ಕೋಲಾರ:- ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾದರೂ ಅಚ್ಚರಿ ಇಲ್ಲ ಎಂದು ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ.
Health Tips: ಯಾವುದೇ ಕಾರಣಕ್ಕೂ ಪಪ್ಪಾಯಿ ಜೊತೆ ಇವುಗಳನ್ನು ತಿನ್ನಬೇಡಿ!
ಈ ಕೆಟ್ಟ ಸರ್ಕಾರ ತೊಲಗಿ ಒಳ್ಳೆಯ ಸರ್ಕಾರ ಬರಬೇಕು. ಗ್ಯಾರಂಟಿಗಳನ್ನು ತೊಲಗಿಸಿ ಅಭಿವೃದ್ಧಿ ಕಡೆ ಗಮನ ಕೊಡಿ. ಅನುದಾನ ಇಲ್ಲದೆ ಬರಿಗೈನಲ್ಲಿ ಸಂಸಾರ ಮಾಡುವಂತಾಗಿದೆ. 5 ಗ್ಯಾರಂಟಿ ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನರ ಕಿವಿಗೆ ದಾಸವಾಳ ಹೂ ಇಟ್ಟು ಅಧಿಕಾರಕ್ಕೆ ಬಂತು. ಯಾವ ಶಾಸಕರ ಕ್ಷೇತ್ರಕ್ಕೂ ಅನುದಾನ ಇಲ್ಲದಂತಾಗಿದೆ. ಮನೆಯಲ್ಲಿ ಊಟ ಇಲ್ಲದಿರುವಾಗ ಪಕ್ಕದ ಮನೆಗೆ ಕಳ್ಳತನಕ್ಕೆ ಹೋಗುವಂತಾಗಿದೆ ಪರಿಸ್ಥಿತಿ. ಅದೇ ಕಾರಣಕ್ಕೆ ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ, ವಾಲ್ಮೀಕಿ ನಿಗಮ, ಮುಡಾ ಹಗರಣದಂತ ಹಗರಣ ಆಗುತ್ತಿವೆ ಎಂದಿದ್ದಾರೆ.
500, 600 ಕೋಟಿ ರೂ. ಅದ್ಯಾವ ಅನುದಾನ ಯಾವ ಕ್ಷೇತ್ರಕ್ಕೂ ಬಂದಿಲ್ಲ. ಕೇಂದ್ರ ಸರ್ಕಾರದ ಅನುದಾನ ಬಂದಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಕೋಟಿಗಳ ಅನುದಾನ ಬಂದಿಲ್ಲ. ಕೋಲಾರ ಶಾಸಕರು ಸುಧಾ ಮೂರ್ತಿಯವರ ಕೆರೆ ಅಭಿವೃದ್ದಿಗೆ ಕೊಟ್ಟಿರುವ ಅನುದಾನ ಸೇರಿ ಹೇಳಿರಬೇಕು. ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದ್ದಾರೆ.
ಮಂಡ್ಯ ಭಾಗದ ಶಾಸಕರು ತಾವು ಹೈಲೈಟ್ ಆಗೋದಕ್ಕೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬಗ್ಗೆ ಮಾತಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ದಾಖಲಾತಿಗಳನ್ನು ಇಟ್ಟುಕೊಂಡು ಮಾತನಾಡಿದರೆ ಅದಕ್ಕೆ ಉತ್ತರ ಕೊಡುತ್ತೇವೆ ಎಂದರು.