ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಭಾರತದ ನೀರಜ್ ಚೋಪ್ರಾ (Neeraj Chopra) ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ (Javelin) ಎಸೆತದಲ್ಲಿ ಬೆಳ್ಳಿ (Silver) ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ.
2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು. 6 ಅವಕಾಶಗಳ ಪೈಕಿ 5 ಪ್ರಯತ್ನಗಳಲ್ಲಿ ಫೌಲ್ ಆಗಿದ್ದ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದರು.
ನೀರಾಜ್ ಬೆಳ್ಳಿ ಗೆಲ್ಲುವುದರೊಂದಿಗೆ ಭಾರತ ಈ ಕೂಟದಲ್ಲಿ ಒಟ್ಟು ಐದು ಪದಕ ಗೆದ್ದಿದೆ. ಉಳಿದ ನಾಲ್ಕು ಕಂಚಿನ ಪದಕವಾಗಿದ್ದು ಗುರುವಾರ ಹಾಕಿಯಲ್ಲಿ ಸ್ಪೇನ್ ಸೋಲಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
ವಿಷಹಾಕಿ ಎದುರಾಳಿ ಕೊಲ್ಲಲು ಯತ್ನ: ರಷ್ಯಾದ ಚೆಸ್ ಆಟಗಾರ್ತಿ ಸಸ್ಪೆಂಡ್!
ಅರ್ಶದ್ ನದೀಂ ಅವರು ಚಿನ್ನ ಗೆಲ್ಲುವುದರೊಂದಿಗೆ ಪಾಕಿಸ್ತಾನ ಈ ಒಲಿಂಪಿಕ್ಸ್ ಟೂರ್ನಿಯಲ್ಲಿ ಮೊದಲ ಪದಕ ಪಡೆಯಿತು.
“ಜನ ಸಾಮಾನ್ಯವಾಗಿ ಪದಕಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ವೈಯಕ್ತಿಕವಾಗಿ ನಾನು ಅದನ್ನು ಒಪ್ಪುವುದಿಲ್ಲ. ಗಾಯದ ಸಮಸ್ಯೆಯನ್ನು ಮೀರಿ ನಿಂತು ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್ ನಲ್ಲಿ ನಂಬಲಸಾಧ್ಯ ಉತ್ತಮ ಸಾಧನೆ ತೋರಿದ್ದಾರೆ” ಎಂದು ಗುಣಗಾನ ಮಾಡಿದರು.
ಟೋಕಿಯೊದಲ್ಲಿ ಚೋಪ್ರಾ ಚಿನ್ನ ಗೆದ್ದಿದ್ದರು. ಆದರೆ ಇಂದು ಟೋಕಿಯೋದಲ್ಲಿ ಎಸೆದದ್ದಕ್ಕಿಂತ ಎರಡು ಮೀಟರ್ ಹೆಚ್ಚು ದೂರಕ್ಕೆ ಜಾವೆಲಿನ್ ಎಸೆದರೂ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಸೀಸನ್ ನ ಅತ್ಯುತ್ತಮ ಸಾಧನೆಯನ್ನು ಅವರು ಮಾಡಿದ್ದಾರೆ. ಅವರು ಹುಲಿ. ಹುಲಿಯಂತೆ ಹೋರಾಡಿದರು. ಗಾಯದಿಂದ ಗುಣಮುಖರಾದ ಅವರ ಸಾಧನೆ ನಿಜಕ್ಕೂ ಅತ್ಯುತ್ತಮ. ಅವರು ಚಾಂಪಿಯನ್. ಚಾಂಪಿಯನ್ನರು ರೂಪುಗೊಳ್ಳುವುದು ಹೀಗೆ” ಎಂದು ಬಣ್ಣಿಸಿದರು.