ಪ್ರೀತಿಸಿ ಮದ್ವೆಯಾದವರು ಮೊದ ಮೊದಲಿಗೆ ನಾವು ಪ್ರಪಂಚವನ್ನೇ ಗೆದ್ವಿ ಅನ್ನೋ ಫೀಲ್ ಇರುತ್ತೆ . ಆದ್ರೆ ಮದುವೆಯಾದ ಮೇಲೆ ಚನ್ನಾಗಿ ಜೀವ್ನ ಮಾಡೋದೆ ನಿಜವಾದ ಚಾಲೆಂಜ್ . ಅದರಲ್ಲೂ ಪ್ರೀತಿ ಮಾಡಿ ಮದ್ವೆಯಾದವರ ಮದ್ಯೆ ಮತ್ತೊಬ್ಬ ಬಂದ್ರೆ ಅಂತೂ ಕಥೆ ಮುಗೀತು ಅಂತಾನೇ ಅರ್ಥ. ಅದೇ ರೀತಿ ಇಲ್ಲೊಂದು ಜೋಡಿ ಪ್ರೀತಿಸಿ ಮದ್ವೆಯಾಗಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು. ಅನ್ಯೂನ್ಯವಾಗಿ ಚೆನ್ನಾಗೇ ಜೀವ್ನ ನಡೆಸ್ತಿದ್ರು. ಅದ್ರೆ ಆ ದಂಪತಿ ನಡುವೆ ಬಂದ ಮೂರನೇ ವ್ಯಕ್ತಿ ಹಾಗು ಪತ್ನಿ ಸೇರಿ ಪ್ರೀತಿಯ ಕೋಟೆ ಕಟ್ಟಿದ್ದ ಪತಿಯ ಜೀವವನ್ನೇ ತೆಗೆದುಬಿಟ್ಟಿದ್ದಾರೆ.
ಹೌದು.. ಈ ಪೋಟೊದಲ್ಲಿರುವ ಈ ಜೋಡಿಯ ಹೆಸರು ಮಹೇಶ್ ಹಾಗೂ ತೇಜಸ್ವಿನಿ. ಹಾಸನ ಜಿಲ್ಲೆ ಹೊಳೇನರಸೀಪುರ ಬಳಿಯ ಕೇರಳಾಪುರ ಮೂಲದ ಈ ಜೋಡಿ ನಗರದ ವೈಟ್ ಫೀಲ್ಡ್ ಸಮೀಪದ ಹಗದೂರಿನಲ್ಲಿ ನೆಲೆಸಿದ್ರು. ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿ ಮಾಡುತ್ತಿದ್ದ ಈ ಜೋಡಿ, ನಂತರ ಮದುವೆ ಆಗಿ ಬೆಂಗಳೂರಿಗೆ ಬಂದಿದ್ರು. 14 ವರ್ಷ ದಾಂಪತ್ಯ ಜೀವನ ನಡೆಸಿದ್ದ ಈ ಜೋಡಿ ನಡುವೆ ಇತ್ತೀಚಿಗೆ ಮೂರನೇ ವ್ಯಕ್ತಿಯೊಬ್ಬ ಎಂಟ್ರಿಯಾಗಿದ್ದ.
ಇದೇ ವಿಚಾರಕ್ಕೆ ಗಲಾಟೆಯಾಗಿ ಗಂಡ ಮಹೇಶನ ಕೊಲೆಯಲ್ಲಿ ಅಂತ್ಯವಾಗಿದೆ.ಕೊಲೆಯಾದ ಮಹೇಶ್ ಆಟೋ ಓಡಿಸುತ್ತಿದ್ರೆ, ಆತನ ಪತ್ನಿ ತೇಜಸ್ವಿನಿ ಫೈನಾನ್ಸ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ಲು. ಈ ವೇಳೆ ತೇಜಸ್ವಿನಿಗೆ ತಾನು ಕೆಲಸ ಮಾಡುವ ಸ್ಥಳದಲ್ಲಿ ಗಜೇಂದ್ರ ಎಂಬಾತನ ಪರಿಚಯವಾಗಿದೆ. ನಂತರ ಇಬ್ಬರು ಕೂಡ ಸಲುಗೆ ಬೆಳೆಸಿಕೊಂಡಿದ್ದಾರೆ. ಈ ವಿಚಾರ ಮಹೇಶನಿಗೆ ಗೊತ್ತಾಗಿ ಹೆಂಡತಿಗೆ ಬುದ್ದಿವಾದ ಹೇಳಿದ್ದ.
Vastu Tip: ಅಪ್ಪಿ ತಪ್ಪಿಯೂ ಈ ದಿಕ್ಕಿನಲ್ಲಿ ಕುಳಿತು ಊಟ ತಿನ್ನಬೇಡಿ..! ಇಲ್ಲಾಂದ್ರೆ ಕಷ್ಟ ಗ್ಯಾರಂಟಿ
ಹೀಗೆ ಒಮ್ಮೆ ಮಹೇಶ್ ನ ಪತ್ನಿ ಮನೆ ಬಿಟ್ಟು ಹೋಗಿದ್ಲು. ಇದು ಮಹೇಶ್ ಗೆ ಪತ್ನಿಯ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಹೀಗೆ ಕಳೆದ ಶುಕ್ರವಾರ ನಾಗರಪಂಚಮಿಯಂದು ಮಹೇಶ ಬೆಳಗ್ಗೆ ಎದ್ದು ಆಟೋ ಚಲಾಯಿಸಿಕೊಂಡು ಹೋಗಿದ್ದಾನೆ. ಗಂಡ ಹೊರಗೆ ಹೋಗುತ್ತಿದ್ದಂತೆ ಕೆಲ ಹೊತ್ತಿನ ಬಳಿಕ ಗಜೇಂದ್ರ ಮನೆಗೆ ಬಂದಿದ್ದಾನೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಹೇಶ ಮನೆಗೆ ವಾಪಸ್ ಬಂದಾಗ ಗಜೇಂದ್ರ ಹಾಗೂ ಪತ್ನಿ ತೇಜಸ್ವಿನಿ ಇಬ್ಬರು ಮನೆಯಲ್ಲಿ ಇರೋದನ್ನ ನೋಡಿದ್ದಾನೆ. ಇದೇ ವಿಚಾರಕ್ಕೆ ಪತ್ನಿ ಮೇಲೆ ಗಲಾಟೆ ಮಾಡಿ ಹಲ್ಲೆ ಕೂಡ ಮಾಡಿದ್ನಂತೆ.
ಗಲಾಟೆ ಬಿಡಿಸಲು ಹೋದ ಗಜೇಂದ್ರನಿಗು ಥಳಿಸಿದ್ನಂತೆ. ಈ ವೇಳೆ ತೇಜಸ್ವಿನಿ ಹಾಗೂ ಗಜೇಂದ್ರ ಸೇರಿ ಮಹೇಶನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮಹೇಶ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಮೇಲೆ ಗಜೇಂದ್ರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ನಂತರ ಜೋರಾಗಿ ಚೀರಾಟ ಮಾಡಿದ ಪತ್ನಿ ತೇಜಶ್ವಿನಿ ನನ್ನ ಗಂಡ ಇದ್ದಕ್ಕಿದಂತೆ ಕುಸಿದು ಬಿದ್ದು ಸತ್ತೋದ್ರು ಎಂದು ಗೋಳಾಟದ ಡ್ರಾಮಾ ಶುರು ಮಾಡಿದ್ಲಂತೆ.. ಇನ್ನೂ ಮಹೇಶ್ ಹಾಗೂ ತೇಜಸ್ವಿನಿಗೆ ಇಬ್ಬರು ಮಕ್ಕಳಿದ್ದಾರೆ. ವೈಟ್ ಫೀಲ್ಡ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಗಜೇಂದ್ರನಿಗಾಗಿ ಬಲೆ ಬೀಸಿದ್ದಾರೆ.. ಅದೇನೇ ಇರಲಿ ಪ್ರೀತಿಸಿದವಳಿಗಾಗಿ ಊರು ಬಿಟ್ಟು ಬಂದಿದ್ದ ಆ ನತದೃಷ್ಟ ಇಂದು ಅವಳಿಂದಲೇ ಹತ್ಯೆಯಾಗಿರೋದು ಮಾತ್ರ ನಿಜಕ್ಕೂ ದುರಂತ..