ಉತ್ತರ ಕನ್ನಡ:- ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಖಾಕಿ ಬ್ರೇಕ್ ಹಾಕಿದ್ದು, ಒಂದೇ ತಿಂಗಳಲ್ಲಿ ಬರೋಬ್ಬರಿ 25 ಕ್ಲಬ್ಗಳು ಬಂದ್ ಆಗಿದೆ.
ಪಿಜಿಯಲ್ಲಿ ನೇಣು ಬಿಗಿದು ಬಿಎಸ್ಸಿ ಸ್ಟೂಡೆಂಟ್ ಸೂಸೈಡ್: ಡೆತ್ ನೋಟ್ ನಲ್ಲಿ ಏನಿದೆ ಗೊತ್ತಾ!?
ಒಂದೇ ತಿಂಗಳಲ್ಲಿ ವಿವಿಧ ಪ್ರಕರಣಗಳಡಿ 93 ಜನರ ಮೇಲೆ ಕೇಸ್ ದಾಖಲಿಸಿದೆ. ಜಿಲ್ಲೆಯ ಕ್ಲಬ್ಗಳು ,ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದೆ. ಜೊತೆಗೆ ವಿದ್ಯಾರ್ಥಿಗಳು, ಜನರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದೆ.
ಜಿಲ್ಲೆಯಲ್ಲಿ ಸರಬರಾಜಾಗುತಿದ್ದ 14.73 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ 1,78,700 ರೂ ಗಳಾಗಿದ್ದು 23 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಓಸಿ, ಮಟ್ಕಾ ನಡೆಸುತಿದ್ದ 23 ಪ್ರದೇಶಗಳಲ್ಲಿ ದಾಳಿ ನಡೆಸಿ 28 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 35,700 ರೂ. ವಶಕ್ಕೆ ಪಡೆಯಲಾಗಿದೆ. ಇನ್ನು ಗ್ಯಾಂಬಲಿಂಗ್ ನಡೆಸುತ್ತಿದ್ದ ಆರು ಪ್ರಕರಣದಲ್ಲಿ 33 ಜನರನ್ನು ಬಂಧಿಸಿ 48,670 ರೂಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ 25 ಅಕ್ರಮ ಚಟುವಟಿಕೆ ನಡೆಯುತಿದ್ದ ಕ್ಲಬ್ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಲಾಗಿದೆ.
ಇನ್ನು ಗೋವಾದಿಂದ ಅಕ್ರಮವಾಗಿ ತರುತಿದ್ದ 27,289 ಮೌಲ್ಯದ 78.600 ಲೀಟರ್ ಮದ್ಯ ವಶಪಡಿಸಿಕೊಂಡು 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಅಕ್ರಮವಾಗಿ ಬೇರೆಡೆ ತೆರಳುತಿದ್ದ 1,77,888 ಮೌಲ್ಯದ ಮರಳನ್ನು ವಶಕ್ಕೆ ಪಡೆದು ಎಂಟು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸ್ ಇಲಾಖೆ ಆಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡುತ್ತಿದ್ದಂತೆ, ಜಿಲ್ಲೆಯ ಕೆಲ ರಾಜಕೀಯ ನಾಯಕರ ಕಣ್ಣು ಕೆಂಪಾಗಿಸಿದೆ.