ರಾಜಸ್ಥಾನ್:- ಗಂಡ ಹೆಂಡತಿ ಸಂಬಂಧ ಅಂದ್ರೆ ಬಿಡಿಸಲಾರದ ಅನುಬಂಧ ಅಂತಾರೆ. ಎಷ್ಟೇ ಕಷ್ಟ ಸುಖದಲ್ಲೂ ಇಬ್ಬರು ಸಮಾನವಾಗಿ ಸ್ವೀಕರಿಸುವುದೇ ಈ ಪವಿತ್ರ ಬಂಧನ. ಆದ್ರೆ ಇಲ್ಲೊಬ್ಬ ತನ್ನ ಹೆಂಡತಿಯನ್ನು ಬಹಳ ಕ್ರೂರವಾಗಿ ನಡೆಸಿಕೊಂಡಿದ್ದಾನನೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಪುಟ್ಟ ಬಾಲಕಿಗೆ ಚುಂಬಿಸಿ ಲೈಂಗಿಕ ಕಿರುಕುಳ: ಬಳಿಕ ಮೇಕೆ ಜೊತೆ ಸೆಕ್ಸ್; ಇದು ಮುದುಕನ ಕರ್ಮಕಾಂಡ!
ವ್ಯಕ್ತಿಯೊಬ್ಬ ತನ್ನ ಪತ್ನಿ ಮಾಡಿರುವ ಚಿಕ್ಕ ತಪ್ಪಿಗೆ ಆಕೆಯ ಕಾಲುಗಳನ್ನು ಬೈಕ್ ನ ಹಿಂಭಾಗಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ಯುವ ಮೂಲಕ ಶಿಕ್ಷೆ ನೀಡಿದ ದಾರುಣ ಘಟನೆ ರಾಜಸ್ಥಾನದ ನಾಗ್ಪುರ್ ನಲ್ಲಿ ನಡೆದಿದೆ.
ಪತ್ನಿ ಮಾಡಿದ ಚಿಕ್ಕ ತಪ್ಪಿಗೆ ಆಕೆಯ ಮೇಲೆ ಹಲ್ಲೆ ನಡೆಸಿ ನಂತರ ಕಾಲುಗಳನ್ನು ಹಗ್ಗದ ಮೂಲಕ ಬೈಕ್ ನ ಹಿಂಬದಿಗೆ ಕಟ್ಟಿ ಹೊಂಡ ಗುಂಡಿಗಳಲ್ಲಿ ಎಳೆದುಕೊಂಡು ಹೋಗಿದ್ದು, ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಲೆಕ್ಕಿಸದೇ ಹಿಂಸೆ ನೀಡಿದ್ದಾನೆ.
ಇದೀಗ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರೋಪಿ ಪ್ರೇಮ್ ರಾಮ್ ಮೇಘವಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟಾರೆ ಈ ರೀತಿ ಗಂಡ ತನ್ನ ಹೆಂಡತಿಯನ್ನು ನಡೆಸಿಕೊಂಡ ಪರಿ ನೋಡಿ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.