ಅನಾರೋಗ್ಯಕರ ಜೀವನಶೈಲಿಯಿಂದಾಗಿ ನಮ್ಮ ದೇಹ ಹಾಳಾದಾಗ ಅದು ಮುಖ್ಯವಾಗಿ ಗೋಚರಿಸುವುದು ನಮ್ಮ ಹೊಟ್ಟೆಯಲ್ಲಿ.
ಹೊಟ್ಟೆಯಲ್ಲಿ ಶೇಖರವಾಗುವ ಕೊಬ್ಬು ನಮ್ಮ ದೇಹದ ಅಂದವನ್ನೇ ಹಾಳುಮಾಡಿಬಿಡುತ್ತದೆ. ಸಾಕಷ್ಟು ವ್ಯಾಯಾಮ ಮಾಡಿದರೂ ಸಹ ಎಷ್ಟೋ ಬಾರಿ ಕೆಲವರಿಗೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ಅಂತಹ ವೇಳೆ ನಾವು ಆಹಾರದಲ್ಲಿ ಮಾಡಿಕೊಳ್ಳುವ ಕೆಲವು ಸಣ್ಣ ಬದಲಾವಣೆಗಳು ಆಶ್ಚರ್ಯವೆನಿಸುವಷ್ಟು ಫಲಿತಾಂಶಗಳನ್ನು ನೀಡುತ್ತದೆ. ಆ ಪಟ್ಟಿಯಲ್ಲಿ ಸೇರುವುದು ಆರೋಗ್ಯಕರ ದ್ರವ ಪದಾರ್ಥಗಳು
ಈ ಪಾನೀಯಗಳಲ್ಲಿ ಪ್ರಮುಖ ಪೋಷಕಾಂಶಗಳು ಮತ್ತು ರಾಸಾಯನಿಕಗಳು ಅಧಿಕವಾಗಿರುತ್ತವೆ. ಇವು ಹಸಿವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಪಥ್ಯದ ಪಟ್ಟಿಯಲ್ಲಿ ಬೆಳಗ್ಗೆ ಸೇವಿಸಬೇಕಾದ ಈ ಪಾನೀಯಗಳನ್ನು ಸೇರಿಸಿಕೊಂಡಲ್ಲಿ ತೂಕ ನಷ್ಟ ಮಾಡಬೇಕೆಂಬ ನಿಮ್ಮ ಗುರಿಯನ್ನು ಇನ್ನು ಹೆಚ್ಚು ಸುಲಭವಾಗಿ ಸಾಧಿಸಬಹುದು.
ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುವ 10 ಆರೋಗ್ಯಕರ ಪಾನೀಯಗಳು ಮತ್ತು ಜ್ಯೂಸ್ಗಳ ಪಟ್ಟಿ ಇಲ್ಲಿದೆ.
ನಿಂಬೆ ನೀರು
ನಿಂಬೆ ನೀರು ಅಥವಾ ಜ್ಯೂಸ್ ಪರಿಣಾಮಕಾರಿ ಪಾನೀಯವಾಗಿದ್ದು ಅದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ. ನಿಂಬೆಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ದೇಹದಲ್ಲಿ ಕಾರ್ನಿಟೈನ್ ಅನ್ನು ಉತ್ಪಾದಿಸಲು ಅತ್ಯವಶ್ಯಕ. ದೇಹಕ್ಕೆ ಸೇರಿದ ಕೊಬ್ಬನ್ನು ಇದು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
ಗ್ರೀನ್ ಟೀ
ಗ್ರೀನ್ ಟೀಗಳಲ್ಲಿ ಕ್ಯಾಟೆಚಿನ್ ಎಂದು ಕರೆಯಲ್ಪಡುವ ಪ್ರಬಲವಾದ ಉತ್ಕರ್ಷಣ ನಿರೋಧಕ ಅಂಶವಿದ್ದು, ಇದು ದೇಹದ ಕೊಬ್ಬನ್ನು ಸುಡುವ ಗುಣವನ್ನು ಹೊಂದಿದೆ. ಕ್ಯಾಟೆಚಿನ್ ಮತ್ತು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಉತ್ಕರ್ಷಣ ನಿರೋಧಕಗಳು, ಕೊಬ್ಬಿನ ಆಕ್ಸಿಡೀಕರಣವನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ಶುಂಠಿ ಟೀ
ಶುಂಠಿ ಚಹಾವು ದೇಹದ ಉಷ್ಣತೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ, ದೇಹದಲ್ಲಿನ ಹೆಚ್ಚಿನ ಮಟ್ಟದ ಕೊಬ್ಬನ್ನು ಕರಗಿಸುತ್ತದೆ. ಇವಲ್ಲದೆ, ಶುಂಠಿಯು ಉರಿಯೂತವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೂ ಸಹ ಸಹಾಯ ಮಾಡುತ್ತದೆ.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ನಲ್ಲಿರುವ ಅಸಿಟಿಕ್ ಆಮ್ಲವು ದೇಹದ ಕೊಬ್ಬನ್ನು, ಅದರಲ್ಲೂ ವಿಶೇಷವಾಗಿ ಹೊಟ್ಟೆಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ, ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿ ಮತ್ತು ಪುದೀನ ನೀರು
ಸೌತೆಕಾಯಿಯು ದೇಹಕ್ಕೆ ಹೆಚ್ಚು ನೀರಿನಂಶ ಒದಗಿಸುವ ಹಾಗೂ ಸೌತೆಕಾಯಿಯು ಹೊಟ್ಟಯ ಉಬ್ಬುವಿಕೆಯನ್ನು ಕಡಿಮೆ ಮಾಡುವ ಕಡಿಮೆ ಕ್ಯಾಲೋರಿಯುಳ್ಳ ತರಕಾರಿ. ಇನ್ನು ಪುದೀನಾ ಆಹ್ಲಾದಕರ ಪರಿಮಳವನ್ನು ನೀಡುವುದರ ಜೊತೆಗೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಸೆಲರಿ ಜ್ಯೂಸ್
ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಯುಳ್ಳ ಸೆಲರಿಯು ತೂಕ ನಿರ್ವಹಣೆಗೆ ಹೇಳಿ ಮಾಡಿಸಿದಂತಹ ಪದಾರ್ಥ ಎಂದರೆ ತಪ್ಪಾಗಲಿಕ್ಕಿಲ್ಲ. ಸೆಲರಿ ರಸವು ದೇಹದದ ಉಬ್ಬುವಿಕೆಯನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ
ಬೀಟ್ರೂಟ್ ಜ್ಯೂಸ್
ಬೀಟ್ರೂಟ್ ನಲ್ಲಿ ಬಹಳಷ್ಟು ಫೈಬರ್ ಅಂಶವನ್ನು ಹೊಂದಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿನ ನೈಟ್ರೇಟ್ಗಳು ವ್ಯಾಯಾಮದ ಸಮಯದಲ್ಲಿ ರಕ್ತದ ಹರಿವು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಹಸಿರು ಸ್ಮೂಥಿ
ಹಸಿರು ಸ್ಮೂಥಿಗಳು ಹೆಚ್ಚಿನ ಪೋಷಕಾಂಶಗಳು ಮತ್ತು ಫೈಬರ್ ಅಂಶವಿದ್ದು, ಇದು ಜೀರ್ಣಕ್ರಿಯೆಗೆ ಬಹಳ ಸಹಾಯ ಮಾಡುತ್ತದೆ. ಹಣ್ಣುಗಳು, ಕೇಲ್ ಅಥವಾ ಪಾಲಕದಂತಹ ತರಕಾರಿಗಳೊಂದಿಗೆ ಇದನ್ನು ಸೇವಿಸಿದಾಗ ಚಯಾಪಚಯ ಕ್ರಿಯೆ ಇನ್ನಷ್ಟು ವೇಗಗೊಳ್ಳುತ್ತದೆ.
ಅರಿಶಿನ ಮತ್ತು ಶುಂಠಿ ಚಹಾ
ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಅಂಶವು ಉರಿಯೂತವನ್ನು ಕಡಿಮೆ ಮಾಡಿ, ದೇಹದಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯುತ್ತದೆ. ಹಾಗೆತೇಮ ಅರಿಶೀಣವನ್ನು ಶುಂಠಿಯೊಂದಿಗೆ ಸೇವಿಸಿದರೆ, ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಸುಧಾರಣೆಗೊಳ್ಳುತ್ತದೆ.