ಭಾರತ ತಂಡದ ಮಾಜಿ ಆಲ್ರೌಂಡರ್ ಹಾಗೂ ಕರ್ನಾಟಕ ದಿಗ್ಗಜ ದೊಡ್ಡ ಗಣೇಶ್ ಅವರು ಕೀನ್ಯಾ ಕ್ರಿಕೆಟ್ ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆ ಮೂಲಕ ಕನ್ನಡಿಗ ದೊಡ್ಡ ಗಣೇಶ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕನ್ನಡಿಗ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದು, ಕೀನ್ಯಾ ತಂಡದ ಗುಣಮಟ್ಟವನ್ನು ಅಗ್ರ ದರ್ಜೆಗೆ ಏರಿಸುವಲ್ಲಿ ಶ್ರಮಿಸಲಿದ್ದಾರೆ. ಸೆಪ್ಟಂಬರ್ನಲ್ಲಿ ನಡೆಯುವ ಐಸಿಸಿ ಎರಡನೇ ಡಿವಿಜನ್ನಲ್ಲಿ ಪಾಪುವಾ ನ್ಯೂ ಗೀನಿ, ಕತಾರ್, ಡೆನ್ಮಾರ್ಕ್ ಹಾಗೂ ಜೆರ್ಸಿ ವಿರುದ್ದ ಎದುರು ದೊಡ್ಡ ಗಣೇಶ್ ಮಾರ್ಗದರ್ಶನದಲ್ಲಿ ಕೀನ್ಯಾ ಆಡಲಿದೆ.
ದಕ್ಷಿಣ ಆಫ್ರಿಕಾದ ವೇಗಿ ಬೌಲರ್ ಮಾರ್ನೆ ಮಾರ್ಕೆಲ್ ಟೀಂ ಇಂಡಿಯಾಗೆ ಬೌಲಿಂಗ್ ಕೋಚ್
ಟಿ20 ವಿಶ್ವಕಪ್ ಟೂರ್ನಿಗೆ ಕೀನ್ಯಾ ತಂಡವನ್ನು ಅರ್ಹತೆ ಪಡೆಯುವಂತೆ ಮಾಡುವುದು ನನ್ನ ಮುಖ್ಯ ಗುರಿಯಾಗಿದೆ. ಕೀನ್ಯಾ ತಂಡದ ಆಟಗಾರರು ಕಠಿಣ ಪರಿಶ್ರಮ ಪಡುತ್ತಿರುವುದು ಹಾಗೂ ಸಮರ್ಪಣಾ ಮನೋಭಾವವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಹಿಂದಿನ ಸಂಗತಿಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ಕೀನ್ಯಾ ಆಟಗಾರರು ಚಾಂಪಿಯನ್ಗಳ ರೀತಿಯ ಮನೋಭಾವವನ್ನು ಹೊಂದಿದ್ದಾರೆಂದು ನಾನು ಬಲವಾಗಿ ನಂಬಿದ್ದೇನೆ. ಯೂಟ್ಯೂಬ್ನಲ್ಲಿ ಕೀನ್ಯಾ ಪಂದ್ಯಗಳನ್ನು ವೀಕ್ಷಿಸಿದ್ದೇನೆ ಹಾಗೂ ಇಲ್ಲಿನ ಪ್ರತಿಭೆಗಳು ನನ್ನ ಗಮನವನ್ನು ಸೆಳೆದಿದ್ದಾರೆ. ಆಟಗಾರರು ಉತ್ತಮ ರೂಪದಲ್ಲಿದ್ದಾರೆಂಬುದಕ್ಕೆ ಇದು ಬಲವಾದ ಸಾಕ್ಷಿ,” ಎಂದು ದೊಡ್ಡ ಗಣೇಶ್ ತಿಳಿಸಿದ್ದಾರೆ.
ಕೀನ್ಯಾ ತಂಡಕ್ಕೆ ಹೆಡ್ ಕೋಚ್ ಆಗಿ ಲಾಮೆಕ್ ಒನಿಯಾಂಗ ಅವರ ಸ್ಥಾನವನ್ನು ದೊಡ್ಡ ಗಣೇಶ್ ತುಂಬಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಕೀನ್ಯಾ ತಂಡ ಅರ್ಹತೆ ಪಡೆಯುವುದು ನನ್ನ ಮೊದಲ ಗುರಿಯಾಗಿದೆ ಎಂದು ಕನ್ನಡಿಗ ಹೇಳಿಕೊಂಡಿದ್ದಾರೆ. 1996 ರಿಂದ 2011ರವರೆಗೆ ಕೀನ್ಯಾ ತಂಡ ಐದು ಬಾಗಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿತ್ತು.