ಭಾರತೀಯರಾದ ನಾವು 2024ರ ಆಗಸ್ಟ್ 15 ಕ್ಕೆ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ. ಈ ವರ್ಷ ನಮ್ಮ ಭಾರತ ತನ್ನ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಸುಮಾರು 200 ವರ್ಷಗಳ ಗುಲಾಮಗಿರಿಯ ನಂತರ ಭಾರತ ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿತು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಗಣರಾಜ್ಯವಾದ ಭಾರತದ ಎಲ್ಲಾ ರಾಜ್ಯಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈಗ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದರೂ, ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆ ಹೇಗಿತ್ತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆ ದಿನ ಭಾರತದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆದವು.
ಈ ಬಾರಿಯದ್ದು 77ನೇ ಸ್ವಾತಂತ್ರ್ಯೋತ್ಸವವೋ.? 78ನೇಯದ್ದೋ?: ಶುರುವಾಗಿದೆ ಹೀಗೊಂದು ಗೊಂದಲ – ಇಲ್ಲಿದೆ ಉತ್ತರ
ಮೊದಲ ಧ್ವಜ ಭಾರತದ ಮೊದಲ ಅನಧಿಕೃತ ಧ್ವಜವನ್ನು ಆಗಸ್ಟ್ 7, 1906 ರಂದು ಆಗಿನ ಕಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಇದು ಕೆಂಪು, ಹಳದಿ ಮತ್ತು ಹಸಿರು ಮೂರು ಅಡ್ಡ ಗೆರೆಗಳನ್ನು ಹೊಂದಿತ್ತು. ಅದರ ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು. ತ್ರಿವರ್ಣ ಧ್ವಜದ ಮೂಲ ಭಾರತದ ರಾಷ್ಟ್ರಧ್ವಜ, ತ್ರಿವರ್ಣ ಧ್ವಜವು ಮಚಲಿಪಟ್ಟಣಂನ ರೈತ ಸ್ವಾತಂತ್ರ್ಯ ಹೋರಾಟಗಾರ ಬಿಂಗಾಲಿ ವೆಂಕಯ್ಯ ರಚಿಸಿದ ಸ್ವರಾಜ್ ಧ್ವಜವನ್ನು ಆಧರಿಸಿದೆ.
ರಾಷ್ಟ್ರಗೀತೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ರಾಷ್ಟ್ರಗೀತೆ ಇರಲಿಲ್ಲ. ರವೀಂದ್ರನಾಥ ಠಾಗೋರ್ ಅವರು 1911 ರಲ್ಲಿ ‘ಜನ ಗಣ ಮನ’ ರಚಿಸಿದ್ದರೂ, ಅದನ್ನು ಅಧಿಕೃತವಾಗಿ ರಾಷ್ಟ್ರಗೀತೆಯಾಗಿ ಜನವರಿ 24, 1950 ರಂದು ಅಂಗೀಕರಿಸಲಾಯಿತು.
ಆಗಸ್ಟ್ 15 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಏಕೆ ಆರಿಸಲಾಯಿತು? ಭಾರತದ ಕೊನೆಯ ವೈಸರಾಯ್ ಮತ್ತು ಮೊದಲ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರು ಭಾರತದ ಸ್ವಾತಂತ್ರ್ಯವನ್ನು ಘೋಷಿಸಲು ಆಗಸ್ಟ್ 15 ಅನ್ನು ಆಯ್ಕೆ ಮಾಡಿದರು. ಜೂನ್ 1948ರ ಹೊತ್ತಿಗೆ, ಬ್ರಿಟಿಷ್ ಸಂಸತ್ತು ಅಧಿಕಾರವನ್ನು ಭಾರತೀಯರಿಗೆ ವರ್ಗಾಯಿಸುವ ಅಧಿಕಾರವನ್ನು ನೀಡಿತು.