ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಇಂದು ಕೋರ್ಟ್ ಮುಂದೆ ದರ್ಶನ್ ಹಾಜರುಪಡಿಸಲಿದ್ದಾರೆ.
ಪೋಷಕರೇ ನಿಮ್ಮ ಮಕ್ಕಳನ್ನು ಹೊರಗೆ ಕರೆದೊಯ್ಯೋ ಮುನ್ನ ಈ ಸ್ಟೋರಿ ಒಮ್ಮೆ ನೋಡ್ಬಿಡಿ!
ವಿಡಿಯೋ ಕಾನ್ಫರೆನ್ಸ್ ಮೂಲಕ ಡಿ ಗ್ಯಾಂಗ್ರನ್ನು ಪೊಲೀಸರು 24ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕಳೆದ ಬಾರಿ ವಿಡಿಯೋ ಕಾನ್ಫರೆನ್ಸ್ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾಗಿದ್ದರು. ಆ ಬಳಿಕ ಇಂದೇ ಮುಖಾಮುಖಿಯಾಗಲಿದ್ದಾರೆ. ಇಂದು 11 ಗಂಟೆ ವೇಳೆಗೆ ಕೋರ್ಟ್ಗೆ ಹಾಜರುಪಡಿಸಲಾಗ್ತಿದ್ದು ನಿರೀಕ್ಷೆಯಂತೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಕಳೆದ ಬಾರಿ ದರ್ಶನ್ ಸ್ಥಿತಿ ನೋಡಿ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದರಂತೆ. ಇತ್ತ ಚಾರ್ಜ್ಶೀಟ್ ಆಗೋವರೆಗೆ ಜಾಮೀನು ಅರ್ಜಿ ಸಲ್ಲಿಸದಿರಲು ದರ್ಶನ್ ಪರ ವಕೀಲರು ನಿರ್ಧರಿಸಿದ್ದಾರೆ. ಇಂದು ಪೊಲೀಸರು ಮತ್ತೆ ರಿಮ್ಯಾಂಡ್ ಅರ್ಜಿ ಸಲ್ಲಿಸಲಿದ್ದಾರೆ.
ಇನ್ನು, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಕೊನೆ ಹಂತಕ್ಕೆ ತಲುಪಿದೆ. FSL ರಿಪೋರ್ಟ್ ಪೊಲೀಸರ ಕೈ ಸೇರಿದ್ದು ಮತ್ತಷ್ಟು ಭಯಾನಕ ಸತ್ಯ ಹೊರಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿ ಗ್ಯಾಂಗ್ನ ಮತ್ತಷ್ಟು ಕ್ರೌರ್ಯಗಳು ಇದರಲ್ಲಿ ಅನಾವರಣವಾಗಿದೆ ಎನ್ನಲಾಗಿದ್ದು, ಈಗ ಪೊಲೀಸರು FSL ವರದಿ, ಟೆಕ್ನಿಕಲ್ ಸಾಕ್ಷಿಗಳು, ತನಿಖಾ ವರದಿಗಳನ್ನೆಲ್ಲಾ ತಾಳೆ ಮಾಡ್ತಿದ್ದಾರೆ. ಸಣ್ಣ ಲೋಪದೋಷನೂ ಆಗದಂತೆ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆಗಳಾಗ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರೇ ಚಾರ್ಜ್ಶೀಟ್ ವಿಷ್ಯದಲ್ಲಿ ಮುತುವರ್ಜಿ ವಹಿಸಿದ್ದಾರೆ. ಇದಕ್ಕೆ ಕಾರಣ ದರ್ಶನ್ ಕೇಸ್ ಹೈ ಪ್ರೊಫೈಲ್ ಪ್ರಕರಣ, ಸಣ್ಣ ಎಡವಟ್ಟಾದ್ರೂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಬೇಕಾಗುತ್ತೆ. ಜೊತೆಗೆ ಸಮಾಜದಲ್ಲೂ ಪೊಲೀಸ್ ಇಲಾಖೆಯ ಗೌರವದ ಪ್ರಶ್ನೆ ಹಾಗಾಗಿನೇ ಚಾರ್ಜ್ಶೀಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರಂತೆ.