ಕನ್ನಡ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ಸಮಯದಿಂದ ಪ್ರೀತಿಸುತ್ತಿದ್ದ ಜೋಡಿ ಆ.11ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಬಗ್ಗೆ ತರುಣ್ ಸುಧೀರ್ ಸಹೋದರ ನಂದ ಕಿಶೋರ್ ಮಾತನಾಡಿದ್ದಾರೆ.
ಅಣ್ಣನ ಮದುವೆ ಬಗ್ಗೆ ಮಾತನಾಡಿದ ನಂದ ಕಿಶೋರ್, ‘ತುಂಬಾನೇ ಖುಷಿಯಿದೆ. ನಮ್ಮನೆನಲ್ಲಿ ಬಹಳಷ್ಟು ವರ್ಷಗಳಾದ ಮೇಲೆ ನಡಿತಾ ಇರೋ ಒಂದು ಫಂಕ್ಷನ್ ಇದು. ಇಂಥ ವಿಜೃಂಭಣೆ ನಮ್ಮನೆನಲ್ಲಿ ಬಹಳಷ್ಟು ವರ್ಷಗಳಾದ ಮೇಲೆ ನಡಿತಾ ಇದೆ. ಇದಕ್ಕೆ ಪೂರಕವಾಗಿ ಇರೋರು ಅಂದ್ರೆ ನಮ್ ರಾಜಣ್ಣ, ಜಿಮ್ಮಿ, ದಯಾನಂದ್ ಸರ್, ಶರಣ್, ಪ್ರೇಮ್, ಹಾಗೂ ಬಹಳಷ್ಟು ಸ್ನೇಹಿತರು. ಇಂಥ ಒಂದು ಫಂಕ್ಷನ್ ಗ್ರಾಂಡ್ ಆಗಿ ನಡಿಬೇಕು ಅನ್ನೋದು ನಮ್ಮ ರಾಜಣ್ಣ ಅವ್ರ ಕನಸು, ಅದನ್ನು ಅವರು ನನಸು ಮಾಡಿದಾರೆ ಎಂದರು.
‘ಫಸ್ಟ್ ಆಫ್ ಆಲ್, ಅವ್ನು ನನ್ನ ತಮ್ಮ ಅನ್ನೋದೇ ನಂಗೆ ತುಂಬಾ ಇಷ್ಟ. ನಾನು ನನ್ ತಮ್ಮನ ತುಂಬಾ ಪ್ರೀತಿಸ್ತೀನಿ.. ಸೋನಲ್ ಕೂಡ ಅಷ್ಟೇ, ತುಂಬಾ ಸಾಫ್ಟ್, ತುಂಬಾ ಹಂಬಲ್. ಅವರಿಬ್ಬರೂ ಒಳ್ಳೇ ಜೋಡಿ… ಅವರಿಬ್ಬರಲ್ಲಿ ಬಹಳಷ್ಟು ಅನ್ಯೋನ್ಯತೆ ಇದೆ ಅಂತಾನೇ ಹೇಳೋಕ ಇಷ್ಟ ಪಡ್ತೀನಿ.. ಇದಕ್ಕೆಲ್ಲಾ ಸೂತ್ರಧಾರ ಆಗಿರೋ ರಾಜಣ್ಣ ಅವ್ರನ್ನ ಕೇಳಿದ್ರೆ ನಿಮ್ಗೆ ಎಲ್ಲಾನೂ ಕರೆಕ್ಟ್ ಆಗಿ ಹೇಳ್ತಾರೆ ಎಂದರು.
ಇನ್ನು ಅಮ್ಮನ ಖುಷಿ ಬಗ್ಗೆ ಪ್ರತ್ಯೇಕವಾಗಿ ಹೇಳ್ಬೇಕಾಗಿಯೇ ಇಲ್ಲ. ಇನ್ನು ದರ್ಶನ್ ಸರ್ ಬಗ್ಗೆ ಹೇಳ್ಭೇಕು ಅಂದ್ರೆ, ನನ್ನ ಹಾಗೂ ದರ್ಶನ್ ಸರ್ ಸಂಬಂಧ ಆಗಿರ್ಬಹುದು, ಅಥವಾ ತಮ್ಮ ತರುಣ್ ಹಾಗೂ ದರ್ಶನ್ ಸರ್ ಸಂಬಂಧ ಆಗಿರ್ಬಹುದು, ಅಥವಾ ನಮ್ಮ ಅಮ್ಮನ ಜೊತೆ ದರ್ಶನ್ ಸಂಬಂಧ ಇರ್ಬಹುದು, ಇವೆಲ್ಲಾ ಇವತ್ತು, ನಿನ್ನೆದು ಅಲ್ಲ.. ದರ್ಶನ್ ಸರ್ ಅವ್ರ ‘ಕರಿಯ’ ಸಿನಿಮಾಗಿಂತ್ಲೂ ಮೊದಲಿನಿಂದ ಇರೋದು. ಅವ್ರು ನಮ್ಮ ಲೈಫ್ನ ಒಂದು ಪಾರ್ಟ್ ಆಗಿದಾರೆ.
ದರ್ಶನ್ ಸರ್ ನಮ್ಮ ಅಮ್ಮಂಗೆ ಮದರ್ ಇಂಡಿಯಾ ಅಂತನೇ ಹೇಳೋದು. ಇವತ್ತು ಅವ್ರಿಗೆ ಹಾಗೆ ಆಗಿರೋದು ತುಂಬಾನೇ ಹರ್ಟ್ ಆಗುತ್ತೆ.. ಅವ್ರು ಈ ಮದುವೆಗೆ ಇದ್ದಿದ್ದರೆ ಆ ಕಥೆನೇ ಬೇರೆ ಇತ್ತು. ನಾವು ಅವ್ರನ್ನ ತುಂಬಾ ಮಿಸ್ ಮಾಡ್ಕೊತಾ ಇದೀವಿ.. ಆದ್ರೆ, ಅವ್ರು ಆದಷ್ಟು ಬೇಗ ಬರ್ತಾರೆ. ನಾವು ಇನ್ನೊಮ್ಮೆಸಮಾರಂಭ ಮಾಡ್ತೀವಿ’ ಎಂದು ನಂದ ಕಿಶೋರ್ ಹೇಳಿದರು.