17 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತ ಬಂದಿರೋ ಆರ್ಸಿಬಿ ತಂಡದಲ್ಲಿ ಈ ಬಾರಿ ಹಲವು ಬದಲಾವಣೆ ಸಾಧ್ಯತೆ ಇದೆ. 2025ರ ಐಪಿಎಲ್ಗಿಂತ ಮುಂಚಿತವಾಗಿ ಒಂದು ಮೆಗಾ ಹರಾಜು ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಹರಾಜಿನಲ್ಲಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ತಂಡದಿಂದ ಹೊರಹೋಗಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.
Kalaburgi: ಹೊಲದಲ್ಲಿ ಕೋತಿ ಆಟ: ಮೊಬೈಲಲ್ಲಿ ರೆಕಾರ್ಡ್, ಎಲ್ಲೆಡೆ ವೈರಲ್!
ಆರ್ಸಿಬಿ ಬಹುಸಂಖ್ಯಾ ಅಭಿಮಾನಿಗಳನ್ನು ಹೊಂದಿರುವ ತಂಡ. 17 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತಲೇ ಬಂದಿದೆ. ಈ ಬಾರಿಯೂ ಟ್ರೋಫಿ ಗೆಲ್ಲಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ. ಇದರ ಜೊತೆಗೆ ಗ್ಲೇನ್ ಮ್ಯಾಕ್ಸ್ವೆಲ್ ಅನ್ನು ತಂಡ ಬದಲಾಯಿಸಲಿದೆ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಕಳೆದ ಬಾರಿ ಮ್ಯಾಕ್ಸ್ವೆಲ್ ಕಳಪೆ ಪರ್ದರ್ಶನ ತೋರಿದ್ದರು. ತಂಡಕ್ಕಾಗಿ ಅತಿ ಕಡಿಮೆ ರನ್ಗಳ ಕೊಡುಗೆ ನೀಡಿದ್ದರು. ಇದು ಆರ್ಸಿಬಿ ಅಭಿಮಾನಿಗಳನ್ನು ಆಘಾತಗೊಳಿಸಿತು. ಕೊನೆಗೆ ಫಾರ್ಮ್ನಲ್ಲಿಲ್ಲದ ಮ್ಯಾಕ್ಸ್ವೆಲ್ನ್ನು ಆಟದಿಂದ ಹೊರಗಿಟ್ಟರು. ಆದರೆ ಈ ಬಾರಿಯ ಐಪಿಎಲ್ ಪಂದ್ಯದ ಬಗ್ಗೆ ಫ್ಯಾನ್ಸ್ಗೆ ಕುತೂಹಲ ಶುರುವಾಗಿದೆ. ಒಂದು ವೇಳೆ ಆರ್ಸಿಬಿ ಮ್ಯಾಕ್ಸ್ವೆಲ್ರನ್ನು ಹೊರಗಿಟ್ಟರೆ. ಉಳಿದ ಮೂರು ತಂಡಗಳು ಅವರನ್ನು ಖರೀದಿಸಲು ರೆಡಿ ಇವೆಯಂತೆ.
ಮ್ಯಾಕ್ಸ್ವೆಲ್ ಅವರನ್ನು ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ತಂಡ ಖರೀದಿಸಲು ರೆಡಿ ಇವೆ ಎಂದು ಹೇಳಲಾಗುತ್ತಿದೆ. ಏಕೆಂದರೆ 2012ರಲ್ಲಿ ಮ್ಯಾಕ್ಸಿ ದೆಹಲಿ ಭಾಗವಾಗಿದ್ದರು. ಆ ವೇಳೆ ತಂಡಕ್ಕಾಗಿ ಚೆನ್ನಾಗಿ ಆಗಿದ್ದರು.
ಮುಂಬೈ ಇಂಡಿಯನ್ಸ್ ತಂಡದಲ್ಲೂ ಈ ಹಿಂದೆ ಮ್ಯಾಕ್ಸ್ವೆಲ್ ಆಡಿದ್ದಾರೆ. ಇದಲ್ಲದೆ ಪಂಜಾಬ್ ತಂಡದಲ್ಲಿ ಆಡಿದ ಅನುಭವ ಮ್ಯಾಕ್ಸ್ವೆಲ್ಗೆ ಇದೆ. ಆದರೆ ಈ ಬಾರಿ ಮಾತ್ರ ಆರ್ಸಿಬಿ ಅಭಿಮಾನಿಗಳ ಕಣ್ಣು ಮ್ಯಾಕ್ಸ್ವೆಲ್ ಮೇಲಿದೆ. ತಂಡದಿಂದ ಈ ಸ್ಟಾರ್ ಪ್ಲೇಯರನ್ನು ಹೊರಗಿಡುತ್ತಾರಾ? ಅಥವಾ ಉಳಿಸುತ್ತಾರಾ? ಎಂದು ಕಾದು ನೋಡಬೇಕಿದೆ.