ಕೋಲಾರ : ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಭೀಮ ಬಿಡುಗಡೆ ಆಗಿದನ್ನು ಕೋಲಾರ ಜಿಲ್ಲೆಯ ದುನಿಯಾ ವಿಜಯ್ ಅಭಿಮಾನಿಗಳು ಸಂಭ್ರಮಿಸಿದರು.
ಮಾಲೂರು ತಾಲೂಕಿನಲ್ಲಿ ಅಭಿಮಾನಿಗಳ ಸಂಘದಿಂದ ನಗರದ ಬೆನಕ ಚಿತ್ರ ಮಂದಿರದ ಮುಂಭಾಗ ಬೃಹತ್ ಕಟೌಟ್ ನಿಲ್ಲಿಸಿ,ವಿಭಿನ್ನವಾಗಿ ಕೋಟೆ ಬಾಗಿಲ ರೀತಿ ಧ್ವಾರ ಬಾಗಿಲು ನಿರ್ಮಾಣ ಮಾಡಿ ಸಿನಿಮಾಗೆ ಸ್ವಾಗತ ಕೋರಿದರು.
ಪ್ರಸ್ತುತ ಯುವ ಜನಾಂಗ ಹೇಗೆ ಹಾಳಾಗುತ್ತಿದೆ ಮತ್ತು ಅದನ್ನು ಯಾವ ರೀತಿ ತಡೆಯಬೇಕು ಎಂಬ ಸಂದೇಶ, ಬೆಂಗಳೂರಿನಂತಹ ಮಹಾನಗರದಲ್ಲಿ ಮಾದಕ ವಸ್ತುಗಳು ಯಾವ ರೀತಿ ಬಳಕೆ ಆಗುತ್ತಿದೆ,ಯಾರೆಲ್ಲಾ ಬಳಸುತ್ತಿದ್ದಾರೆ? ಈ ಮಾಫಿಯಾ ಯಾರ ಹಿಡಿತದಲ್ಲಿ ಇರುತ್ತದೆ ಎಂಬುದನ್ನು ಸಾಕಷ್ಟು ವಿವರವಾಗಿಯೇ ಭೀಮ ಸಿನಿಮಾದಲ್ಲಿ ತೋರಿಸಲಾಗಿದೆ.
ಇಂತಹ ಹಿನ್ನೆಲೆಯ ಕಥೆ ಇರುವ ಸಿನಿಮಾದಲ್ಲಿ ಕಥಾನಾಯಕನ ಪಾತ್ರವೇನು?ಆತ ಏಕೆ ಮಾದಕ ವಸ್ತುಗಳ ಜಾಲದ ವಿರುದ್ಧ ತಿರುಗಿಬೀಳುತ್ತಾನೆ ಅನ್ನೋದನ್ನು ಭೀಮ ಸಿನಿಮಾದಲ್ಲಿ ತೋರಿಸಲಾಗಿದೆ ಅಂತ ಅಭಿಮಾನಿಗಳಿಂದ ಅಭಿಪ್ರಾಯ ವ್ಯಕ್ತವಾಗಿದೆ.ಇನ್ನು ಸಿನಿಮಾ ಆರಂಭಕ್ಕೂ ಮುನ್ನ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರ ಜೊತೆ ದುನಿಯಾ ವಿಜಯ್ ಅಭಿಮಾನಿಗಳಿಂದ ಉಚಿತವಾಗಿ ಟಿಕೇಟ್ ಕೊಡಿಸಿ,ಸಿನಿಮಾ ವೀಕ್ಷಣೆಗೆ ಬಂದವರಿಗೆ ಊಟ ಬಡಿಸುವ ಮೂಲಕ ಅಭಿಮಾನ ಮೆರೆದರು.