ರೇಜರ್ ಬರ್ನ್ ಎಂಬುದು ಶೇವಿಂಗ್ ಮಾಡುವುದರಿಂದ ಉಂಟಾಗುವ ಚರ್ಮಕ್ಕೆ ಸಂಬಂಧ ಪಟ್ಟ ಕಿರಿಕಿರಿಯಾಗಿದೆ. ಇದು ಸಾಮಾನ್ಯವಾಗಿ ಚರ್ಮದ ಮೇಲೆ ಕೆಂಪಾಗುವುದು ಮತ್ತು ಕಿರಿಕಿರಿ ಉಂಟುಮಾಡುವ ದದ್ದುಗಳ ಒಂದು ರೂಪವೆಂದು ಪರಿಗಣಿಸಬಹುದು. ಸಾಮಾನ್ಯವಾಗಿ ಇದರ ರೋಗಲಕ್ಷಣಗಳು ಸುಡುವಿಕೆ, ಕೆಂಪಾಗುವಿಕೆ ಮತ್ತು ತುರಿಕೆಯನ್ನು ಒಳಗೊಂಡಿರಬಹುದು.
ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 9ಕ್ಕೆ ಇಳಿಸಲು ಪ್ರಸ್ತಾಪ: ಇರಾಕ್ ಮಸೂದೆಗೆ ಆಕ್ರೋಶ
ನೈಸರ್ಗಿಕ ಪರಿಹಾರಗಳು ಇಲ್ಲಿವೆ;
1. ಅಲೋವೆರಾ
ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಅಲೋವೆರಾ ಉತ್ತಮ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಅಲೋವೆರಾವು ಚರ್ಮ ಕೆಂಪಗಾಗುವುದನ್ನು ಮತ್ತು ಕಿರಿಕಿರಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿದ ಜಾಗದಲ್ಲಿ ಅಲೋವೆರಾ ಜೆಲ್ ಅನ್ನು ಹಚ್ಚಿ, 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ದಿನಕ್ಕೆ 2- 3 ಬಾರಿ ಪುನರಾವರ್ತಿಸಿ.
2. ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಕೇವಲ ಅಡುಗೆಗೆ ಮಾತ್ರವಲ್ಲ, ಇದು ಅದ್ಭುತ ಮಾಯಿಶ್ಚರೈಸರ್ ಕೂಡ ಆಗಿದೆ. ಅಲ್ಲದೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಇದು ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚಿಕ್ಕ ಚಿಕ್ಕ ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿದ ಜಾಗದಲ್ಲಿ ತೆಂಗಿನ ಎಣ್ಣೆಯನ್ನುಸ್ವಲ್ಪ ಹೊತ್ತು ಹಚ್ಚಿ, ಚರ್ಮಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಅದನ್ನು ಹಾಗೆಯೇ ಬಿಡಿ, ಇದನ್ನು ತೊಳೆಯುವ ಅಗತ್ಯವಿಲ್ಲ. ಚರ್ಮವನ್ನು ಮೃದುವಾಗಿಡಲು ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಿ ನೋಡಿ.
3. ಟೀ ಟ್ರೀ ಆಯಿಲ್
ಹಲವಾರು ಅಧ್ಯಯನಗಳಲ್ಲಿ ಹೇಳಿರುವಂತೆ ಟೀ ಟ್ರೀ ಆಯಿಲ್ ನಂಜುನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಚರ್ಮವನ್ನು ಊತ ಮತ್ತು ಕೆಂಪಾಗುವಿಕೆಯಿಂದ ತಡೆಯಲು ಸಹಾಯ ಮಾಡುತ್ತದೆ. ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿದ ಜಾಗಕ್ಕೆ ತೆಂಗಿನ ಎಣ್ಣೆಯೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಟೀ ಟ್ರೀ ಎಣ್ಣೆಯನ್ನು ಬೆರೆಸಿ, ಹಚ್ಚಿರಿ. 15- 20 ನಿಮಿಷಗಳ ಕಾಲ ಬಿಟ್ಟ ಮೇಲೆ ಬೆಚ್ಚಗಿನ ನೀರಿನಿಂದ ತೊಳೆಯರಿ.