ಬೆಂಗಳೂರು:- ಸಂಬಳ ಕೊಡುವುದಾಗಿ ಯುವಕನನ್ನು ಕರೆಸಿಕೊಂಡ ಅಂಗಡಿ ಮಾಲೀಕ ಬೆತ್ತದಿಂದ ಮನಬಂದಂತೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ಮಾಡಿ ದರ್ಪ ಮೆರೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
Indian Ambassador: ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ ನೇಮಕ!
ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಘಟನೆ ಜರುಗಿದೆ. ಅಲ್ಲದೆ ನನ್ನ ತಾಯಿ ಬಗ್ಗೆಯೇ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಯುವಕನ ವಿರುದ್ಧ ಅಂಗಡಿ ಮಾಲೀಕ ದೂರು ದಾಖಲಿಸಿದ್ದು ಸದ್ಯ ಈಗ ಯುವಕನ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ಸುಬ್ರಮಣ್ಯಪುರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಉತ್ತರಹಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಶರೀಫ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಹಾಸಿಗೆ ವ್ಯಾಪಾರಿ ಶೆಕ್ಷಾವಾಲ ಎಂಬ ಅಂಗಡಿ ಮಾಲೀಕ ಹಲ್ಲೆ ನಡೆಸಿ ನಗ್ನ ಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾನೆ. ಅಸಲಿಗೆ ಹಲ್ಲೆಗೊಳಗಾದ ಶರೀಫ್ ಹಾಗೂ ಶೆಕ್ಷಾವಲ ಇಬ್ಬರು ಸಂಬಂಧಿಕರು. ಹಾಸಿಗೆ ಕೆಲಸಕ್ಕೆ ಬೇಕು ಎಂದು ಶರೀಫ್ನನ್ನು ಆಂಧ್ರದಿಂದ ಶೆಕ್ಷಾವಲ ಕರೆಸಿಕೊಂಡಿದ್ದ. ಬಳಿಕ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡಿದ್ದ. ಹಗಲು ರಾತ್ರಿ ಎನ್ನದೇ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತು ಶರೀಫ್ ಕೆಲಸ ಬಿಟ್ಟಿದ್ದ. ಬಾಬು ಎಂಬ ಮತ್ತೋರ್ವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.
ಈ ವಿಚಾರ ತಿಳಿದು ಶರೀಫ್ ಗೆ ಕರೆ ಮಾಡಿದ್ದ ಶೆಕ್ಷಾವಲ ಕೆಲಸ ಬಿಟ್ಟು ಹೋಗಿದಕ್ಕೆ ಬೈದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶರೀಫ ಶೆಕ್ಷಾವಲನ ತಾಯಿ ಬಗ್ಗೆ ನಿಂದಿಸಿದ್ದ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಶೆಕ್ಷಾವಲ ಬಾಕಿ ಸಂಬಳ ಕೊಡೊದಾಗಿ ಯುವಕನನ್ನು ತನ್ನ ಅಂಗಡಿಗೆ ಕರೆಸಿ ದರ್ಪ ಮೆರೆದಿದ್ದಾನೆ.