ಆರ್ಸಿಬಿ ತಂಡದಿಂದ ಐಪಿಎಲ್ ಆಕ್ಷನ್ಗೆ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಈ ಮುನ್ನವೇ ಆರ್ಸಿಬಿಗೆ ಸ್ಟಾರ್ ಕ್ರಿಕೆಟರ್ಸ್ ಬಿಗ್ ಶಾಕ್ ಕೊಟ್ಟಿದ್ದಾರೆ.
ಆರ್ಸಿಬಿ ಕ್ಯಾಪ್ಟನ್ ಡುಪ್ಲೆಸಿಸ್ಗೆ 40 ವರ್ಷ. ಮುಂದಿನ ಮೂರು ವರ್ಷ ಫಾಫ್ ಡುಪ್ಲೆಸಿಸ್ ಐಪಿಎಲ್ ಆಡಲು ಸಾಧ್ಯವೇ ಇಲ್ಲ. ಹಾಗಾಗಿ ಮುಂದಿನ ಸೀಸನ್ ವೇಳೆಗೆ ಐಪಿಎಲ್ನಿಂದಲೇ ಫಾಫ್ ನಿವೃತ್ತಿ ಆಗಲಿದ್ದಾರೆ ಎನ್ನುವ ಆಘಾತ ಸುದ್ದಿ ಹೊರಬಿದ್ದಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು: ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಕಟ್ಟೆಚ್ಚರ!
ಐಪಿಎಲ್ನಿಂದ ನಿವೃತ್ತಿಯಾಗಲು ಸಜ್ಜಾಗಿರೋ ಮತ್ತೋರ್ವ ಸ್ಟಾರ್ ಪ್ಲೇಯರ್ ಕರ್ಣ್ ಶರ್ಮಾ. ಇವರು ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ರು. ಕೇವಲ ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ರು. ಹಾಗಾಗಿ ಕರ್ಣ್ ಶರ್ಮಾ ಏನಾದ್ರೂ ರೀಟೈನ್ ಲಿಸ್ಟ್ನಲ್ಲಿದ್ದರೆ, ನಿವೃತ್ತಿ ವಿಚಾರವೂ ಆರ್ಸಿಬಿಗೆ ಆಘಾತ ನೀಡಲಿದೆ.
ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಭರ್ಜರಿ ಕಮ್ಬ್ಯಾಕ್ ಮಾಡಿತ್ತು. ಮೊದಲಾರ್ಧ ಸೀಸನ್ನಲ್ಲಿ ಹೀನಾಯ ಸೋಲು ಕಂಡಿದ್ದ ಆರ್ಸಿಬಿ ನಂತರ ಬ್ಯಾಕ್ ಟು ಬ್ಯಾಕ್ 7 ಪಂದ್ಯ ಗೆದ್ದು ಐಪಿಎಲ್ ಫ್ಲೇ ಆಫ್ಗೆ ಎಂಟ್ರಿ ಕೊಟ್ಟಿತ್ತು