ಮುಂಬರುವ 2024ರ ದುಲೀಪ್ ಟ್ರೋಫಿ ದೇಶಿ ಕ್ರಿಕೆಟ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ನಾಲ್ಕು ತಂಡಗಳನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಟೀಮ್ ಇಂಡಿಯಾ ಹಿರಿಯ ಆಟಗಾರರನ್ನು ಈ ಟೂರ್ನಿಯ ತಂಡಗಳಲ್ಲಿ ಸ್ಥಾನವನ್ನು ನೀಡಲಾಗಿಲ್ಲ.
Duleep Trophy: ದುಲೀಪ್ ಟ್ರೋಫಿ ಎಂದರೇನು ? ಯಾವಾಗ ಶುರುವಾಯಿತು? ಉದ್ದೇಶವೇನು?
ದುಲೀಪ್ ಟ್ರೋಫಿ ಮೂಲಕ ಭಾರತದಲ್ಲಿ ರೆಡ್ ಬಾಲ್ನ ದೇಶಿ ಕ್ರಿಕೆಟ್ ಆರಂಭವಾಗಲಿದೆ. ಶ್ರೀಲಂಕಾ ವಿರುದ್ದದ ವೈಟ್ಬಾಲ್ ಸರಣಿಯ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಿರಿಯರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆಂದು ಹೇಳಲಾಗಿತ್ತು. ಆದರೆ, ಬುಧವಾರ ಬಿಸಿಸಿಐ ಆಯ್ಕೆ ಸಮಿತಿಯು, ಈ ಆಟಗಾರರನ್ನು ಕೈ ಬಿಟ್ಟು ಹೆಚ್ಚಿನ ಯುವ ಆಟಗಾರರಿಗೆ ಅವಕಾಶವನ್ನು ನೀಡಿದೆ.
ಭಾರತ ತಂಡದ ಉಪ ನಾಯಕ ಶುಭಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಹಾಗೂ ಸೂರ್ಯಕುಮಾರ್ ಯಾದವ್ ಅವರಿಗೂ ಅವಕಾಶವನ್ನು ನೀಡಲಾಗಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾರೆಲ್ಲಾ ಆಡಿದ್ದಾರೆ. ಅಂಥಾ ಆಟಗಾರರನ್ನು ದುಲೀಪ್ ಟ್ರೋಫಿ ಟೂರ್ನಿಗೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.