ಪುರುಷರೇ ಕೆಲವು ರಹಸ್ಯ ತಿಳಿದಿದ್ದರೆ ನಿಮ್ಮ ಲೈಂಗಿಕ ಜೀವನ ಸೂಪರ್ ಆಗಿರುತ್ತದೆ. ಗಂಡ ಹೆಂಡತಿ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸೆಕ್ಸ್ ಬಹಳ ಮುಖ್ಯ. ಹಾಗಿದ್ರೆ ಹೆಂಡತಿ ಮಾನವೊಲಿಸಲು ಗಂಡ ಏನು ಮಾಡಬೇಕು ಅವನ ಪ್ರತಿಕ್ರಿಯೆ ಹೇಗಿರಬೇಕು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ.
ಕಣ್ಣು ಮಂಜಾಗುತ್ತಾ!?, ಕನ್ನಡಕ ಹಾಕೊಂಡು ಸುಮ್ಮನಿರ್ಬೇಡಿ, ಇದು ಈ ರೋಗದ ಲಕ್ಷಣವಾಗಿರಬಹುದು!
ಹೌದು, ನೇರವಾಗಿ ಸೆಕ್ಸ್ ಗೆ ಅನ್ವಯ ನೀಡುವುದಕ್ಕಿಂತ ಮೈಗೆ ಮೈ ತಾಕಿಸುವುದು, ಅಪ್ಪಿಕೊಳ್ಳುವುದು. ಆಕೆಯ ಮನಸ್ಸನ್ನು ಗೆಲ್ಲುವುದು ಹೀಗೆ ಮೆಚ್ಚಿಸುವ ಕೆಲಸ ಮಾಡಿ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುವ ಕಲೆ ಪುರುಷನಿಗೆ ತಿಳಿದಿರಲೇಬೇಕು. ಪ್ರೀತಿಯಿಂದ ಒಲಿಸಿಕೊಳ್ಳುವುದು ತಿಳಿದಿದ್ದರೆ ಲೈಂಗಿಕ ಜೀವನವು ಸುಮಧುರವಾಗಿರಲು ಸಾಧ್ಯ.
ನಿಮ್ಮ ಸಂಗಾತಿಯನ್ನು ಸೆಕ್ಸ್ ಮೂಡ್’ ಬರಿಸಲು ಆಕೆಯು ಮೆಚ್ಚುವಂತಹ ಕೆಲಸವು ಮುಖ್ಯವಾಗುತ್ತದೆ. ಪತ್ನಿಗೆ ಇಷ್ಟವಾದ ಕೆಲಸ, ವಿಶೇಷವಾದ ಗಿಫ್ಟ್ ಗಳು ರೋಮ್ಯಾಂಟಿಕ್ ಮೂಡ್ ಗೆ ಕರೆದ್ಯೋಯುತ್ತದೆ. ಈ ಕಲೆ ಗೊತ್ತಿದ್ದರೆ ಗಂಡನು ಹೆಂಡತಿಯ ಮನಸ್ಸನ್ನು ಸಲೀಸಾಗಿ ಸೆಳೆಯಲು ಸಾಧ್ಯ.
ಪತಿಯಾದವನು ಪತ್ನಿಗೆ ಆಸೆಯನ್ನು ಕಣ್ಣೋಟದಲ್ಲಿ ತಿಳಿಸುವುದು ಅಥವಾ ಕಣ್ಣಿನ ಸನ್ನೆಯಲ್ಲಿ ಮುದ್ದಿನ ಮಡದಿಯನ್ನು ಬರಸೆಳೆಯುವುದನ್ನು ಅರಿತಿದ್ದರೆ ಒಳ್ಳೆಯದು. ಈ ತುಂಟ ಸ್ವಭಾವಗಳು ಸಹಜವಾಗಿ ಮಹಿಳೆಯರಿಗೆ ಇಷ್ಟವಾಗುತ್ತದೆ. ಇದು ಸೆಕ್ಸ್ ಲೈಫನ್ನು ಇನ್ನಷ್ಟು ಕಲರ್ ಫುಲ್ ಆಗಿಸುತ್ತದೆ. ಚುಂಬಿಸುವ ಕಲೆಯು ಕೂಡ ಪುರುಷ ಅರಿತಿರಬೇಕಾದ ರಹಸ್ಯಗಳಲ್ಲಿ ಒಂದು. ನೀವು ಸಂಗಾತಿಯನ್ನು ಒಲಿಸಿಕೊಳ್ಳುವುದಾದರೆ ಮತ್ತೇರುವಂತೆ ಚುಂಬಿಸಿ. ಮುತ್ತು ನೀಡಿ ಆಕೆಗೆ ನಿಮ್ಮ ಬಯಕೆಯನ್ನು ತಿಳಿಸಿ, ಈ ವೇಳೆಯಲ್ಲಿ ಪತಿಯು ಮೂಡಿನಲ್ಲಿದ್ದೀರಿ ಎಂದು ಆಕೆಯು ಸಮ್ಮತಿ ನೀಡಬಹುದು.
ಈ ರೀತಿ ಮಾಡುವುದು ಕೂಡ ಸೆಕ್ಸ್ ಲೈಫ್ ಉತ್ತಮವಾಗಿರಲು ಸಹಾಯ ಮಾಡುತ್ತದೆ.
ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗಲೂ ಮಹಿಳೆಯು ಕಾಳಜಿ ಹಾಗೂ ಸಹಾನುಭೂತಿಯನ್ನು ಬಯಸುತ್ತಾಳೆ. ಲೈಂಗಿಕ ಜೀವನದಲ್ಲಿಯು ಪತ್ನಿಯನ್ನು ಪ್ರೀತಿ ಹಾಗೂ ಕಾಳಜಿಯಿಂದ ಮುದ್ದಿಸಿ. ಈ ವೇಳೆಯಲ್ಲಿ ಪುರುಷನು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಗೆ ಆಸೆ ಹಾಗೂ ಬಯಕೆಗಳಿದ್ದರೆ ಅದನ್ನು ಕೂಡ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.