ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.ನಟ ದರ್ಶನ್ ಬಿಡುಗಡೆಗೆ ಅಭಿಮಾನಿಗಳು ಪ್ರಾರ್ಥನೆ ನಡೆಸ್ತಿದ್ರೆ ಮತ್ತೊಂದೆಡೆ ಕಾಟೇರಾ ಜೈಲಿನಿಂದ ಹೊರ ಬರೋದೆ ಡೌಟು ಅನ್ನೋ ಮಾತುಗಳು ಕೇಳಿ ಬರ್ತಿದೆ. ಚಾರ್ಜ್ ಶೀಟ್ ಸಲ್ಲಿಕೆಗೆ 30 ದಿನ ಬಾಕಿ ಇದ್ದು ಅದರ ಬಳಿಕ ಅಸಲಿ ಪಿಚ್ಚರ್ ಶುರುವಾಗಲಿದೆ..ದಚ್ಚು ಭವಿಷ್ಯ ಎನು ಅನ್ನೋದನ್ನ ನ್ಯಾಯಾಲಯ ನಿರ್ಧರಿಸಲಿದೆ..
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಮುದ್ದೆ ಮುರಿತಿದ್ದಾರೆ..ಆದ್ರೆ ಹೊರಗಡೆ ಅವರ ಬಿಡುಗಡೆ ಬಗೆಗಿನ ಚರ್ಚೆಗಳು ಜೋರಾಗಿದೆ..ಅವರ ಮುಂದಿನ ಭವಿಷ್ಯ ಏನು ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ..ಹಾಗಾದ್ರೆ ದಾಸನ ಮುಂದಿನ ಭವಿಷ್ಯ ಏನು? ಅದನ್ನೇ ತೋರಿಸ್ತೀವಿ ನೋಡಿ..
Vastu Tip: ಅಪ್ಪಿ ತಪ್ಪಿಯೂ ಈ ದಿಕ್ಕಿನಲ್ಲಿ ಕುಳಿತು ಊಟ ತಿನ್ನಬೇಡಿ..! ಇಲ್ಲಾಂದ್ರೆ ಕಷ್ಟ ಗ್ಯಾರಂಟಿ
ಹೌದು..ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸೇರಿ 17 ಜನ ಜೈಲಿನಲ್ಲಿ ದಿನ ದೂಡ್ತಿದ್ದು ಅವರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಹರಸಾಹಸ ನಡೆಸ್ತಿದ್ದಾರೆ..90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ರೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ..ಇಲ್ಲದಿದ್ರೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ವಿಫಲವಾಗಿದ್ದಾರೆ ಅನ್ನೋ ಕಾರಣ ನೀಡಿ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಬಹುದು.
ಹಾಗಾಗಿ ಕೂಲಂಕುಶವಾಗಿ ಪರಿಶೀಲನೆ ನಡೆಸಿರುವ ಪೊಲೀಸರು ಸಾಕ್ಷ್ಯ ಕಲೆಹಾಕಿ 90 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ..ಪ್ರಕರಣದ ವಿಚಾರಣೆಗೆ ಪೊಲೀಸರು ವಿಶೇಷ ಕೋರ್ಟ್ ಮನವಿ ಮಾಡಿಕೊಂಡಿದ್ದು..ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಶುರುವಾದ್ರೆ ನಟ ದರ್ಶನ್ ಗೆ ಜಾಮೀನು ಸಿಗೋದೆ ಅನುಮಾನವಾಗಿದ್ದು…ಆರೋಪಿ ಸಾಬೀತಾದರೆ ಜೀವಾವಧಿ ಶಿಕ್ಷೆಗು ಗುರಿಯಾಗಬಹುದು ಅನ್ನೋ ಮಾತು ಕೂಡ ಕೇಳಿ ಬರ್ತಿದೆ.
ಯೆಸ್..ಪ್ರಕರಣ ತನಿಖೆ ಶುರುವಾಗಿ 61 ದಿನ ಕಳೆದ್ರು ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ ಅನ್ನೋ ಮಾತು ಕೂಡ ಕೇಳಿ ಬಂದಿದ್ದು ಅದಕ್ಕೆ ಕಾರಣ ಕೂಡ ಇದೆ..ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇ ಆದರೆ ಆರೋಪಿಗೆ ಯಾವ ಕಾರಣಕ್ಕೆ ಜಾಮೀನು ನೀಡಬೇಕು ಅನ್ನೋದನ್ನ ನ್ಯಾಯಾಲಯಕ್ಕೆ ತಿಳಿಸಬೇಕು..ಇದು ಸಾಧ್ಯವಾಗಬೇಕಾದ್ರೆ ತನಿಖೆಯ ಮಾಹಿತಿ ಗೊತ್ತಿರಬೇಕು..ಆದ್ರೆ ಚಾರ್ಜ್ ಶೀಟ್ ಸಲ್ಲಿಕೆಗು ಮುಂಚಿತವಾಗಿ ತನಿಕಾಧಿಕಾರಿಯು ತನಿಖೆಯ ಗೌಪ್ಯತೆ ಕಾಪಾಡಿಕೊಂಡಿರ್ತಾರೆ..
ತನಿಖೆಯ ಯಾವುದೇ ಮಾಹಿತಿಗಳು ಕೂಡ ಆರೋಪಿಗಳಿಗೆ ಲಭ್ಯ ಆಗೋದಿಲ್ಲ ಹಾಗಾಗಿ ಜಾಮೀನು ಅರ್ಜಿ ಸಲ್ಲಿಕೆಗೆ ಆರೋಪಿಗಳು ಮುಂದಾಗಿಲ್ಲ..ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಅದು ಪಬ್ಲಿಕ್ ಡೊಮೈನ್ ಗೆ ಬರುತ್ತೆ ..ಪ್ರತಿ ಆರೋಪಿಗಳಿಗೆ ಚಾರ್ಜ್ ಶೀಟ್ ಪ್ರತಿ ನೀಡಲಾಗುತ್ತೆ..ಆಗ ಅದನ್ನು ಆರೋಪಿಗಳು ಬಳಸಿಕೊಂಡು ಜಾಮೀನಿನ ಮೊರೆ ಹೋಗಬಹುದು. ಸದ್ಯ ನಟ ದರ್ಶನ್ ಗೆ 90 ದಿನದವರೆಗೆ ಜೈಲೇ ಗತಿಯಾಗಿದ್ದು 90 ದಿನ ಬಳಿಕ ಭವಿಷ್ಯ ಏನು ಅನ್ನೋದು ನಿರ್ಧಾರವಾಗಲಿದೆ.