ನಮ್ಮ ಸುತ್ತಲಿನ ಪ್ರಕೃತಿಯಲ್ಲಿ, ಅನೇಕ ಆಯುರ್ವೇದ ಗಿಡಮೂಲಿಕೆಗಳು ಮತ್ತು ಆರೋಗ್ಯಕರ ಪದಾರ್ಥಗಳು ನೈಸರ್ಗಿಕವಾಗಿ ಲಭ್ಯವಿವೆ. ಆದರೆ ದುರದೃಷ್ಟವಶಾತ್, ನಾವು ಅವರನ್ನು ಗುರುತಿಸುವುದಿಲ್ಲ. ಏಕೆಂದರೆ, ಅವುಗಳ ಉಪಯೋಗ ಮತ್ತು ಪ್ರಯೋಜನಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿಲ್ಲ. ಅಂತಹದ್ದೇ ಆರೋಗ್ಯಕರ ವಸ್ತಗಳಲ್ಲಿ ಒಂದಾದ ಶುಂಠಿಯ ಪ್ರಯೋಜನಗಳನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೊಣ ಬನ್ನಿ..
ಲಾಡ್ಜ್ ನಲ್ಲಿ ಮಲಗೋ ಮುನ್ನ ಈ ಕೆಲಸ ಮೊದಲು ಮಾಡಿ: ಇಲ್ಲಾಂದ್ರೆ ಅಪಾಯ ಗ್ಯಾರಂಟಿ!
ವಾಯ್ಸ್:- ತಾಜಾ ಶುಂಠಿಯನ್ನು ಮಾತ್ರ ಅಡುಗೆ ಮತ್ತು ಚಹಾದಲ್ಲಿ ಬಳಸಲಾಗುತ್ತದೆ. ಆದರೆ, ಅರಿವಿನ ಕೊರತೆಯಿಂದ ನಾವು ಒಣಗಿದ ಶುಂಠಿಯನ್ನು ಎಸೆಯುತ್ತೇವೆ. ಆದರೆ ಹಾಗೆ ಮಾಡಬೇಡಿ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ, ಸಂಪೂರ್ಣವಾಗಿ ಒಣಗಿದ ಶುಂಠಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ಪುಡಿಯನ್ನು ಕಡ, ಚೂರಣ ರೂಪದಲ್ಲಿ ತೆಗೆದುಕೊಳ್ಳಬಹುದು. ಇದರಿಂದ ಆಗುವ ಆರೋಗ್ಯ ಪ್ರಯೋಜನಗಳಿವೆ.
ಒಣ ಶುಂಠಿ ಪುಡಿ ಗರ್ಭಿಣಿ ಮಹಿಳೆಯರಿಗೆ ವಾಕರಿಕೆ ಮತ್ತು ಬೆಳಗಿನ ಬೇನೆಯನ್ನು ನಿವಾರಿಸಲು ತುಂಬಾ ಉಪಯುಕ್ತವಾಗಿದೆ. ಏಕೆಂದರೆ, ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಅರ್ಧ ಚಮಚ ಶುಂಠಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಬೆಳಿಗ್ಗೆ ಕುಡಿಯಿರಿ. ಸಿಹಿ ರುಚಿಗೆ ಜೇನುತುಪ್ಪ ಸೇರಿಸಿ. ಇದು ಬೆಳಗಿನ ಬೇನೆ ಮತ್ತು ವಾಕರಿಕೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ
ಶುಂಠಿ ದೀರ್ಘಕಾಲದ ಅಜೀರ್ಣದಿಂದ ಉಂಟಾಗುವ ಹೊಟ್ಟೆಯ ಅಸ್ವಸ್ಥತೆ ಮತ್ತು ನೋವಿನಿಂದ ನಿಮ್ಮನ್ನು ನಿವಾರಿಸುತ್ತದೆ. ನಿಮ್ಮ ಊಟಕ್ಕೆ ಮುಂಚಿತವಾಗಿ ಒಣ ಶುಂಠಿಯ ಪುಡಿಯನ್ನು ನೀವು ತೆಗೆದುಕೊಂಡರೆ, ಅದು ಹೊಟ್ಟೆಯನ್ನು 50 ಪ್ರತಿಶತದಷ್ಟು ಖಾಲಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಮಟ್ಟಗಳು ಮಾರಣಾಂತಿಕ ಹೃದಯ ಕಾಯಿಲೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಶುಂಠಿ ಪುಡಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ತಾಜಾ ಶುಂಠಿಯ ಸೇವನೆಯಿಂದ ದೇಹದ ಉಷ್ಣತೆಯನ್ನು ಕಡಿಮೆಯಾಗುತ್ತದೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಬಿಸಿ ಚಹಾದೊಂದಿಗೆ ಒಟ್ಟಿಗೆ ತೆಗೆದುಕೊಳ್ಳಬೇಕು. ಶುಂಠಿಯು ಶೀತ, ಕೆಮ್ಮು ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಬೆವರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮೈಗ್ರೇನ್ ನೋವಿಗೆ ಹಸಿ ಶುಂಠಿ ಸೇವನೆ ತುಂಬಾ ಪ್ರಯೋಜನಕಾರಿ ಆಗಿದ್ದು, ಮೈಗ್ರೇನ್ ಇರುವವರು ಪ್ರತಿದಿನ ಹಸಿ ಶುಂಠಿಯನ್ನು ಸೇವಿಸಬೇಕು. ದಣಿವು ನಿವಾರಣೆಗೆ ಶುಂಠಿ ಸೇವನೆ ಉತ್ತಮವಾಗಿದೆ.
ಶುಂಠಿಯಲ್ಲಿ ಆಂಟಿಹಿಸ್ಟಾಮೈನ್ ಗುಣಗಳು ಇವೆ. ಹೀಗಾಗಿ ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲ್ಲದೆ ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣವು ಅಸ್ತಮಾವನ್ನು ಗುಣಪಡಿಸಲು ಸಹಾಯಕವಾಗಿದೆ
ಇನ್ನೂ ಶುಂಠಿಯು ಪೋಷಕಾಂಶಗಳ ನಿಧಿಯಾಗಿದೆ. ಇದು ರುಚಿಕರ ಹಾಗೂ ಆರೋಗ್ಯ ಪೂರ್ಣ. ಆಯುರ್ವೇದದಲ್ಲಿ ಇದನ್ನು ಔಷಧ ತಯಾರಿಸಲು ಮತ್ತು ಮಸಾಲೆಯಾಗಿಯೂ ಬಳಸಲಾಗುತ್ತದೆ. ಇದು ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳಲ್ಲಿ ಸಮೃದ್ಧವಾಗಿದ್ದು, ಆಹಾರದಲ್ಲಿ ಸೇರಿಸುವ ಮೂಲಕ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು.
ಶುಂಠಿ ಚಹಾವು ದೇಹದ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ.
ಪ್ರತಿರಕ್ಷಣಾ ವ್ಯವಸ್ಥೆ: ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಶುಂಠಿ ಪಾನೀಯಗಳನ್ನು ಕುಡಿಯಬಹುದು, ಇದು ನಿಮ್ಮ ಆಯಾಸವನ್ನು ತ್ವರಿತವಾಗಿ ನಿವಾರಿಸುತ್ತದೆ. ಶುಂಠಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೋಂಕು ನಿವಾರಣೆಗೆ ನೆರವಾಗುವುದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು, ಇದು ಉತ್ತಮ.
ಜೀರ್ಣಕ್ರಿಯೆ: ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಶುಂಠಿ. ಅಜೀರ್ಣ, ಮಲಬದ್ಧತೆ, ಊತ ಇತ್ಯಾದಿ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ಶುಂಠಿಯು ನಿಮಗೆ ತುಂಬಾ ಪ್ರಯೋಜನಕಾರಿ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ತೂಕ ಕಡಿಮೆ: ಶುಂಠಿಯಲ್ಲಿ ಉರಿಯೂತ ನಿವಾರಕ, ಆಯಂಟಿ ಆಕ್ಸಿಡೆಂಟ್ ಗುಣಗಳಿವೆ. ಇದು ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಗುಣಲಕ್ಷಣಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ,
ತೂಕ ಕಡಿಮೆ: ಶುಂಠಿಯಲ್ಲಿ ಉರಿಯೂತ ನಿವಾರಕ, ಆಯಂಟಿ ಆಕ್ಸಿಡೆಂಟ್ ಗುಣಗಳಿವೆ. ಇದು ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಗುಣಲಕ್ಷಣಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ,
ರಕ್ತ ಪರಿಚಲನೆ: ಶುಂಠಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಅಮೈನೋ ಆಮ್ಲಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇವು ಹೃದಯ ಸಂಬಂಧಿ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯು ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಇಷ್ಟೆಲ್ಲಾ ಪ್ರಯೋಜನಗಳು ಶುಂಠಿಯಲ್ಲಿ ಇರುವುದು ಇದು ಒಂದು ಉತ್ತಮ ಆಯುರ್ವೇದಿಕ ಔಷಧಿ ಎಂದು ಹೇಳಲಾಗಿದೆ…
ನೀವು ಶುಂಠಿ ಚಹಾ ಪ್ರಿಯರಾಗಿದ್ದರೆ, ಅಡುಗೆಯಲ್ಲಿ ಶುಂಠಿಯನ್ನು ಯಥೇಚ್ಛವಾಗಿ ಬಳಸುತ್ತಿದ್ದರೆ ವೈದ್ಯರ ಬಳಿ ಹೋಗುವ ಪ್ರಮೇಯ ಬರುವುದಿಲ್ಲ. ಏಕೆಂದರೆ ನಾವು ದಿನನಿತ್ಯ ಬಳಸುವ ಶುಂಠಿಯಿಂದ ಒಂದಲ್ಲ, ಎರಡಲ್ಲ, ನೂರಾರು ಪ್ರಯೋಜನಗಳಿವೆ. ಶುಂಠಿಯಲ್ಲಿರುವ ಔಷಧೀಯ ಗುಣಗಳು ಕ್ಯಾನ್ಸರ್’ನಂತಹ ಹೆಮ್ಮಾರಿಯನ್ನೂ ಹೊಡೆದೋಡಿಸುವ ಶಕ್ತಿ ಹೊಂದಿದೆ ಅದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
ಶುಂಠಿಯನ್ನು ಹೆಚ್ಚಾಗಿ ಚೀನಾ ಮತ್ತು ಭಾರತದಲ್ಲಿ ಕಾಣಬಹುದಾದರೂ, ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತಿದೆ. ಆಯುರ್ವೇದದಲ್ಲಿಯೂ ಇದನ್ನು ಔಷಧಿಯಾಗಿ ಬಳಸುತ್ತಾರೆ. 4000 ವರ್ಷಗಳಿಂದ ಮಸಾಲೆ ಪದಾರ್ಥವಾಗಿ ಶುಂಠಿಯನ್ನು ಬಳಸಲಾಗುತ್ತಿದೆ. ಆದರೆ ಇದರ ಔಷಧೀಯ ಗುಣಗಳನ್ನು ಸುಮಾರು 2000 ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು. ವಾಕರಿಕೆ, ಹಸಿವು ಕಡಿಮೆಯಾಗುವುದು ಮತ್ತು ವಾಂತಿ ಬಂತೆಂದರೆ ಬಹುತೇಕರು ಬಳಸುವುದು ಶುಂಠಿಯನ್ನೇ. ಕ್ಯಾನ್ಸರ್ ಚಿಕಿತ್ಸೆ, ಉದರಶೂಲೆ, ಹೊಟ್ಟೆ ಉಬ್ಬರ, ವಾಯು, ಮಾರ್ನಿಂಗ್ ಸಿಕ್’ನೆಸ್’ನಿಂದ ಉಂಟಾಗುವ ವಾಕರಿಕೆಗೆ ಔಷಧಿಯಾಗಿ ಶುಂಠಿಯನ್ನು ಬಳಸುವುದು ರೂಢಿ. ಕೆಲವರು ಹಸಿ ಶುಂಠಿಯನ್ನು ಬಳಸಿದರೆ, ಇನ್ನು ಕೆಲವರು ಒಣಗಿಸಿ ಪುಡಿ ಮಾಡಿ ಕೆಲವು ಖಾದ್ಯಗಳಿಗೆ ಸೇರಿಸಿ ಬಳಸುತ್ತಾರೆ. ಈಗಲೂ ಹಳ್ಳಿ ಮನೆಗಳಲ್ಲಿ ಶೀತ ಮತ್ತು ಜ್ವರ ಬಂದರೆ ಶುಂಠಿ ಚಹಾ ಕುಡಿಯುವುದು ಮಾಮೂಲು. ಇತ್ತೀಚಿನ ದಿನಗಳಲ್ಲಿಇದನ್ನು ಪಾಶ್ಚಾತ್ಯರೂ ತಮ್ಮ ಅಡುಗೆಯಲ್ಲಿ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಜಿಂಜರ್ ಅಲೆ, ಜಿಂಜರ್ ಸ್ನ್ಯಾಪ್ಸ್, ಜಿಂಜರ್ ಬ್ರೆಡ್, ಜಿಂಜರ್ ಬಿಸ್ಕತ್ತು ಮತ್ತು ಜಿಂಜರ್ ಕೇಕ್ ನಂತಹ ಸಿಹಿ ಆಹಾರಗಳಲ್ಲಿಯೂ ಬಳಸಲಾಗುತ್ತಿದೆ.
ಶುಂಠಿಯಲ್ಲಿ ಆಂಟಿಹಿಸ್ಟಾಮೈನ್ ಗುಣಗಳು ಇರುವುದರಿಂದ ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಶತ ಶತಮಾನಗಳಿಂದ ಇದನ್ನು ಶೀತ ಮತ್ತು ಜ್ವರಕ್ಕೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಒಂದು ಟೀ ಚಮಚ ಶುಂಠಿ ರಸ ಮತ್ತು ಜೇನುತುಪ್ಪವು ಶೀತಕ್ಕೆ ಸಂಬಂಧಿಸಿದ ನಿರಂತರ ಕೆಮ್ಮು ಮತ್ತು ಗಂಟಲಿನ ನೋವು ನಿವಾರಣೆಗೆ ಪರಿಣಾಮಕಾರಿ ಔಷಧಿಯಾಗಿದೆ. ಗಂಟಲು ಮತ್ತು ಮೂಗು ಕಟ್ಟಿಕೊಂಡಿದ್ದರೆ ತೊಡೆದುಹಾಕಲು ಶುಂಠಿ ಚಹಾ ಸಹಾಯ ಮಾಡುತ್ತದೆ. ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣವು ಅಸ್ತಮಾವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹೊಟ್ಟೆ ಜ್ವರ ಅಥವಾ ಫುಡ್ ಪಾಯಿಸನ್’ಗೆ ಚಿಕಿತ್ಸೆ ನೀಡಲು ಶುಂಠಿ ಸಹಕಾರಿಯಾಗಿದೆ.
ಶುಂಠಿಯನ್ನು ಜೀರ್ಣಕ್ರಿಯೆಗೆ ಅತ್ಯುತ್ತಮ ಮದ್ದು ಎಂದು ಪರಿಗಣಿಸಲಾಗುತ್ತದೆ. ಶುಂಠಿ ಸೇವನೆಯಿಂದ ಪಿತ್ತಕೋಶದಿಂದ ಪಿತ್ತ ಬಿಡುಗಡೆ ಮಾಡಲು ಉತ್ತೇಜಿಸುತ್ತದೆ. ಅಷ್ಟೇ ಅಲ್ಲ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ನಾವು ಸೇವಿಸುವ ಆಹಾರದಿಂದಪೋಷಕಾಂಶಗಳನ್ನು ಒಟ್ಟುಗೂಡಿಸಲು ಪ್ರೋತ್ಸಾಹಿಸುತ್ತದೆ. ಇದರ ಜೊತೆಗೆ ಶುಂಠಿಯು ಹೊಟ್ಟೆ ಸೆಳೆತ, ಅತಿಸಾರ ಮತ್ತು ಜಠರದುರಿತದಿಂದ ಉಂಟಾಗುವ ಉಬ್ಬುವಿಕೆಯಿಂದಲೂ ಪರಿಹಾರ ನೀಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಲು ನಾವು ಶುಂಠಿಯನ್ನು ಚಹಾ ಅಥವಾ ಸಪ್ಲಿಮೆಂಟ್ಸ್ ರೂಪದಲ್ಲಿ ತೆಗೆದುಕೊಳ್ಳಬಹುದು.
ಹಲವಾರು ಅಧ್ಯಯನಗಳು ಶ್ವಾಸಕೋಶ, ಅಂಡಾಶಯ, ಪ್ರಾಸ್ಟೇಟ್, ಸ್ತನ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಶುಂಠಿ ಸಹಾಯ ಮಾಡುತ್ತದೆ ಎಂದು ಹೇಳಿವೆ. ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಶುಂಠಿ ಪುಡಿ ಅಂಡಾಶಯದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಕಂಡುಹಿಡಿದಿದ್ದಾರೆ. ಇದು ಕ್ಯಾನ್ಸರ್ ಪ್ರಚೋದಿಸುವ ಕೋಶಗಳನ್ನು ಕೊಲ್ಲುವ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್’ಗೆ ಚಿಕಿತ್ಸೆ ನೀಡುತ್ತದೆ.
ಶುಂಠಿಯಲ್ಲಿ ಜಿಂಜರಾಲ್ ಇದೆ, ಇದು ಮೆಟಾಸ್ಟಾಟಿಕ್ ವಿರೋಧಿ ಗುಣಗಳನ್ನು ಹೊಂದಿದ್ದು, ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್’ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಶುಂಠಿಯ ಬೇರು ಕ್ಯಾನ್ಸರ್ ತಡೆಗಟ್ಟುವುದಲ್ಲದೆ, ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಏಕೆಂದರೆ ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ.
ಕೀಮೋಥೆರಪಿಯಿಂದ ಉಂಟಾಗುವ ವಾಕರಿಕೆ ಕಡಿಮೆ ಮಾಡಲು ಶುಂಠಿ ಬೇರಿನ ಸಪ್ಲಿಮೆಂಟ್’ಗಳು ಸಹಾಯ ಮಾಡುತ್ತವೆ. ಕೀಮೋಥೆರಪಿ ವಿಕಿರಣಗಳಿಗೆ ಒಡ್ಡಿಕೊಂಡ 70 ಪ್ರತಿಶತಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ವಾಂತಿ ಮತ್ತು ವಾಕರಿಕೆ ಅನುಭವಿಸುತ್ತಾರೆ ಎಂದು ಫ್ಲೋರಿಡಾದ ಅಮೇರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ ಸಭೆಯ ಪ್ರಮುಖ ಸಂಶೋಧಕರಾದ ಡಾ. ಜೂಲಿ ರಯಾನ್ ಹೇಳಿದ್ದಾರೆ. ಕೀಮೋಥೆರಪಿಗೆ ಮೊದಲು ಶುಂಠಿ ಬೇರಿನ ಸಪ್ಲಿಮೆಂಟ್’ಗಳು ಅಥವಾ ರಸವನ್ನು ಸೇವಿಸುವುದರಿಂದ ವಾಕರಿಕೆ ಮತ್ತು ವಾಂತಿ ಲಕ್ಷಣಗಳು ಕಡಿಮೆಯಾಗುತ್ತದೆ.
ಮಾರ್ನಿಂಗ್ ಸಿಕ್ ನೆಸ್’ಗೆ ಚಿಕಿತ್ಸೆ ನೀಡಲು ಶುಂಠಿಯಲ್ಲಿರುವ ವಿಟಮಿನ್ ಬಿ 6 ಪರಿಣಾಮಕಾರಿ ಎಂದು ಸಂಶೋಧನೆ ಸಾಬೀತುಪಡಿಸಿದೆ. ಹೀಗಾಗಿ, ಮಾರ್ನಿಂಗ್ ಸಿಕ್ ನೆಸ್ ತಡೆಗಟ್ಟಲು ಗರ್ಭಿಣಿ ಮಹಿಳೆಯರಿಗೆ ಇದನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಶುಂಠಿಯು ಮೈಗ್ರೇನ್ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ. ಶುಂಠಿ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ಮೈಗ್ರೇನ್ ನಿಂದ ಪರಿಹಾರ ಸಿಗುತ್ತದೆ.
2 ವರ್ಷದೊಳಗಿನ ಮಕ್ಕಳಿಗೆ ಶುಂಠಿಯನ್ನು ನೀಡಬಾರದು. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ವಾಕರಿಕೆ, ತಲೆನೋವು ಮತ್ತು ಹೊಟ್ಟೆಯ ಸೆಳೆತಕ್ಕೆ ನೈಸರ್ಗಿಕ ಪರಿಹಾರವಾಗಿ ಶುಂಠಿಯನ್ನು ತೆಗೆದುಕೊಳ್ಳಬಹುದು. ಆದರೂ ನೀವು ವೈದ್ಯರಿಗೆ ಕೇಳಿ, ನಂತರ ಸೇವಿಸುವುದು ಒಳ್ಳೆಯದು. ವಯಸ್ಕರು ದಿನಕ್ಕೆ 4 ಗ್ರಾಂಗಿಂತ ಹೆಚ್ಚು ಶುಂಠಿಯನ್ನು ತೆಗೆದುಕೊಳ್ಳಬಾರದು. ಗರ್ಭಿಣಿಯರು ದಿನಕ್ಕೆ 1 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ತೆಗೆದುಕೊಳ್ಳಬಾರದು ಎಂಬುದನ್ನು ಸಹ ನೆನಪಿನಲ್ಲಿರಿಸಿಕೊಳ್ಳಬೇಕು.
ಕೆಲವು ಅಧ್ಯಯನಗಳಲ್ಲಿ, ಗರ್ಭಧಾರಣೆಯಿಂದ ಉಂಟಾಗುವ ವಾಕರಿಕೆಗೆ ಔಷಧಿಯಾಗಿ ದಿನಕ್ಕೆ 650 ಮಿಲಿಗ್ರಾಂನಿಂದ 1 ಗ್ರಾಂ ವರೆಗೆ ಶುಂಠಿ ಬಳಸಲಾಗುತ್ತದೆ. ನೀವು ಗರ್ಭಿಣಿಯಾಗಿದ್ದಾಗ ಶುಂಠಿಯನ್ನು ತೆಗೆದುಕೊಳ್ಳುವುದು ಸುರಕ್ಷಿತವೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದಾಗಿದೆ.
ಇನ್ನೂ ಶುಂಠಿಯು ತಾನು ನೀಡುವ ಎಲ್ಲಾ ಆರೋಗ್ಯ ಪ್ರಯೋಜನಗಳಿಂದಾಗಿ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಶುಂಠಿಯು ಚಲಿಗಾಲದ ಅತ್ಯಗತ್ಯ ಆಹಾರವಾಗಿದೆ. ಏಕೆಂದರೆ ಇದು ನಿಮ್ಮನ್ನು ನೈಸರ್ಗಿಕವಾಗಿ ಬೆಚ್ಚಗಿಡುತ್ತದೆ. ಚಲಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲೆಬೇಕು ಎಂಬುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ. ಪ್ರತಿ ಭಾರತೀಯ ಅಡುಗೆ ಮನೆಗಳಲ್ಲಿ ಶುಂಠಿಯು ಇದ್ದೇ ಇರುತ್ತದೆ. ವಿಶೇಷವಾಗಿ ಚಹಾಕ್ಕೆ ಬಲವಾದ ಪರಿಮಳವನ್ನು ನೀಡಲು ಇದನ್ನು ಸೇರಿಸಲಾಗುತ್ತದೆ. ಶುಂಠಿಯಲ್ಲಿ ವಿವಿಧ ಆರೋಗ್ಯ ಪ್ರಯೋಜನಗಳಿವೆ. ಇದು ಪ್ರಬಲವಾದ ಚಿಕಿತ್ಸಕಾ ಗುಣಗಳನ್ನು ಹೊಂದಿರುವುದರಿಂದ ಶುಂಠಿಯನ್ನು ಸಾಮಾನ್ಯವಾಗಿ ಚಳಿಗಾಲದ ಆಹಾರವೆಂದು ಪರಿಗಣಿಸಲಾಗುತ್ತದೆ
ಚಳಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು 5 ಕಾರಣಗಳಿವೆ. ಮೊದಲನೆಯದಾಗಿ
*1. ಕೀಲು ನೋವುಗಳನ್ನು ನಿವಾರಿಸುತ್ತದೆ:
ಶುಂಠಿಯು ಉರಿಯೂತ ಶಮನ ಮಾಡುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧೀವಾತ ರೋಗಲಕ್ಷಣಗಳನ್ನು ನಿರ್ವಹಿಸಲು ಇದು ಉಪಯುಕ್ತವಾಗಬಹುದು. ಶುಂಠಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಅದು ಸಹಾಯ ಮಾಡುತ್ತದೆ. ಆದರೆ ನಿಮ್ಮ ನೋವು ಇದರಿಂದ ಬೇಗನೆ ಕಮ್ಮಿಯಾಗುವುದಿಲ್ಲ ಆದರೆ ನೀವು ಅದನ್ನು ಚರ್ಮಕ್ಕೆ ನೇರವಾಗಿ ಅನ್ವಯಿಸಿದರೆ, ಅದು ಕ್ರಮೇಣ ನಿಮ್ಮ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ
ಎರಡನೆಯದಾಗಿ
*2. ಶೀತ ಮತ್ತು ಜ್ವರದಂತಹ ರೋಗಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ:
ತಾಪಮಾನ ಕಡಿಮೆಯಾದ ತಕ್ಷಣ, ಸೀನುವುದು ಮತ್ತು ಕೆಮ್ಮ ಬರುವಂತಹದ್ದು ಸಾಮಾನ್ಯವಾಗಿದೆ. ಏಕೆಂದರೆ ಚಳಿಗಾಲದ ತಿಂಗಳುಗಳು ಜ್ವರ ಮತ್ತು ನೆಗಡಿಯೊಂದಿಗೆ ಬರುವ ಸಾಧ್ಯತೆ ಹೆಚ್ಚು. ನೆಗಡಿ ಮತ್ತು ಜ್ವರಕ್ಕೆ ಶುಂಠಿಯನ್ನು ಬಹಳ ಹಿಂದಿನಿಂದಲೂ ಮನೆಮದ್ದಾಗಿ ಬಳಸಲಾಗುತ್ತಿದೆ. ತಾಜಾ ಶುಂಠಿ ರಸ ಅಥವಾ ತುರಿದ ತಾಜಾ ಶುಂಠಿಯನ್ನು ವಿವಿಧ ಭಕ್ಷ್ಯ ಮತ್ತು ಪಾನೀಯಗಳಲ್ಲಿ ಸೇರಿಸುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಮೂರನೇಯದಾಗಿ..
*3. ಜೀರ್ಣಕ್ರಿಯೆಗೆ ಸಹಯ ಮಾಡುತ್ತದೆ:
ಜಿಂಜರಾಲ್ ನೈಸರ್ಗಿಕವಾಗಿ ಶುಂಠಿಯಲ್ಲಿ ಕಂಡುಬರುವ ಒಂದು ಅಂಶವಾಗಿದೆ. ಹೆಚ್ಚಿನ ಜನರು ಇದನ್ನು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಸಲುವಾಗಿ ಬಳಸುತ್ತಾರೆ.
ನಾಲ್ಕನೆಯದಾಗಿ:
*4. ರಕ್ತನಿಬಿಡತೆಯನ್ನು ನಿವಾರಿಸುತ್ತದೆ:
ಚಳಿಗಾಲದಲ್ಲಿ ಅನೇಕ ಜನರು ರಕ್ತನಿಬಿಡತೆ (ಕಂಜೆಸ್ಶನ್) ಸಮಸ್ಯೆಯಿಂದ ಬಳಲುತ್ತಾರೆ. ಉರಿಯೂತ ಮತ್ತು ರಕ್ತನಿಬಿಡತೆ ಎರಡನ್ನೂ ಶುಂಠಿಯಿಂದ ನಿವಾರಿಸಬಹುದು. ನಿಮಗೆ ಶೀತ ಅಥವಾ ಕೆಮ್ಮು ಇದ್ದರೆ ಅರ್ಧ ಚಮಚ ಜೇನು ತುಪ್ಪಕ್ಕೆ ಕೆಲವು ಹನಿ ಸೇರಿಸಿ ಮಲಗುವ ಮುನ್ನ ಇದನ್ನು ತೆಗೆದುಕೊಳ್ಳಿ. ಇದನ್ನು ಸೇವನೆ ಮಾಡುವುದರಿಂದ ಕೇವಲ ಒಂದು ದಿನದಲ್ಲೇ ಕೆಮ್ಮು ಶಮನವಾಗುತ್ತದೆ
ಐದನೇಯದಾಗಿ
*5. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ನಿಮ್ಮ ಕೆಟ್ಟ ಅಥವಾ ಐಆಐ ಕೊಲೆಸ್ಟಾಲ್ ಮಟ್ಟವನ್ನು ಶುಂಠಿಯ ದೈನಂದಿನ ಸೇವನೆಯಿಂದ ನಿಯಂತ್ರಿಸಬಹುದಾಗಿದೆ.
ಒಟ್ನಲ್ಲಿ ಶುಂಠಿಗೆ ಮಾರಕ ಕಾಯಿಲೆ ತಡೆಗಟ್ಟುವ ಶಕ್ತಿ ಇದ್ದು, ಇದರ ಸೇವನೆ ನಮ್ಮ ಆರೋಗ್ಯಕ್ಕೆ ಹಾಗೂ ದೇಹಕ್ಕೆ ತುಂಬಾ ಅನುಕೂಲವಾಗಿದೆ