ಚಾಮರಾಜನಗರ:- ಸಾಲಬಾಧೆಗೆ ರೈತನೋರ್ವ ಹೆದರಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಗುಂಡ್ಲುಪೇಟೆ ತಾಲೂಕಿನ ದೇಪೇಗೌಡನಪುರ (ಹೊಸಪುರ) ಗ್ರಾಮದಲ್ಲಿ ನಡೆದಿದೆ.
ವಾ.ಓ: ಚಾಮರಾಜನಗರ ಜಿಲ್ಲೆಯ ಹೊಸಪುರ ಗ್ರಾಮದ ರೈತ ಶಿವಣ್ಣಗೌಡ (55) ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿ ದ್ದಾರೆ.
ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ!
ಮೃತ ಶಿವಣ್ಣಗೌಡರ ಮೊದಲ ಪತ್ನಿಯ ಮಗ ನೀಡಿದ ದೂರಿನ ಮೇರೆಗೆ ಬೇಗೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ತಹಸೀಲ್ದಾರ್ ಟಿ.ರಮೇಶ್ ಬಾಬು, ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ಬೇಗೂರು ಸರ್ಕಲ್ ಇನ್ಸ್ಪೆಕ್ಟರ್ ವನರಾಜು, ಸಬ್ ಇನ್ಸ್ಪೆಕ್ಟರ್ ಚರಣ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತ ಶಿವಣ್ಣಗೌಡ ಅವರು ಟ್ರ್ಯಾಕ್ಟರ್ ಸಾಲ ಹಾಗೂ ಬೆಳೆ ಸಾಲ ಸೇರಿ ₹10 ಲಕ್ಷ ಸಾಲ ಮಾಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಗೆ ಬೆಲೆ ಸಿಗದೆ ಸಾಲದ ಬಾಧೆ ಹೆಚ್ಚಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಆತ್ಮಹತ್ಯೆ ಮಾಡಿಕೊಂಡವರ ಮರಣೋತ್ತರ ವರದಿ, ಪೊಲೀಸ್ ಠಾಣೆಯಲ್ಲಿ ದಾಖ ಲಾದ ಬಳಿಕ ಸರ್ಕಾರದ ನೆರವು ಸಿಗಲಿದೆ ಎಂದು ತಿಳಿಸಿದ್ದಾರೆ.