ಹಬ್ಬ ಹರಿದಿನಗಳಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವುದು ವಾಡಿಕೆ. ಹಿಂದಿನ ಕಾಲದಲ್ಲಿ ಬಾಳೆ ಎಲೆಯನ್ನು ದಿನವೂ ಊಟಕ್ಕೆ ಬಳಕೆ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಬಾಳೆ ಎಲೆ ಊಟ ಅಪರೂಪವಾಗಿದೆ. ನಮ್ಮ ಹಿರಿಯರು ಮಧ್ಯಾಹ್ನದ ಊಟಕ್ಕೆ ಬಾಳೆ ಎಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತಾ? ದಕ್ಷಿಣ ಭಾರತದ ಆಹಾರಗಲ್ಲಿ ಸಾಂಬಾರ್ ಮತ್ತು ರಸಂನಂತಹ ದ್ರವರೂಪದ ಆಹಾರ ಪದಾರ್ಥಗಳು ಹೆಚ್ಚು.
ಹಾಗಾಗಿ ಬಾಳೆ ಎಲೆಯಲ್ಲಿ ತಿನ್ನಲು ಸುಲಭ. ಎಲ್ಲದೇ ತುಪ್ಪ ಮತ್ತು ಎಣ್ಣೆ ಕೂಡ ಎಲೆಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಸುಲಭವಾಗಿ ಊಟ ಮಾಡಬಹುದು. ಬಾಳೆ ಎಲೆಗಳನ್ನು ಕೆಲವು ಆಯುರ್ವೇದ ಔಷಧಿಗಗಳಿಗೆ ಬಳಸಲಾಗುತ್ತದೆ. ಹಾಗಾಗಿ ಇದರಲ್ಲಿ ಊಟ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಜೀರ್ಣಕ್ರಿಯೆ:
ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರ ಎಲೆಗೆ ಬಿದ್ದ ತಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಕ್ಯಾನ್ಸರ್ ರೋಗ ತಡೆಯುತ್ತದೆ:
ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ದೇಹ ಸೇರಲು ಬಿಡಲ್ಲ.
ದೇಹಕ್ಕೆ ತಂಪು:
ಬಾಳೆ ಎಲೆ ಊಟ ದೇಹಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.
ಆಹಾರ ಸುವಾಸನೆ ಹಾಗೂ ರುಚಿ ನೀಡುವುದು
ಬಾಳೆ ಎಲೆಯಲ್ಲಿ ತಿನ್ನಬಹುದಾದ ಮೇಣವು ಇದ್ದು, ಇದರಿಂದಾಗಿ ಅದರಲ್ಲಿ ಊಟ ಮಾಡಿದರೆ ಆಗ ಆಹಾರದ ಸುವಾಸನೆ ಮತ್ತು ರುಚಿಯು ಹೆಚ್ಚಾಗುವುದು. ಬಿಸಿ ಬಿಸಿಯಾಗಿರುವ ಆಹಾರವನ್ನು ಬಾಳೆ ಎಲೆ ಮೇಲೆ ಹಾಕಿದ ವೇಳೆ ಅದು ಆಹಾರಕ್ಕೆ ರುಚಿ ಹಾಗೂ ಸುವಾಸನೆ ನೀಡುವುದು.
ಬಾಳೆ ಎಲೆ ಬಳಸುವ ಇತರ ಲಾಭಗಳು
- ಬಾಳೆ ಎಲೆಯಲ್ಲಿ ಊಟ ಮಾಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.
- ಪ್ಲಾಸ್ಟಿಕ್ ಮತ್ತು ಇತರ ಸಾಮಗ್ರಿಗಳಿಂದ ಮಾಡಿದಂತಹ ಪ್ಲೇಟ್ ಗಳು ತುಂಬಾ ದುಬಾರಿ. ಇದು ಪರಿಸರಕ್ಕೂ ಒಳ್ಳೆಯದಲ್ಲ.
- ಸ್ಟೆರಿಫೋಮ್ ಪ್ಲೇಟ್ ಗಳನ್ನು ಮರುಬಳಕೆ ಮಾಡಬಹುದು. ಆದರೆ ಇದು ಮಣ್ಣಿನಲ್ಲಿ ಕರಗುವುದಿಲ್ಲ ಮತ್ತು ಹಾಗೆ ನೂರಾರು ವರ್ಷಗಳ ಕಾಲ ಉಳಿಯಬಹುದು. ಬಾಳೆಎಲೆಯು ಮಣ್ಣಿನಲ್ಲಿ ಬೇಗನೆ ಕರಗುವುದು.
- ನಗರ ಪ್ರದೇಶ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಬಾಳೆ ಎಲೆಯು ಲಭ್ಯವಿದೆ. ಇದು ಹೆಚ್ಚು ದುಬಾರಿ ಕೂಡ ಆಗಿರಲ್ಲ.
- ಪ್ಲೇಟ್ ಗಳನ್ನು ದ್ವೇಷಿಸುತ್ತಿದ್ದರೆ ಆಗ ನೀವು ಬಾಳೆ ಎಲೆ ಬಳಕೆ ಮಾಡಿ. ಇದನ್ನು ಬಳಸಿದ ಬಳಿಕ ಬಿಸಾಕಬಹುದು. ಪ್ಲೇಟ್ ನಂತೆ ನಿಮಗೆ ಅದನ್ನು ಶುಚಿ ಮಾಡಬೇಕಾಗಿಲ್ಲ.
- ಬಾಳೆ ಎಲೆಯಲ್ಲಿ ಇರುವಂತಹ ನೈಸರ್ಗಿಕ ಮೇಣವು ಇದನ್ನು ವಾಟರ್ ಪ್ರೂಫ್ ಆಗಿ ಮಾಡಿ. ಇದರಿಂದಾಗಿ ಬಾಳೆ ಎಲೆಯು ತುಂಬಾ ಶುಚಿಯಾಗಿರುವುದು ಮತ್ತು ಆಹಾರಕ್ಕೆ ಒಳ್ಳೆಯ ರುಚಿ ನೀಡುವುದು.
- ಬಾಳೆ ಎಲೆಯಲ್ಲಿ ಊಟ ಬಡಿಸುವುದು ತುಂಬಾ ಸುಲಭ. ಇದನ್ನು ಒಮ್ಮೆ ನೀರಿನಲ್ಲಿ ಒರೆಸಿಕೊಂಡು ಬಳಸಬಹುದು.
- ಬಾಳೆ ಎಲೆಯಲ್ಲಿನ ಊಟವು ತುಂಬಾ ಆರೋಗ್ಯಕಾರಿ, ಶುಚಿ ಹಾಗೂ ಫೋಷಕಾಂಶಗಳನ್ನು ದೇಹಕ್ಕೆ ನೀಡುವುದು.