ಸುಮಾರು 2 ಶತಮಾನಗಳಷ್ಟು ಕಾಲ ನಮ್ಮ ದೇಶವನ್ನಾಳಿದ ಬ್ರಿಟಿಷರ ಆಡಳಿತ ಕೊನೆಯಾದ ದಿನವನ್ನು ಪ್ರತಿವರ್ಷ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ದೇಶ ಸ್ವಾತಂತ್ರ್ಯ ಪಡೆದದ್ದು 1947ರ ಆಗಸ್ಟ್ 14ರ ಮಧ್ಯರಾತ್ರಿ. ಅದರ ನೆನಪಿಗಾಗಿ ಪ್ರತಿವರ್ಷವೂ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ದೇಶವನ್ನು ಬ್ರಿಟಿಷ ರ ಕಪಿಮುಷ್ಟಿಯಿಂದ ಬಿಡಿಸಲು ಲಕ್ಷಾಂತರ ಹೋರಾಟಗಾರರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂಥ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿನ ಇದು. ಒಟ್ಟಾರೆ ಭಾರತೀಯ ಪಾಲಿಗೆ ಇದು ಹೆಮ್ಮೆ ಪಡುವ ದಿನ.
ಸ್ವಾತಂತ್ರ್ಯ ದಿನದ ಮಹತ್ವ ಭಾರತದ ಸ್ವಾತಂತ್ರ್ಯ ದಿನವನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದರ ಹಿಂದೆ ಒಂದು ಕಹಿ ಹೋರಾಟದ ಹಾದಿಯಿದೆ. ಅನೇಕಾನೇಕ ವೀರರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಕಠಿಣ ಹೋರಾಟದ ಹಾದಿ ಹಿಡಿದಿದ್ದರು. ಬ್ರಿಟಿಷರಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ. ಅದೆಷ್ಟೋ ಜನ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ.
PM Narendra Modi: ಪ್ರಧಾನಿ ನರೇಂದ್ರ ಮೋದಿ ಉಪಯೋಗಿಸುವ ಫೋನ್ ಯಾವುದು ಗೊತ್ತಾ..?
1757ರಲ್ಲಿ ನಡೆದ ಪ್ಲಾಸಿ ಕದನದ ಬಳಿಕ ಭಾರತ ಬ್ರಿಟಿಷರ ಮುಷ್ಟಿ ಸೇರಿತ್ತು. ಈ ಕದನ ಬಂಗಾಳದ ನವಾಬ ಮತ್ತು ಬ್ರಿಟಿಷ ನಡುವೆ ನಡೆದು, ಅದರಲ್ಲಿ ಬ್ರಿಟಿಷರು ಗೆದ್ದಿದ್ದರು. ನಂತರ ಈಸ್ಟ್ ಇಂಡಿಯಾ ಕಂಪನಿ ನಮ್ಮ ರಾಷ್ಟ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಆಡಳಿತ ಶುರು ಮಾಡಿತ್ತು. ಸರಿಸುಮಾರು ಎರಡು ಶತಮಾನಗಳ ಕಾಲ ಭಾರತೀಯರನ್ನು ಗುಲಾಮರಂತೆ ಪರಿಗಣಿಸಿತು. ಕಾನೂನಿನ ಹೆಸರಲ್ಲಿ ಲೂಟಿ ಮಾಡಿತು.
ಭಾರತೀಯರ ಕಿಚ್ಚು ಸಾಮಾನ್ಯದ್ದಲ್ಲ.
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲೇಬೇಕು ಎಂಬ ಮಹತ್ವಾಕಾಂಕ್ಷೆ, ಛಲದೊಂದಿಗೆ ಸ್ವಾತಂತ್ರ್ಯ ಹೋರಾಟವನ್ನು …ರಲ್ಲಿ ಶುರು ಮಾಡಲಾಯಿತು. ಗಾಂಧೀಜಿ ಮತ್ತು ಅವರ ಅನುಯಾಯಿಗಳದ್ದು ಅಹಿಂಸಾ ಮಾರ್ಗವಾಗಿದ್ದರೆ, ಭಗತ್ ಸಿಂಗ್ರಂತ ಯುವಕರದ್ದು ಕ್ರಾಂತಿಕಾರಿ ಮನೋಭಾವ ಆಗಿತ್ತು. ಎಲ್ಲರ ಉದ್ದೇಶವೂ ಒಂದೇ ಆಗಿದ್ದರೂ..ಹಲವು ಮಾರ್ಗಗಳ ಮೂಲಕ ಹೋರಾಟ ಮಾಡಿದ್ದರು. ಭಾರತ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವನ್ನು ಜಗತ್ತಿನ ಹಲವು ರಾಷ್ಟ್ರಗಳು ಶ್ಲಾಘಿಸಿವೆ.
ಭಾರತದ ಧ್ವಜಕ್ಕಿದೆ ವಿಶೇಷತೆ
ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದು, ಪ್ರತಿ ಬಣ್ಣವೂ ಅದರದ್ದೇ ಆದ ಮಹತ್ವ ಹೊಂದಿದೆ. ಹಾಗೇ, ಅಶೋಕ ಚಕ್ರವನ್ನೂ ಒಳಗೊಂಡಿದೆ. ಅಂದಹಾಗೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ನಮ್ಮ ದೇಶ ಈ ತ್ರಿವರ್ಣಧ್ವಜವನ್ನು ಅಳವಡಿಸಿಕೊಂಡಿದೆ. 1947ರ ಆಗಸ್ಟ್ 15 ಕ್ಕೂ 23 ದಿನ ಮೊದಲು, ನಡೆದ ಸಾಂವಿಧಾನಿಕ ಸಭೆಯಲ್ಲಿ ತ್ರಿವರ್ಣ ಧ್ವಜ ಅಂಗೀಕರಿಸಲಾಯಿತು. ಬ್ರಿಟಿಷರ ವಿರುದ್ಧ ದೇಶದ ಜನರನ್ನು ಒಗ್ಗೂಡಿಸಲು, ಅವರಲ್ಲಿ ದೇಶಪ್ರೇಮದ ಕಿಚ್ಚು ಮೂಡಿಸಲು ಈ ಧ್ವಜ ಅಂಗೀಕಾರವಾಯಿತು. ನಮ್ಮ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಹಾರಿಸುವಂತಿಲ್ಲ. ಅದಕ್ಕೂ ನಿಯಮಗಳಿವೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಕಾನೂನು ಪ್ರಕಾರ ಅಪರಾಧವೂ ಹೌದು. ಒಟ್ಟಾರೆ ಇದು ನಮ್ಮ ಸ್ವಾತಂತ್ರ್ಯದ ಸಂಕೇತವಾಗಿದೆ.
ಭಾರತ ಈ ಬಾರಿ ಎಷ್ಟನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ?
ಭಾರತವು ಆಗಸ್ಟ್ 15 ರ ಸಮೀಪಿಸುತ್ತಿದ್ದಂತೆ, ರಾಷ್ಟ್ರವು ತನ್ನ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗಿದೆ. ಈ ದಿನವು 1947 ರಲ್ಲಿ ಸುದೀರ್ಘ ಹೋರಾಟದ ನಂತರ ಭಾರತವು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಸಾಧಿಸಿದ ಐತಿಹಾಸಿಕ ಕ್ಷಣವನ್ನು ಸೂಚಿಸುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸುವ ಸಮಯ ಇದು.
78 ನೇ ಸ್ವಾತಂತ್ರ್ಯ ದಿನಾಚರಣೆಯು ಭಾರತದ ನಿರಂತರ ಮನೋಭಾವ, ಶ್ರೀಮಂತ ಪರಂಪರೆ ಮತ್ತು ಅದರ ವೈವಿಧ್ಯಮಯ ಜನಸಂಖ್ಯೆಯನ್ನು ಬಂಧಿಸುವ ಏಕತೆಯನ್ನು ಆಚರಿಸುತ್ತದೆ. ಇದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸಲು, ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ಆಚರಿಸಲು ಮತ್ತು ನಿರಂತರ ಬೆಳವಣಿಗೆ ಮತ್ತು ಸಮೃದ್ಧಿಯಿಂದ ತುಂಬಿದ ಭವಿಷ್ಯಕ್ಕಾಗಿ ಎದುರುನೋಡುವ ದಿನವಾಗಿದೆ.
ಎಲ್ಲರ ಶ್ರಮವೂ ಬಹುಮುಖ್ಯ
ಸ್ವಾತಂತ್ರ್ಯ ಬಂದ ಮೇಲೆ ಖುಷಿಯೇನೋ ಇತ್ತು. ಅದರೊಂದಿಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಅಹಿಂಸಾ ಮಾರ್ಗ ಹಿಡಿದಿದ್ದ ನಾಯಕರೋ..ಕ್ರಾಂತಿಕಾರಿಗಳೋ? ಎಂಬಿತ್ಯಾದ ತರ್ಕ, ಪ್ರಶ್ನೆಗಳೂ ಎದ್ದವು. ವಾದವಿವಾದಗಳೂ ನಡೆದವು. ಆದರೆ ಬ್ರಿಟಿಷರ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರೂ ಶ್ರಮ ಪಟ್ಟಿದ್ದಾರೆ. ಲಕ್ಷಾಂತರ ಜನರು ಹೋರಾಟದಲ್ಲಿ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.