ದೊಡ್ಡಬಳ್ಳಾಪುರ: ಗೋಮಾಳ ಸೇರಿದಂತೆ ಸರ್ಕಾರಿ ರಸ್ತೆ, ಹಳ್ಳ-ಕೊಳ್ಳ ಒತ್ತುವರಿ ಮಾಡುತ್ತಿದ್ದ ಭೂಗಳ್ಳರ ಕಾಕದೃಷ್ಟಿ ಈಗ ಅಶಕ್ತ ಕುಟುಂಬಗಳ ಜಮೀನಿನ ಮೇಲೆ ಬಿದ್ದಿದೆ. ಕಂದಾಯ ಇಲಾಖೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬಲಾಢ್ಯರು, ಭೂಮಾಫಿಯಾದವರು ನಕಲಿ ದಾಖಲೆ ಸೃಷ್ಟಿಸಿ ಬಡವರ ಜಮೀನು ಕಬಳಿಸುತ್ತಿದ್ದಾರೆ. ಪೊಲೀಸ್ ಇಲಾಖೆ, ನ್ಯಾಯಾಲಯದ ಮೆಟ್ಟಿಲೇರಿದರೂ ಬಡವರಿಗೆ ನ್ಯಾಯ ಮರೀಚಿಕೆಯಾಗಿದೆ.
ತಾಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಣಿವೆಪುರದಲ್ಲಿ ಸುಮಾರು 50 ವರ್ಷಗಳಿಂದ ಅನುಭವದಲ್ಲಿದ್ದ ಕೃಷ್ಣಪ್ಪ ಅವರು, 30 ವರ್ಷಗಳ ಹಿಂದೆ ಕಿಮ್ಮತ್ತು ಕಟ್ಟಿ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಈಗ ಭೂಗಳ್ಳರ ಕಾಟದಿಂದ ಇಡೀ ಕುಟುಂಬ, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದೆ.
ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದರೂ ಭೂಗಳ್ಳರು ವಾಮಾಮಾರ್ಗದಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ. ಅವರಿಂದ ನಮಗೆ ರಕ್ಷಣೆ ಕಲ್ಪಿಸಬೇಕು ಎಂದು ಜಮೀನಿನ ಮಾಲೀಕರಾದ ಗಾಯತ್ರಿಮ್ಮ ಮನವಿ ಮಾಡಿಕೊಂಡರು.
ಏನಿದು ವಿವಾದ?
ಕಣಿವೆಪುರ ಗ್ರಾಮದ ಸರ್ವೆ ನಂಬರ್ 102/1 ರಲ್ಲಿರುವ ಒಟ್ಟು 9.17 ಗುಂಟೆ ಜಮೀನಿಗೆ ಸಂಬಂಧಿಸಿ ನರಸಪ್ಪನವರ ಮಗನಾದ ಕೃಷ್ಣಪ್ಪ ಅವರಿಗೆ 1994ರಲ್ಲಿ ಆರ್. ಎಲ್. ಜಾಲಪ್ಪ ಅಧ್ಯಕ್ಷತೆಯ ಭೂ ಮಂಜೂರಾತಿ ಸಲಹಾ ಸಮಿತಿ ಷರತ್ತುಗಳನ್ನು ಒಳಗೊಂಡ ಹಕ್ಕುಪತ್ರ, ಕಿಮ್ಮತ್ ಕಟ್ಟಿಸಿಕೊಂಡು 2.10 ಎಕರೆ ಮಂಜೂರು ಮಾಡಲಾಗಿತ್ತು.
ಆಶಕ್ತ ಕುಟುಂಬದ ಮೇಲೆ ಭೂ ಮಾಫಿಯ ಕಣ್ಣು: ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಲು ಯತ್ನ – ಕಣ್ಣೀರು ಹಾಕುತ್ತಿರುವ ಕುಟುಂಬ..!
ದೊಡ್ಡಬಳ್ಳಾಪುರ: ಗೋಮಾಳ ಸೇರಿದಂತೆ ಸರ್ಕಾರಿ ರಸ್ತೆ, ಹಳ್ಳ-ಕೊಳ್ಳ ಒತ್ತುವರಿ ಮಾಡುತ್ತಿದ್ದ ಭೂಗಳ್ಳರ ಕಾಕದೃಷ್ಟಿ ಈಗ ಅಶಕ್ತ ಕುಟುಂಬಗಳ ಜಮೀನಿನ ಮೇಲೆ ಬಿದ್ದಿದೆ. ಕಂದಾಯ ಇಲಾಖೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬಲಾಢ್ಯರು, ಭೂಮಾಫಿಯಾದವರು ನಕಲಿ ದಾಖಲೆ ಸೃಷ್ಟಿಸಿ ಬಡವರ ಜಮೀನು ಕಬಳಿಸುತ್ತಿದ್ದಾರೆ. ಪೊಲೀಸ್ ಇಲಾಖೆ, ನ್ಯಾಯಾಲಯದ ಮೆಟ್ಟಿಲೇರಿದರೂ ಬಡವರಿಗೆ ನ್ಯಾಯ ಮರೀಚಿಕೆಯಾಗಿದೆ.
ತಾಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಣಿವೆಪುರದಲ್ಲಿ ಸುಮಾರು 50 ವರ್ಷಗಳಿಂದ ಅನುಭವದಲ್ಲಿದ್ದ ಕೃಷ್ಣಪ್ಪ ಅವರು, 30 ವರ್ಷಗಳ ಹಿಂದೆ ಕಿಮ್ಮತ್ತು ಕಟ್ಟಿ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಈಗ ಭೂಗಳ್ಳರ ಕಾಟದಿಂದ ಇಡೀ ಕುಟುಂಬ, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದೆ.
ನ್ಯಾಯಾಲಯದಲ್ಲಿ ಮೊಕದ್ದಮೆ ಇದ್ದರೂ ಭೂಗಳ್ಳರು ವಾಮಾಮಾರ್ಗದಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ. ಅವರಿಂದ ನಮಗೆ ರಕ್ಷಣೆ ಕಲ್ಪಿಸಬೇಕು ಎಂದು ಜಮೀನಿನ ಮಾಲೀಕರಾದ ಗಾಯತ್ರಿಮ್ಮ ಮನವಿ ಮಾಡಿಕೊಂಡರು.
ಏನಿದು ವಿವಾದ?
ಕಣಿವೆಪುರ ಗ್ರಾಮದ ಸರ್ವೆ ನಂಬರ್ 102/1 ರಲ್ಲಿರುವ ಒಟ್ಟು 9.17 ಗುಂಟೆ ಜಮೀನಿಗೆ ಸಂಬಂಧಿಸಿ ನರಸಪ್ಪನವರ ಮಗನಾದ ಕೃಷ್ಣಪ್ಪ ಅವರಿಗೆ 1994ರಲ್ಲಿ ಆರ್. ಎಲ್. ಜಾಲಪ್ಪ ಅಧ್ಯಕ್ಷತೆಯ ಭೂ ಮಂಜೂರಾತಿ ಸಲಹಾ ಸಮಿತಿ ಷರತ್ತುಗಳನ್ನು ಒಳಗೊಂಡ ಹಕ್ಕುಪತ್ರ, ಕಿಮ್ಮತ್ ಕಟ್ಟಿಸಿಕೊಂಡು 2.10 ಎಕರೆ ಮಂಜೂರು ಮಾಡಲಾಗಿತ್ತು.
ಚಿಕ್ಕಬಳ್ಳಾಪುರದ ಕೃಷ್ಣಪ್ಪ ಬಿನ್ ಗಿರಿಯಪ್ಪ ಅವರ ಬಳಿ ಯಾವುದೇ ರೀತಿ ದಾಖಲಾತಿಗಳಿಲ್ಲ. ದಾಖಲಾತಿಗಳಿಲ್ಲದೆ ಅಕ್ರಮವಾಗಿ ನಮ್ಮ ಜಾಗವನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಜಾಗ ಬಿಡುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಭೂಮಿ ನಮ್ಮ ಪೂರ್ವಿಕರಿಗೆ ಸೇರಿದ್ದು, ಸ್ಥಳೀಯ ಅಧಿಕಾರಿಗಳು ಎಚ್ಚೆತ್ತು ಬಡವರ ಪರ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಯಲ್ಲಿ ಚಿಕ್ಕಬಳ್ಳಾಪುರದ ನಿವಾಸಿ ಕೃಷ್ಣಪ್ಪ ಬಿನ್ ಗಿರಿಯಪ್ಪ ಅವರ ಮೇಲೆ ಡಿಕ್ಲರೇಷನ್ ಡಿಡೆಕ್ಷನ್ ಇಂಜೆಕ್ಷನ್ ಆರ್ಡರ್ ಇದೆ. ಪ್ರಸ್ತುತ ವಿಚಾರಣೆ ಹಂತದಲ್ಲಿದೆ. ಆದರೆ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೇ ಭೂಗಳ್ಳರು, ದಲ್ಲಾಳಿಗಳು ನಮ್ಮನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ನಮಗೆ ಪೊಲೀಸರು ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಕೋರಿದರು.