ರಾಯಚೂರು:- ರಾಯಚೂರು ರೈಲ್ವೆ ನಿಲ್ದಾಣದಲ್ಲಿ ರೈಲಿನ ಕೆಳಗೆ ಹಸು ಸಿಲುಕಿ ನರಳಾಡಿರುವಂತಹ ಘಟನೆ ಜರುಗಿದೆ.
ರೈಲ್ವೆ ಸಿಬ್ಬಂದಿ, ರೈಲ್ವೆ ಪೊಲೀಸರು ಹಾಗೂ ಸ್ಥಳೀಯರಿಂದ ಹಸು ರಕ್ಷಣೆ ಮಾಡಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆ ರಕ್ಷಣೆಗೊಳಗಾದ ಕೆಲವೇ ಕ್ಷಣಗಳಲ್ಲಿ ಹಸು ಮೃತಪಟ್ಟಿದೆ.
ಅಕ್ರಮ ಚಟುವಟಿಕೆಗೆ ಖಾಕಿ ಬ್ರೇಕ್: ಒಂದು ತಿಂಗಳಲ್ಲಿ ಬಂದ್ ಆದ ಕ್ಲಬ್ ಗಳಷ್ಟು ಗೊತ್ತಾ!?
ಘಟನೆಯಿಂದಾಗಿ ಮುಂಬೈ- ಚೆನ್ನೈ ಎಕ್ಸ್ಪ್ರೆಸ್ ಮಾರ್ಗದ ರೈಲು ಕಳೆದ ಒಂದು ಗಂಟೆಯಿಂದ ರಾಯಚೂರು ರೈಲ್ವೆ ನಿಲ್ದಾಣದಲ್ಲಿಯೇ ನಿಂತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.