ಬೆಂಗಳೂರು: ಪಾರ್ಟ್ ಟೈಂ ಕ್ಯಾಬ್ ಡ್ರೈವರ್ ಫುಲ್ ಟೈಂ ಕಳ್ಳತನ ದಾರಿ ಹಿಡಿದದ್ದೇ ರೋಚಕ ಕಥೆಯಾಗಿದ್ದು ಬಾಣಸವಾಡಿ ಪೊಲೀಸರಿಂದ ಚೆನ್ನೈ ಮೂಲದ ಸತೀಶ್ (34) ಬಂಧಿಸಿದ್ದಾರೆ.
ಕಲ್ಯಾಣ ನಗರ ಮನೆಯೊಂದರಲ್ಲಿ ಚಿನ್ನಾಭರಣ ಕದ್ದಿದ್ದ ಖದೀಮ ಕಳ್ಳತನಕ್ಕೆ ಬಳಸಿದ್ದ ಬೈಕನ್ನ ಸೆಕೆಂಡ್ ಶೂರೂಂನಲ್ಲಿ ಮಾರಿದ್ದ ಚಾಲಾಕಿ ಚೆನೈ ಮೂಲದ ಸತೀಶ್ ಬೆಂಗಳೂರಿನ ಕಾವಲಬೈರಸಂದ್ರದಲ್ಲಿ ಯುವತಿ ಮದುವೆಯಾಗಿದ್ದ
ಆ್ಯಪ್ ಮೂಲಕ ಬುಕ್ಕಿಂಗ್ ಬಂದರೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಸತೀಶ್ ಕಲ್ಯಾಣ ನಗರದ ಹೆಚ್.ಆರ್.ಬಿ.ಆರ್ ಲೇಔಟ್ ಕಾರ್ ಡ್ರೈವಿಂಗ್ ಗೆ ಬುಕ್ಕಿಂಗ್ ಬಂದಿತ್ತು
ಸಿಎಂ ಆಪ್ತ ಕಾರ್ಯದರ್ಶಿ ಎಂದು ವಂಚನೆ: ಆರೋಪಿಯನ್ನ ಹೆಡೆಮುರಿ ಕಟ್ಟಿದ ಪೊಲೀಸರು!
ಕಳೆದ ಏಪ್ರಿಲ್ 16ರಂದು ಕೆಲಸ ಮುಗಿಸಿ ಬರುವಾಗ ಮನೆಯೊಂದರಲ್ಲಿ ಕಳ್ಳತನ ಕಲ್ಯಾಣ ನಗರದ HRBR ಲೇಔಟ್ ನ ಪ್ರಮೋದ್ ಭಟ್ ಅವರ ಮನೆಗೆ ಕನ್ನ ಹಾಕಿದ್ದ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದ ಮನೆ ಮಾಲೀಕ ಪ್ರಮೋದ್ ಭಟ್ದೂರಿನ ದಾಖಲಿಸಿ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಬ್ಲಾಕ್ ಕಲರ್ ಪಲ್ಸರ್ ನಲ್ಲಿ ಬಂದಿದ್ದ ಬೈಕ್ ವ್ಯಕ್ತಿ ಕದಿದ್ದು ಗೊತ್ತಾಗಿದೆ
ನಂಬರ್ ಪ್ಲೇಟ್ ಸರಿಯಾಗಿ ಕಾಣದ ಕಾರಣ ಆರ್.ಟಿ.ಒ ಸಹಾಯ ಪಡೆದಿದ್ದ ಪೊಲೀಸರು ಆರ್.ಟಿ.ಒ ದಿಂದ ಬರೊಬ್ಬರಿ ಹನ್ನೂಂದು ಸಾವಿರ ನಂಬರ್ ಗಳು ಸಿಕ್ಕಿತ್ತು ಈ ನಂಬರ್ ರಗಳನ್ನ ಪರಿಶೀಲನೆ ಮಾಡಿದಾಗ ಕಳ್ಳತನಕ್ಕೆ ಬಳಸಿದ್ದ ಪಲ್ಸರ್ ಬೈಕ್ ಸಿಕ್ಕಿದೆ ತನ್ನ ಬೈಕ್ ಸಕೆಂಡ್ ಹ್ಯಾಂಡ್ ಶೂರೂಮ್ ಗೆ ಮಾರಿದ್ದ ಕಳ್ಳ ಸತೀಶ್ ಸೆಕೆಂಡ್ ಹ್ಯಾಂಡ್ ಶೂರೂಂನಿಂದ ಮತ್ತೊಬ್ಬ ಖರೀದಿ ಮಾಡಿ ತನ್ನ ಹೆಸರಿಗೆ ರಿಜಿಸ್ಟರ್ ಮಾಡಿದ್ದ ಕೊನೆಗೆ ಸತೀಶ್ ವಿವರ ಶೂರೂಮ್ನಲ್ಲಿ ಪಡೆದಾಗ ಆತ ತಮಿಳುನಾಡನಲ್ಲಿರೋದು ಗೊತ್ತಾಗುತ್ತೆ ತಮಿಳುನಾಡಿಗೆ ಹೋಗಿ ಆರೋಪಿ ಬಂಧಿಸಿ ಕರೆತಂದ ಪೊಲೀಸರು ಆರೋಪಿಯಿಂದ 90 ಗ್ರಾಂ ಚಿನ್ನ ಹಾಗೂ ಒಂದು ಲ್ಯಾಪ್ ಟಾಪ್ ಜಪ್ತಿ