ಮುಂಬೈ: ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ (Women’s T20 World Cup) ಟೂರ್ನಿ ಆತಿಥ್ಯವನ್ನು ಭಾರತ (India) ವಹಿಸಲು ನಿರಾಕರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI Secretary Jay Shah) ಹೇಳಿದ್ದಾರೆ.
ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಅಕ್ಟೋಬರ್ 3 ರಿಂದ 20ರ ಒಳಗಡೆ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು. ಆದರೆ ಈಗ ಅಲ್ಲಿ ಅಸ್ಥಿರತೆ ಇರುವ ಕಾರಣ ಟೂರ್ನಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಐಸಿಸಿ ಮುಂದಾಗಿದೆ.
ನೀರಜ್ ಚೋಪ್ರಾ – ಮನು ಭಾಕರ್ ಮದುವೆ ವದಂತಿ: ಮನು ಭಾಕರ್ ತಂದೆ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಯ್ ಶಾ, ಐಸಿಸಿ (ICC) ವಿಶ್ವಕಪ್ ಟೂರ್ನಿ ಆಯೋಜಿಸುತ್ತೀರಾ ಎಂದು ನಮ್ಮನ್ನು ಕೇಳಿತ್ತು. ನಾವು ಆಯೋಜಿಸುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಈಗ ನಮ್ಮಲ್ಲಿ ಮುಂಗಾರು ಮಳೆಯಾಗುತ್ತಿದೆ. ಮುಂದಿನ ವರ್ಷ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸುತ್ತೇವೆ. ಸತತ ವಿಶ್ವಕಪ್ಗಳನ್ನು ಆಯೋಜಿಸಲು ನಾವು ಬಯಸುವುದಿಲ್ಲ ಎಂದು ಹೇಳಿದರು.