ಬೆಂಗಳೂರು:- ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿರೋ ಪೋಷಕರು, ಶಾಲೆಯಲ್ಲಿ ಪಾಠ ಕೇಳಿ ಬೋರ್ ಆಗಿರೋ ಮಕ್ಕಳು.. ಒಂದು ದಿನ ಎಲ್ಲಾದ್ರೂ ಸುತ್ತಾಡಕೊಂಡು.. ಎಂಜಾಯ್ ಮಾಡ್ಕೊಂಡ ಬರೋಣ ಅಂತ ಪ್ಲಾನ್ ಮಾಡಿ ಇವತ್ತು ಸಿಟಿ ಮಂದಿ ಇಲ್ಲಿಗೆ ವಿಸಿಟ್ ಕೊಟ್ಟಿದ್ರು.
ಒಂದ್ಕಡೆ ಕಲರ್ ಕಲರ್ ಪ್ಲವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ತಿರೋ ಚೆಲುವೆಯರು… ಮುದ್ದು ಮುದ್ದಾಗಿ ರೆಡಿಯಾಗಿ ಫೋಟೋ ಗೆ ಪೋಸ್ ಕೊಡ್ತಿರೋ ಪುಟಾಣಿಗಳು.. ಎಸ್.. ಸಿಟಿ ಮಂದಿ ಇಂದು ವೀಕೆಂಡ್ ಮೋಜು ಮಸ್ತಿ ಜೊತೆ ಹೂವಿನ ಲೋಕದಲ್ಲಿ ಕಳೆದು ಹೋಗಿದ್ರು. ವಾರಾಂತ್ಯ ಕೆಲಸ ಮಾಡಿ ಸುಸ್ತಾಗಿ ಲಾಲ್ ಬಾಗ್ ನಲ್ಲಿ ಐಟಿ ಮಂದಿ ಚಿಲ್ ಮಾಡ್ತಾ ಇದ್ರು.
ಹೌದು, ಈ ಬಾರಿಯ ಸ್ವತಂತ್ರ ದಿನಾಚರಣೆಗೆ ಲಾಲ್ಬಾಗ್ ನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಜೀವನ ಚರಿತ್ರೆ ಅನಾವರಣಗೊಂಡು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯವರೆಗೆ ಲಕ್ಷ ಜನ ವಿಸಿಟ್ ಕೊಟ್ಟಿದ್ರು,
ಭಾನುವಾರ ಹಿನ್ನೆಲೆ ಇಂದು ಜನ ಸಾಗರವೆ ಹರಿದು ಬಂದಿತ್ತು. ಮಕ್ಕಳು, ಯುವಜನರು, ವೃದ್ಧರೂ ಸೇರಿ ಸಖತ್ ಎಂಜಾಯ್ ಮಾಡಿದ್ರು. ಇಂದು ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು ಈಗಾಗಲೇ ಸಾಗರದಷ್ಟು ಜನರು ಲಾಲ್ಬಾಗ್ ನತ್ತ ಮುಖ ಮಾಡಿದ್ದಾರೆ. ಅದರಲ್ಲೂ ಈ ಬಾರಿ ಡಾ,ಅಂಬೇಡ್ಕರ್ ಅವರ ಥೀಮ್ ನಲ್ಲಿ ಮೂಡಿಬಂದಿರುವ ಹಿನ್ನಲೆ ಫ್ಲವರ್ ಷೋ ನೋಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಬೆಂಗಳೂರಿನ ವಿವಿಧ ಮೂಲೆ ಮೂಲೆಗಳಿಂದ ಸಸ್ಯಕಾಶಿಗೆ ಆಗಮಿಸಿ ಭೀಮ್ ರಾವ್ ರವರ ಜೀವನ ಗಾದೆಯನ್ನು ತಿಳಿದುಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಖುಷಿಯನ್ನು ಕೂಡ ಹಂಚಿಕೊಂಡ್ರು.
216 ಫಲಪುಷ್ಪ ಆರಂಭದಲ್ಲೇ ಪ್ರದರ್ಶನಕ್ಕೆ ಸೂಪರ್ ರೆಸ್ಪಾನ್ಸ್ ಗಳಿಸಿದೆ. ಇಲ್ಲಿವರೆಗೆ ಫಲಪುಷ್ಪ ಪ್ರದರ್ಶನಕ್ಕೆ 1,21650 ಜನ ವಿಸಿಟ್ ಕೊಟ್ಟಿದ್ದು, ಈ ಭಾರಿ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 10,18,330 ಕಲೆಕ್ಷನ್ ಆಗಿದೆ. ಇಂದು ಭಾನುವಾರ ವೀಕೆಂಡ್ ಹಿನ್ನೆಲೆ ದೊಡ್ಡ ಸಂಖ್ಯೆಯಲ್ಲಿ ಜನ ಕಿಕ್ಕಿರಿದಿದ್ರು. ಇನ್ನು ಮೂರೇ ದಿನಕ್ಕೆ ಕೆಲ ಹೂಗಳು ಬೇಗನೆ ಮುದುಡಿದಕ್ಕೆ ಜನ ಕೊಂಚ ಬೇಸರ ಕೂಡ ವ್ಯಕ್ತ ಪಡಿಸಿದ್ರು. ಜನ ವಿಸಿಟ್ ಕೊಡುತ್ತಿರುವಾಗಲೇ ಲಾಲ್ ಬಾಗ್ ಸಿಬ್ಬಂದಿ ಹೂಗಳ ಬದಲಾವಣೆಯಲ್ಲಿ ತೊಡಗಿರುವ ದೃಶ್ಯ ಕೂಡ ಕಂಡು ಬಂತು.
ಒಟ್ನಲ್ಲಿ ಭಾನುವಾರ ಮೋಜು ಮಸ್ತಿಗೆ ಅಂತ ಸಿಟಿ ಮಂದಿ ಪ್ಲವರ್ ಶೋ ಗೆ ವಿಸಿಟ್ ಕೊಟ್ಟಿದ್ರು. ದಿನದಿಂದ ದಿನಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಭರ್ಜರಿ ರೆಸ್ಪಾನ್ಸ್ ತೋರಿಸುತ್ತಿದ್ದಾರೆ. ತೋಟಗಾರಿಗೆ ಇಲಾಖೆ ಇನ್ನುಳಿದ 10 ದಿನವೂ ಕೂಡ ಮತ್ತಷ್ಟು ಜನ ಬರುವ ನಿರೀಕ್ಷೆಯಲ್ಲಿದೆ.