ಬೆಂಗಳೂರು: ಜೋಡಿ ಆಪ್ ನಲ್ಲಿ ಪರಿಚಯವಾದ ಪ್ರೇಯಸಿಗಾಗಿ ಮನೆಕಳ್ಳತನ ಮಾಡಿದ ಖದೀಮ ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಪೊಲೀಸರಿಗೆ ಲಾಕ್ ಪ್ರಿಯತಮೆ ಖತರ್ನಾಕ್ ಪ್ರೇಮಿಗಳನ್ನ ಬಂಧಿಸಿದ ಆಡುಗೋಡಿ ಪೊಲೀಸರು
ನಾರಾಯಣಸ್ವಾಮಿ (34) ಹಾಗೂ ನವೀನ( 39) ಬಂಧಿತ ಪ್ರೇಮಿಗಳಾಗಿದ್ದು ನಾರಾಯಣಸ್ವಾಮಿ ಮೂಲತಹ ತಮಿಳುನಾಡು ಮೂಲದವರು ನಾರಾಯಣಸ್ವಾಮಿ ಹೆಂಡತಿಗೆ ಪ್ಯಾರಲಿಸಿಸ್ ಆಗಿತ್ತು ಹಾಗಾಘಿ ಅವನ ತಾಯಿ ಬೆಳ್ಳಿಯಮ್ಮ ಮನೆಕೆಲಸ ಮಾಡುತ್ತಿದ್ದರು ಹಾಘೆ ಅವನ ಅಮ್ಮನ ಜೊತೆ ಆಗಾಗ ಮನೆಕೆಲಸ ಮಾಡಲು ಹೋಗುತ್ತಿದ್ದ
ನಾರಾಯಣಸ್ವಾಮಿಗೆ ಜೋಡಿ ಆಪ್ ನಲ್ಲಿ ನವೀನ ಎಂಬ ಮಹಿಳೆಯ ಪರಿಚಯವಾಗುತ್ತೆ ಹಾಗೆ ನವೀನಾಳ ಗಂಡನಿಗೂ ಪ್ಯಾರಲಿಸ್ ಆಗಿತ್ತು ಹೀಗಾಗಿ ಡೇಟಿಂಗ್ ಆಪ್ ಗಳಲ್ಲಿ ಯುವಕರನ್ನ ಹುಡುಕಿ ಮಾತನಾಡುತ್ತಿದ್ದಳು. ನಾರಾಯಣಸ್ವಾಮಿ ಹಾಗೂ ನವೀನ ಇಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದರು
ಬೆಳಗ್ಗೆ ಕ್ಯಾಬ್ ಡ್ರೈವರ್, ರಾತ್ರಿ ಮನೆ ಕಳ್ಳತನ : ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!
ಪರಿಚಯವಾದ ಬಳಿಕ ಮಕ್ಕಳನ್ನ ಬಿಟ್ಟು ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ರು ಇದಕ್ಕಾಗಿ ಹಣ ಬೇಕಾಗಿದ್ದ ಕಾರಣ ಕಳ್ಳತನದ ಪ್ಲಾನ್ ಮಾಡಿದ್ರು. ತಾಯಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಇರುವ ಕುರಿತು ಮಾಹಿತಿ ಸಂಗ್ರಹಿಸಿದ್ದರು.
ಲಕ್ಕಸಂದ್ರದ ರಿಹಾನ್ ಅಸ್ಮ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ ರಿಹಾನ್ ಅಸ್ಮ ಮನೆಯಲ್ಲಿದ್ದ ಸುಮಾರು 330 ಗ್ರಾಂ ಚಿನ್ನಾಭರಣ ಕದ್ದಿದ್ದ ನಾರಾಯಣಸ್ವಾಮಿ ನಂತರ ಕದ್ದ ಚಿನ್ನವನ್ನ ಹಲವೆಡೆ ಅಡವಿಟ್ಟಿದ್ದ ಜೋಡಿ.ಸುಮಾರು 16 ಕಡೆ ಚಿನ್ನವನ್ನ ಅಡವಿಟ್ಟಿದ್ದ ಖತರ್ನಾಕ್ ಜೋಡಿ ನಂತರ ಆ ಹಣದೊಂದಿಗೆ ಹೆಂಡತಿ ಮಕ್ಕಳನ್ನ ಬಿಟ್ಟು ಚೆನ್ನೈ ಗೆ ಪರಾರಿಯಾಗಿದ್ದರು
ಚೆನ್ನೈನಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದ ಜೋಡಿ ಮಾಲೀಕರು ನಾರಾಯಣಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡಿದಾಗ ವಿಚಾರ ಬಯಲಿಗೆ ಬಂಧಿತ ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ ವಶಕ್ಕೆ..