರು:- ನಾಳೆ ಕರ್ನಾಟಕದಲ್ಲಿ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತವಾಗಲಿದೆ.
ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ನಾಳೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈಧ್ಯಾದಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆ ಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಷನ್ಗಳು ಬೆಂಬಲ ಕೊಟ್ಟಿದ್ದಾರೆ.
ಮಕ್ಕಳು, ವಯಸ್ಸಾದವರಿಗೂ ಓಪಿಡಿ ಸೇವೆ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿಬೇಕಾಗಿದೆ.
ಬೆಂಗಳೂರಿನಲ್ಲಿ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ಕಾವು ಜೋರಾಗಿ ಇರಲಿದೆ. ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನ ಮಾತ್ರ ನೀಡಲಿದ್ದಾರೆ. ಇದರ ಜೊತೆ ಖಾಸಗಿ ವೈದ್ಯರು ಐಎಂಎ ಸಂಘದ ಎದುರು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ ಶನಿವಾರ(ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ರವರೆಗೆ, ಓಪಿಡಿ ಸೇವೆ ಬಂದ್ ಆಗಲಿದೆ.
ಮುಷ್ಕರಕ್ಕೆ ಯಾರೆಲ್ಲ ಬೆಂಬಲ..!
IMA ವ್ಯಾಪ್ತಿಯ ವೈದ್ಯರ ಬೆಂಬಲ
ಫನಾ ಬೆಂಬಲ ಖಾಸಗಿ ಆಸ್ಪತ್ರೆಗಳ ಒಕ್ಕೂಟ
ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್
ಮಕ್ಕಳ ವೈದ್ಯರ ಅಸೋಸಿಯೇಷನ್
ಅರ್ಥೋಪಿಟಿಕ್ ಅಸೋಸಿಯೇಷನ್
ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ
ಕೇವಲ ಮಲ್ಟಿಸ್ಪೆಷಾಲಿಟಿ, ನರ್ಸಿಂಗ್ ಹೋಂ, ಆಸ್ಪತ್ರೆಗಳು ಮಾತ್ರ ಬಂದ್ ಆಗುತ್ತಿಲ್ಲ, ಇದರ ಜೊತೆಗೆ ಕ್ಲಿನಿಕ್ ವೈದ್ಯರು ಕೂಡಾ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದು, ನಾಳೆ ಸಣ್ಣ ಪುಟ್ಟ ಖಾಯಿಲೆ ಎಂದು ಕ್ಲಿನಿಕ್ಗೆ ಹೋಗೋಣ ಅಂದ್ಕೊಂಡ್ರೆ ಆ ಸೇವೆ ಕೂಡ ಸಿಗೋದಿಲ್ಲ. ಯಾಕೆಂದ್ರೆ ನಾಳೆ ಕ್ಲಿನಿಕ್ಗಳು ಬಂದ್ ಇರಲಿವೆ. ಇನ್ನೂ ನಾಳಿನ ವೈದ್ಯರ ಪ್ರತಿಭಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪರೋಕ್ಷವಾಗಿ ಬೆಂಬಲಿಸಿದ್ದಾರೆ