ಬೆಂಗಳೂರು: ಮಚ್ಚಿನಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಸರ್ಕಾರಿ ಶಾಲೆಯ ಹಿಂದೆ ನಡೆದಿದೆ.
ಮನೆಯ ಮುಂದೆ ವಾಕ್ ಮಾಡುವಾಗ ಯುವಕನಿಂದ ಕೊಲೆ ಮಾಡಲಾಗಿದ್ದು ಸುದ್ದಪ್ಪ ಕೊಲೆಯಾದ ವ್ಯಕ್ತಿಯಾಗಿದ್ದು ಶಿರಾ ಮೂಲದ ಪುನೀತ್ ಎಂಬಾತನಿಂದ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಬೆಳಗ್ಗೆ ಕ್ಯಾಬ್ ಡ್ರೈವರ್, ರಾತ್ರಿ ಮನೆ ಕಳ್ಳತನ : ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!
ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದ ಕೊಲೆ ಆರೋಪಿ ಪುನೀತ್ ಹಾಗೂ ಮೃತ ಸಿದ್ದಪ್ಪ ಮಚ್ಚಿನಿಂದ ತಲೆ ಹಾಗೂ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಬಾಡಿಗೆ ಮನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಸಿದ್ದಪ್ಪ ಮೃತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾವ ಭೇಟಿ ಪರಿಶೀಲನೆ ನಡೆಸಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯ ಪತ್ತೆಗಾಗು ಶೋಧ ಕಾರ್ಯ ನಡೆಸುತ್ತಿದ್ದಾರೆ,