ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.
ಗುಡ್ ನ್ಯೂಸ್: ಮುಂದಿನ ವರ್ಷದಿಂದ 50 ಸಾವಿರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ!
ಡ್ರಗ್ ದಂಧೆಯ ಕರಾಳ ಮುಖವನ್ನು ಭೀಮ ಸಿನಿಮಾ ಮೂಲಕ ನಟ ದುನಿಯಾ ವಿಜಯ್ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನ ಮತ್ತೊಂದು ಮುಖದ ಅನಾವರಣವನ್ನೂ ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ತೆರೆದಿಟ್ಟಿದ್ದಾರೆ. ನೈಜತೆಗೆ ಹೆಚ್ಚು ಒತ್ತು ನೀಡಿ, ರೌಡಿಸಂ ಹಿನ್ನೆಯಲ್ಲಿ ತೆರೆದುಕೊಳ್ಳುವ ಭೀಮ ಚಿತ್ರದಲ್ಲಿ ರಕ್ತದ ಹೊಳೆಯೂ ಹರಿಯುತ್ತದೆ. ಇದರ ಜತೆಗೆ ಪೊಲೀಸ್ ಇಲಾಖೆ, ರಾಜಕೀಯದ ಮಿಶ್ರಣವನ್ನೂ ಸಿನಿಮಾದಲ್ಲಿ ಹದವಾಗಿ ಬೆರೆಸಿದ್ದಾರೆ ನಿರ್ದೇಶಕ ದುನಿಯಾ ವಿಜಯ್. ಕಂಟೆಂಟ್ ವಿಚಾರದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದ ಭೀಮ, ಕಲೆಕ್ಷನ್ ವಿಚಾರದಲ್ಲೂ ಮೋಡಿ ಮಾಡಿದ್ದಾನೆ.
ಇನ್ನು ಡ್ರಗ್ಸ್ ಸರಕು ಹೇಗೆ ಸಾಗುತ್ತದೆ… ಪೆಡ್ಲರ್ ಗಳು ಡ್ರಗ್ಸ್ ಹೇಗೆ ಸಪ್ಲೈ ಮಾಡ್ತಾರೆ.. ಹೇಗೆಲ್ಲಾ ಡ್ರಗ್ಸ್ ಕೊಡಲಾಗುತ್ತದೆ.. ಯಾವ ರೀತಿ ಈ ಜಾಲ ಕೆಲಸ ಮಾಡುತ್ತದೆ ಎಂಬ ಸತ್ಯವನ್ನು ಖುದ್ದು ಯುವಕನೊಂದಿಗೆ ಸಂದರ್ಶನ ಮಾಡಿರುವ ನಟ ವಿಜಯ್, ಅದರ ಕರಾಳತೆಯ ಮುಖವಾಡವನ್ನು ಕಳಚಿದ್ದಾರೆ. ಹೆಣ್ಣುಮಕ್ಕಳೂ ಸಹ ಡ್ರಗ್ಸ್ ಚಟಕ್ಕೆ ದಾಸರಾಗಿರುತ್ತಾರೆ. ಡ್ರಗ್ಸ್ ಚಟಕ್ಕಾಗಿ ತಮ್ಮ ಶೀಲವನ್ನೂ ಸಹ ಮಾರಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಯುವಕ ಈ ದಂಧೆಯ ಗುಟ್ಟುಗಳನ್ನು ಬಯಲು ಮಾಡಿದ್ದಾನೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ನಟ ದುನಿಯಾ ವಿಜಯ್ ಅವರ ಸಿನಿಮಾ ಕೆರಿಯರ್ ಗಮನಿಸಿದರೆ, ಈ ಹಿಂದಿನ ಸಲಗ ಸಿನಿಮಾ ಹಿಟ್ ಆಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಭೀಮ ಮುಂದಿದ್ದಾನೆ. ಅದಕ್ಕಿಂತ ಹಿಂದೆ ಹೋದರೆ, ಅವರ ಬೇರಾವ ಸಿನಿಮಾಗಳಿಗೂ ಇಷ್ಟೊಂದು ಕ್ರೇಜ್ ಸೃಷ್ಟಿಯಾಗಿರಲಿಲ್ಲ. ಇದರ ಜತೆಗೆ ನಿರ್ದೇಶನದಲ್ಲಿ ಹಿಡಿತ ಸಾಧಿಸಿರುವ ವಿಜಯ್, ನಟನೆಯಲ್ಲಿಯ ಮತ್ತಷ್ಟು ಮಾಗಿದ್ದಾರೆ. ಅಂದಹಾಗೆ ಭೀಮ ಸಿನಿಮಾವನ್ನು ಕೃಷ್ಣ ಸಾರ್ಥಕ್ ಅವರ ಕೃಷ್ಣ ಕ್ರಿಯೇಷನ್ಸ್ ಮತ್ತು ಜಗದೀಶ್ ಫಿಲಂಸ್ ಬ್ಯಾನರ್ನಲ್ಲಿ ಜಗದೀಶ್ ಬಂಡವಾಳ ಹೂಡಿದ್ದಾರೆ.