ಮಾನಸಿಕ ಖಿನ್ನತೆ ಮತ್ತು ಆತಂಕದ ಸಮಸ್ಯೆಯಿಂದ ಬಳಲಿದ್ದ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಗ್ರಹಾಮ್ ಥೋರ್ಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವು ಹೃದಯಾಘಾತದಿಂದ ಸಂಭವಿಸಿದ್ದಲ್ಲ ಎಂದು ದಿಗ್ಗಜ ಕ್ರಿಕೆಟಿಗನ ಪತ್ನಿ ಅಮಾಂಡ ಥೋರ್ಪ್ ಇದೀಗ ಬಹಿರಂಗ ಪಡಿಸಿದ್ದಾರೆ.ಆಗಸ್ಟ್ 5ರಂದು ಕೊನೆಯುಸಿರೆಳೆದಿದ್ದರು. ಅವರ ಸಾವಿನ ಸುದ್ದಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಖಾತ್ರಿ ಪಡಿಸಿತ್ತು.
IND Vs SL: ಈ ಸರಣಿಯಲ್ಲಿ ಒಂದೇ ಒಂದು ಎಸೆತವನ್ನು ಕೂಡ ನಾನು ನೋಡಲಿಲ್ಲ: ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್
“ಕಳೆದ ಕೆಲ ವರ್ಷಗಳಿಂದ ಗ್ರಹಾಮ್ ಥೋರ್ಪ್ ಮಾನಸಿಕ ಖಿನ್ನತೆ ಮತ್ತು ಆತಂಕದ ಸಮಸ್ಯೆ ಎದುರಿಸಿದ್ದರು. 2022ರ ಮೇ ತಿಂಗಳಿನಲ್ಲೇ ಅವರು ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದರು. ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಿ ದೀರ್ಘ ಸಮಯ ಐಸಿಯುನಲ್ಲಿ ಇರಿಸಲಾಗಿತ್ತು. ಅವರು ಬಹಳಾ ಪ್ರೀತಿಸುತ್ತಿದ್ದ ಇಬ್ಬರು ಮಕ್ಕಳು ಮತ್ತು ಪತ್ನಿ ಜೊತೆಗಿದ್ದರೂ ಕೂಡ ಅವರಿಂದ ಸಂಪೂರ್ಣ ಚೇತರಿಸಲು ಸಾಧ್ಯವಾಗಿರಲಿಲ್ಲ.
ಇತ್ತೀಚಿನ ದಿನಗಳಲ್ಲೂ ಅವರ ಮಾನಸಿಕ ಆರೋಗ್ಯ ಕೆಟ್ಟಿತ್ತು. ತಮ್ಮ ಸಾವಿನ ಬಳಿಕವಷ್ಟೇ ಕುಟುಂಬದವರು ಖುಷಿಯಾಗಿರಲು ಸಾಧ್ಯ ಎಂಬ ನಂಬಿಕೆಗೆ ಅವರು ಬಂದಿದ್ದರು. ಬಳಿಕ ಅವರ ಆತ್ಮಹತ್ಯೆ ನಮ್ಮೆಲ್ಲರಿಗೂ ಬರ ಸಿಡಿಲಿನಂತೆ ಅಪ್ಪಳಿಸಿತು,” ಎಂದು ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಗ್ರಹಾಮ್ ಥೋರ್ಪ್ ಪತ್ನಿ ಅಮಾಂಡಾ ಹೇಳಿಕೊಂಡಿದ್ದಾರೆ.