ಹೊಟೇಲ್ ನಲ್ಲಿ ರೂಮ್ ಬುಕ್ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ಅನೇಕ ಹೋಟೆಲ್ಗಳು ಕೊಠಡಿಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ ಹಲವಾರು ಪ್ರಕರಣಗಳಿವೆ. ಹೀಗಾಗಿ ಅಲ್ಲಿ ಹಾಲ್ಟ್ ಆಗುವ ಜನರು ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಅದೇ ರೀತಿ ಇಲ್ಲೊಂದು ಮಹಿಳೆ ತನ್ನ ಹೋಟೆಲ್ನಲ್ಲಿ ತಂಗಿದ್ದ ಸಂದರ್ಭದಲ್ಲಾದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
ಲಂಕಾ ಪ್ರವಾಸದಲ್ಲಿ ವಿರಾಟ್ ಬ್ಯಾಟಿಂಗ್ ವಿಫಲ: ದಿನೇಶ್ ಕಾರ್ತಿಕ್ ಹೇಳಿದ್ದೇನು!?
ಸಾಮಾಜಿಕ ಮಾಧ್ಯಮದಲ್ಲಿ, ಡಚ್ ಏರ್ಲೈನ್ನ ಗಗನಸಖಿಯೊಬ್ಬರು ಜನರಿಗೆ ಸಲಹೆಯೊಂದು ಹೇಳಿದರು. ನೀವು ಹೋಟೆಲ್ ರೂಮ್ಗಳಲ್ಲಿ ಹಾಲ್ಟ್ ಆದಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ, ನಿಮ್ಮ ಹಾಸಿಗೆಯ ಕೆಳಗೆ ಮಲಗುವ ಮುನ್ನ ನೀರಿನ ಬಾಟಲಿಯನ್ನು ಎಸೆಯಿರಿ ಎಂದು ಹೇಳಿದ್ದಾರೆ.
ನೀವು ಮಾಡುವ ಈ ಕೆಲಸ ನಿಮ್ಮನ್ನು ಹೆಚ್ಚು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ ಹಾಸಿಗೆಯ ಕೆಳಗೆ ಬಾಟಲಿಯನ್ನು ಎಸೆಯುವುದಕ್ಕೂ, ಸುರಕ್ಷತೆಗೂ ಏನು ಸಂಬಂಧ ಎಂದು ನೀವು ಈಗ ಯೋಚಿಸುತ್ತಿರಬಹುದು? ಇದು ನಿಮ್ಮನ್ನು ಹೇಗೆ ರಕ್ಷಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಈ ಬಗ್ಗೆ ಫ್ಲೈಟ್ ಅಟೆಂಡೆಂಟ್ ಎಸ್ತರ್ ಎಂಬವರು ವಿವರವಾದ ಮಾಹಿತಿ ನೀಡಿದ್ದಾರೆ. ಕೆಲಸದ ನಿಮಿತ್ತ ಆಗಾಗ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಾಳೆ ಮತ್ತು ಸದಾ ತನ್ನ ಹಾಸಿಗೆಯ ಕೆಳಗೆ ನೀರಿನ ಬಾಟಲಿಯನ್ನು ಎಸೆಯುತ್ತಾರಂತೆ ಇವರು. ಇದರಿಂದ ಹೋಟೆಲ್ನ ರಹಸ್ಯವನ್ನು ತಿಳಿಯಬಹುದು ಎನ್ನುತ್ತಾರೆ ಈ ಫ್ಲೈಟ್ ಅಟೆಂಡೆಂಟ್
ಹಾಸಿಗೆಯ ಕೆಳಗೆ ನೀರಿನ ಬಾಟಲಿ ಇಟ್ಟರೆ, ಹಾಸಿಗೆಯ ಕೆಳಗೆ ಯಾರಾದರೂ ಅಡಗಿ ಕುಳಿತಿದ್ದರೆ ಗೊತ್ತಾಗುತ್ತದೆ. ಕೆಳಗೆ ಯಾರೂ ಇಲ್ಲದಿದ್ದರೆ, ನೀರಿನ ಬಾಟಲಿಯು ಇನ್ನೊಂದು ಬದಿಯಿಂದ ಹೊರಬರುತ್ತದೆ. ಇಲ್ಲದಿದ್ದರೆ, ತಕ್ಷಣ ಕೊಠಡಿಯಿಂದ ಓಡಿಹೋಗಿ. ಏಕೆಂದರೆ ನಿಮ್ಮ ಹಾಸಿಗೆಯ ಕೆಳಗೆ ಯಾರಾದರೂ ಅಡಗಿಕೊಂಡಿದ್ದಾರೆ ಎಂದರ್ಥ.
ಇದಲ್ಲದೆ, ಎಸ್ತರ್ ಇನ್ನೂ ಅನೇಕ ತಂತ್ರಗಳನ್ನು ಹಂಚಿಕೊಂಡಿದ್ದಾರೆ.