ಬೆಂಗಳೂರು – ಸಿಟಿ ಜನ ಕಣ್ಣು ಮುಚ್ಚಿ ಬಿಡೋ ಅಷ್ಟರಲ್ಲಿ ಇಡೀ ಬೆಂಗಳೂರು ಚಿತ್ರಣವೇ ಬದಲಾಗಿ ಹೋಗಿತ್ತು. ವರುಣನ ಮುನಿಸೋ ಏನೋ ಗೊತ್ತಿಲ್ಲ ಸಾಕು ಸಾಕು ಅಂತ ಕೈ ಮುಗಿದ್ರು ಬಿಡದೇ ಅಬ್ಬರಿಸ್ತಿದ್ದಾನೆ. ಒಂದ ಎರಡಾ ಬೆಳಗಾಗೊ ಹೊತ್ತಿಗೆ ವರಣ ರಾಯ ಹಲವು ಅವಾಂತರಗಳನ್ನೆ ಸೃಷ್ಟಿ ಮಾಡಿ ಬೆಂಗಳೂರಿಗರ ನಿದ್ದೆ ಗೇಡಿಸಿದ್ದಾನೆ.
ಎಸ್… ನಮ್ಮ ಬೆಂಗಳೂರು ಎಷ್ಟೇ ಡೆವಲಪ್ ಸಿಟಿ ಆದರೂ ಸಣ್ಣ ಮಳೆ ಬಂದ್ರೂ ಕೂಡ ನೀರಿನಲ್ಲಿ ಬೆಂಗಳೂರು ಮುಳುಗಿ ಹೋಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತಡರಾತ್ರಿ ಸುರಿದ ಮಳೆಗೆ ಬೆಳಗಾಗೋ ಅಷ್ಟರಲ್ಲಿ ವರುಣರಾಯ ನಾನಾ ಅವಾಂತರ ಸೃಷ್ಟಿ ಮಾಡಿದ್ದಾನೆ. ರಸ್ತೆ ಕೆರೆಯಂತಾಗಿದ್ವು, ತರಕಾರಿ-ಹೂ ನೀರು ಪಾಲಾಗಿದ್ವು, ಮೆಟ್ರೋ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತ, ಮನೆಗೆ ನುಗ್ಗಿದ ನೀರು ತೆಗೆಯೋಕೆ ನಿವಾಸಿಗಳು ಕಣ್ಣಿಗೆ ಎಣ್ಣೆ ಬಿಟ್ಟು ಕೂತಿದ್ರು.
ಹೌದು.. ಮಳೆ ಬೇಕು ಬೇಕು ಅಂತಿದ್ದ ಜನ ಈಗ ಸಾಕು.. ಸಾಕು ಅನ್ನೋ ಮಟ್ಟಿಗೆ ತಲುಪಿದೆ. ತಡರಾತ್ರಿ ಮತ್ತು ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ನಾಗವಾರ ಮತ್ತು ಹೆಬ್ಬಾಳ ರಸ್ತೆ ನಿರುಮಯವಾಗಿ ವಾಹನ ಸವರಾರು ಪರದಾಡಿದ್ರು. ಐಟಿ ವಲಯದ ವರ್ತೂರು ಮತ್ತು ಬೆಳ್ಳಂದೂರಿನಲ್ಲಿ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯ್ತು. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯಲ್ಲಿ ವಾಹನಗಳು ಸಿಲುಕಿದ್ವು. ಮೆಜೆಸ್ಟಿಕ್, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಜಯನಗರ, ಸೇರಿದಂತೆ ಸುತ್ತಮುತ್ತ ರಸ್ತೆ ಸ್ವೀಮಿಂಗ್ ಫುಲ್ ಆಗಿದ್ವು.
ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ನಿದ್ದೆಗೆಟ್ಟಿದ್ದರು. ಮಾರತಹಳ್ಳಿ ಬಳಿ ಅಪಾರ್ಟ್ಮೆಂಟ್ ಗೆ ಜಲದಿಗ್ಬಂಧನ ಹೇರಲಾಗಿತ್ತು. ಗೋಡೆ ಒಡೆದು,
ಕೂದಲೆಳೆಯ ಅಂತರದಲ್ಲಿ ಮನೆ ಮಂದಿ ಪಾರಾಗಿದ್ರು.
ಸೊನೆಸ್ಟಾ ಸಿಲ್ವರ್ ಓಕ್ ಅಪಾರ್ಟ್ಮೆಂಟ್ ಗೂ ನೀರು ನುಗ್ಗಿತ್ತು. ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇ ಔಟ್ ನಲ್ಲಿ ಮನೆಗೆ ನೀರು ನುಗ್ಗಿದ್ದಲ್ಲದೆ, ಬೇಸ್ ಮೆಂಟ್ ಸಂಪೂರ್ಣ ಜಲಮಯವಾಗಿತ್ತು. ನಿವಾಸಿಗಳು ನೀರು ಹೊರ ಹಾಕುವುದರಲ್ಲಿ ನಿದ್ದೆಗೆಟ್ಟಿದ್ರು.
ಇನ್ನು ಸಿಟಿಯ ಅಂಡರ್ಪಾಸ್ ಸ್ಥಿತಿ ಕೇಳಬೆಕಾ, ಒಕಳಿಪುರಂ, ಎಲೆಕ್ಟ್ರಾನಿಕ್ ಸಿಟಿ ಸೇರಿ ಹಲವು ಅಂಡರ್ಪಾಸ್ಗೆ ನೀರು ನುಗ್ಗಿ, ವಾಹನ ಸವಾರರು ತಡರಾತ್ರಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿ, ಸುಮಾರು 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಂತಿತ್ತು. ವಾಹನ ಸವಾರರು ಭಯದಲ್ಲಿಯೇ ಸಂಚಾರ ಮಾಡಿದ್ರು.
ಇನ್ನು ಮಾರುತಿ ಸೇವಾನಗರದಲ್ಲಿ ಬೆಳಗ್ಗೆ 7 ರ ಸುಮಾರಿಗೆ ರಸ್ತೆಯಲ್ಲಿ ಸಾಗುವ ವೇಳೆ ಮರ ಬಿದ್ದು ಒಟ್ಟು ಆರು ಜನರಿಗೆ ಗಾಯ ಆಗಿದೆ. ಶಾಲಾಮಕ್ಕಳ ಜಸ್ಟ್ ಪಾರಾಗಿದ್ದು, ಒಬ್ಬ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದೆ. ಎದೆ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಒರ್ವ ಮಹಿಳೆಯ ಕಾಲು ಮುರಿದಿದೆ. ಗಾಯಗೊಂಡವರನ್ನ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ರೂ. ಅವಘಡ ನಂತರ ಬಿದ್ದ ಮರದ ಕೊಂಬೆ ತೆರವಿಗೆ ಬಿಬಿಎಂಪಿ ಸಿಬ್ಬಂದಿ ಆಗಮಿಸಿದ್ರು. ಮರ ತೆರವಿಗೆ ಮನವಿ ಮಾಡಿದ್ರು ಸಿಬ್ಬಂದಿ ಮಾತ್ರ ಗಪ್ ಚುಪ್ ಆಗಿದ್ರು.
ನೀರು ತುಂಬಿ ಅವಾಂತರ ಸೃಷ್ಟಿಯಾಗಿದ್ದ ಸ್ಥಳದಲ್ಲಿ ಡಿಸಿಎಂ ಡಿಕೆಶಿ ಪರಿಶೀಲನೆಗೆ ಮುಂದಾಗಿದ್ರು. ಮಳೆಯಿಂದ ಅವಾಂತರ ಸೃಷ್ಟಿಸಿದ್ದ ಜಯದೇವ ಅಂಡರ್ ಪಾಸ್ ವೀಕ್ಷಿಸಿದ್ರು. ಹೂಳು ಬಿದ್ದ ಜಾಗ ನೋಡಿ ಡಿಕೆಶಿ ಗಾಬರಿಯಾದ್ರು. ನೀರು ಹೋಗೋ ಜಾಗದಲ್ಲಿ ಎಳನೀರು ಬುರುಡೆಗಳು ಪತ್ತೆಯಾಗಿದ್ದು, ಇದರಿಂದ ಮ್ಯಾನ್ ಹೋಲ್ ಬ್ಲಾಕ್ ಆಗಿ ನೀರು ನಿಂತಿದೆ. ಇಲ್ಲಿ ಎಳನೀರು ಬುರುಡೆ ಹಾಕಿದ್ದು ಯಾರು ಎಂಬ ಡಿಕೆಶಿ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದ್ರು. ಡಿಕೆಶಿ ಮುಂದೆ ಅದಿಕಾರಿಗಳು ಚಿಪ್ಪು ತೆಗಿಸಿದ್ರು. ಮರ ಬಿದ್ದು ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದ್ರು. ಈ ವೇಳೆ ಘಟನೆಗೆ ಬಿಬಿಎಂಪಿ ಅರಣ್ಯ ವಿಭಾಗದ ನಿರ್ಲಕ್ಷ್ಯ ಕಾರಣ ಎಂದು ಟೀಕೆ ಮಾಡಿದ್ರು. ಗಾಯಾಳುಗಳ ಆಸ್ಪತ್ರೆಯ ಖರ್ಚು ಸರ್ಕಾರ ಭರಿಸುವ ಭರವೆಸೆ ನೀಡಿದ್ರು.
ನಂತರ ಡಿಕೆಶಿ ಸಿಟಿ ರೌಂಡ್ಸ್ ಅರ್ಧಕ್ಕೆ ಮೊಟಕು ಗೊಳಿಸಿದ್ರು. ಎಲ್ಲೋ ಒಂದು ಕಡೆ ಕಾಟಾಚಾರಕ್ಕೆ ಸಿಟಿ ರೌಂಡ್ಸ್ ನಡೆಸಿದ್ರಾ ಡಿಕೆಶಿ ಅಂತ ಪ್ರಶ್ನೆ ಮೂಡಿತು. ಅತಿ ಹೆಚ್ಚು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡದೆ ಸುಮ್ಮನಾದ್ರೂ. ಚಿಕ್ಕಪೇಟೆ, ಮಾರ್ಕೆಟ್ ಪ್ರದೇಶಗಳಿಗೆ ತೆರಳದೆ, ಊಟಕ್ಕೆ ಲೇಟಾಯ್ತು ಎಂದು ಅರ್ಧಕ್ಕೆ ವಾಪಸ್ ಆದ್ರೂ.
ಒಟ್ಟಿನಲ್ಲಿ ಮಳೆ ಬಂದ್ರೆ ಸಾಕು ಬೆಂಗಳೂರಿನ ಜನ ತತ್ತರಿಸಿ ಹೋಗ್ತಾರೆ. ಬಿಬಿಎಂಪಿ ಕೇರ್ ಲೆಸ್ ಬಿಬಿಎಂಪಿ ಬಂಡವಾಳ ಬಯಲಾಗ್ತಿದೆ. ಡಿಸಿಎಂ ಸಿಟಿ ರೌಂಡ್ಸ್ ನಿಂದ ಆದ್ರೂ ಅಧಿಕಾರಿಗಳು ಅಲರ್ಟ್ ಆಗ್ತಾರಾ ಕಾದು ನೋಡಬೇಕು.