ಹಾಸನ:- ನಮ್ಮ ಕುಟುಂಬದ ಮೇಲಿನ ವೈರತ್ವದಿಂದ ಹಾಸನದ ಅಭಿವೃದ್ಧಿ ಕೊಲ್ಲಬೇಡಿ ಎಂದು HD ರೇವಣ್ಣ ಹೇಳಿದ್ದಾರೆ.
ಬಳಿಕ ಹಾಸನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೆಚ್ಡಿ ದೇವೇಗೌಡರ ಕುಟುಂಬದ ವಿರುದ್ಧ ವೈರತ್ವ ಇಟ್ಕೊಂಡು ಅಭಿವೃದ್ಧಿ ಕೊಲ್ಲಬೇಡಿ ಎಂದರು.
ಕುಕ್ಕರ್ ಸ್ಫೋಟ: ಓರ್ವ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ, ತಜ್ಞರಿಂದ ಪರಿಶೀಲನೆ !
ದೇವೇಗೌಡರು ಇರುವ ಕಾಣರ ಹಾಸನ ಹೀಗೆ ಬೆಳೆದಿದೆ. ಹೀಗಾಗಿ ಜಿಲ್ಲೆಯ ಮುಂದಿನ ಬೆಳವಣಿಗೆ ಹಾಳು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಲ್ಯಾಂಡ್ ಮಾಫಿಯಾಗೆ ಜಿಲ್ಲಾಡಳಿತ ಸಹಕಾರ ಮಾಡುತ್ತಿದೆ. ಈ ಬಗ್ಗೆ ಮುಂದೆ ಮಾತಾಡುತ್ತೇನೆ. ಇದೇ ರೀತಿ ಜನರಿಗೆ ನೋವು ಕೊಟ್ಟರೆ ಏನು ಮಾಡಬೇಕೆಂದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
25 ವರ್ಷಗಳ ರಾಜಕೀಯ ಜೀವನದಲ್ಲಿ ಏಳುಬೀಳು ನೋಡಿದ್ದೇನೆ. 1989 ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷ ಏಳಕ್ಕೆ ಏಳೂ ಸ್ಥಾನ ಸೋತಿದ್ದೆವು. ದೇವೇಗೌಡರ ರಾಜಕಾರಣ ಮುಗಿದೇ ಹೋಯ್ತು ಅಂದರು. ಆದರೆ ನಂತರ ಮತ್ತೆ ದೇವೇಗೌಡರು ನಾಲ್ಕು ವರ್ಷದಲ್ಲಿ ಮುಖ್ಯಮಂತ್ರ, ಪ್ರದಾನಿ ಎಲ್ಲವೂ ಆದರು. ನಂತರ 1999 ರಲ್ಲಿ ಸ್ವಲ್ಪ ಪ್ರಮಾಣದ ಹಿನ್ನಡೆ ಆಗಿತ್ತು. ಹತ್ತು ವರ್ಷಕ್ಕೆ ಒಮ್ಮೆ ಇದು ರಿಪೀಟ್ ಆಗುತ್ತಿದೆ ಎಂದರು.
ನನಗೆ ಅವಕಾಶ ಸಿಕ್ಕಾಗ ಜನರ ಕೆಲಸ ಮಾಡಿದ್ದೇನೆ. ಕಳೆದ ಮೂರು ತಿಂಗಳಿಂದ ಏನೇನು ನಡೆಯುತ್ತಿದೆ ನೋಡುತ್ತಿದ್ದೇನೆ. ಜಿಲ್ಲೆಯ ಅಧಿಕಾರಿಗಳು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ ಗಮನಿಸಿದ್ದೇನೆ. ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಮುಗಿದ ಬಳಿಕ ಜಿಲ್ಲೆಯಲ್ಲಿ ಏನು ನಡೆಸುತ್ತಿದೆ ಗೊತ್ತಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್ನಲ್ಲಿ ಏನು ನಡೆಯುತ್ತಿದೆ ಗೊತ್ತಿದೆ ಎಂದು ಹೇಳಿದ್ದಾರೆ.