ಒಲಿಂಪಿಕ್ಸ್ ಎಂಬುದು ವಿಶ್ವದ ಅತೀ ದೊಡ್ಡ ಕ್ರೀಡಾಕೂಟ. ಈ ಬಹುರಾಷ್ಟ್ರೀಯ ಕೂಟದ ಪ್ರತಿ ಸೀಸನ್ನಲ್ಲಿ 200ಕ್ಕೂ ಹೆಚ್ಚು ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಇಂತಹ ದೊಡ್ಡ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಆದರೆ ಇಲ್ಲೊಬ್ಬ ಕ್ರೀಡಾಪಟು ಒಂದಲ್ಲ, ಎರಡಲ್ಲ 28 ಪದಕ ಬೇಟೆಯಾಡಿದ್ದಾರೆ.
ಎಸ್ ಅಮೇರಿಕಾದ ಮಾಜಿ ಈಜುಪಟು ಮೈಕೆಲ್ ಫೆಲ್ಪ್ಸ್ ಅವರು ಒಲಿಂಪಿಕ್ಸ್ ಒಂದರಲ್ಲೇ ಬರೋಬ್ಬರಿ 28 ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ. 39 ವರ್ಷದ ಮೈಕೆಲ್ ಫೆಲ್ಪ್ಸ್ ಅವರು 23 ಚಿನ್ನದ ಪದಕಗಳು, ಮೂರು ಬೆಳ್ಳಿ ಪದಕಗಳು ಮತ್ತು ಎರಡು ಕಂಚಿನ ಪದಕಗಳು ಸೇರಿದಂತೆ 28 ಒಲಿಂಪಿಕ್ ಪದಕಗಳನ್ನು ಗೆದ್ದು ಸರ್ವಕಾಲಿಕ ದಾಖಲೆ ಮಾಡಿದ್ದಾರೆ.
ಮಹಿಳೆಯರ ಮೇಲೆ ಇಸ್ರೇಲಿ ಸೈನಿಕರಿಂದ ಅತ್ಯಾಚಾರ: ಜೈಲಿನ ಭಯಾನಕ ದೃಶ್ಯ ವೈರಲ್!
ಫೆಲ್ಪ್ಸ್ ತಮ್ಮ 11ನೇ ವಯಸ್ಸಿನಲ್ಲಿ ಈಜು ತರಬೇತಿ ಪ್ರಾರಂಭಿಸಿದರು ಮತ್ತು 2016ರ ರಿಯೊ ಒಲಿಂಪಿಕ್ಸ್ ನಂತರ ಸ್ಪರ್ಧಾತ್ಮಕ ಈಜುಗಳಿಂದ ನಿವೃತ್ತರಾಗಿದ್ದಾರೆ. ಅವರು ಐದು ಬಾರಿ ಗುಂಪು ಕ್ರೀಡಾ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಾರೆ, 2000 ದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಅವರು 2016 ರ ರಿಯೊ ಒಲಿಂಪಿಕ್ಸ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಅಥೆನ್ಸ್ ಒಲಿಂಪಿಕ್ಸ್ನಲ್ಲಿ 6 ಚಿನ್ನದ ಪದಕ
ಅವರು ತಾವಾಡಿದ್ದ ಮೊದಲ ಒಲಿಂಪಿಕ್ಸ್ನಲ್ಲಿ ಯಾವುದೇ ಪದಕ ಗೆಲ್ಲದೆ ಹೊರ ನಡೆದಿದ್ದರು. ಅವರು 2004 ರಲ್ಲಿ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸಿದರು. ಅಲ್ಲಿ ಅವರು 6 ಚಿನ್ನದ ಪದಕಗಳು ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು. ಈ ನಡುವೆ 2008 ರ ಬೀಜಿಂಗ್ ಒಲಿಂಪಿಕ್ಸ್ನ ಒಂದೇ ವರ್ಷದಲ್ಲಿ 8 ಚಿನ್ನದ ಪದಕಗಳನ್ನು ಗೆದ್ದರು. ಇದು ಇಂದಿಗೂ ಮುರಿಯಲಾಗದ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದರು.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈವೆಂಟ್ನಲ್ಲಿ ಫೆಲ್ಪ್ಸ್ ಅವರ ಮುಂದಿನ ಭಾಗವಹಿಸುವಿಕೆಯಾಗಿರುವ 2012 ಲಂಡನ್ ಒಲಿಂಪಿಕ್ಸ್ನಲ್ಲಿ ಐದು ಚಿನ್ನದ ಪದಕ ಮತ್ತು 2016 ರ ರಿಯೊ ಒಲಿಂಪಿಕ್ಸ್ನಲ್ಲಿ ಒಂದು ಬೆಳ್ಳಿ ಪದಕವನ್ನು ಗೆಲ್ಲುವುದರ ಜೊತೆಗೆ ನಾಲ್ಕು ಚಿನ್ನದ ಪದಕಗಳನ್ನು ಮತ್ತು ಎರಡು ಬೆಳ್ಳಿ ಪದಕಗಳನ್ನು ಗಳಿಸಿದರು.
ಫೆಲ್ಪ್ಸ್ ಗೆದ್ದ ಚಿನ್ನದ ಪದಕಗಳ ಸಂಖ್ಯೆ ವಿಶ್ವದ 162 ದೇಶಗಳು ಒಲಿಂಪಿಕ್ಸ್ನಲ್ಲಿ ಗೆದ್ದ ಚಿನ್ನದ ಪದಕಗಳಿಗಿಂತ ಹೆಚ್ಚು. ಉದಾಹರಣೆಗೆ ನೋಡುವುದಾದರೆ ಭಾರತ ಒಲಿಂಪಿಕ್ ಇತಿಹಾಸದಲ್ಲಿ ಇಲ್ಲಿಯವರೆಗೆ ಒಟ್ಟು 10 ಚಿನ್ನದ ಪದಕ ಗೆದ್ದಿದೆ. ಇದು ಫೆಲ್ಪ್ಸ್ ಗೆದ್ದ 23 ಚಿನ್ನದ ಪದಕಗಳಲ್ಲಿ ಅರ್ಧಕಿಕ್ಕಂತ ಕಡಿಮೆ.
ತನ್ನ ವೃತ್ತಿ ಜೀವನದಲ್ಲಿ ಫೆಲ್ಪ್ಸ್ ತನ್ನ ಅಭಿಮಾನಿಗಳನ್ನು ಮೆಚ್ಚಿಸಿದ್ದು ಮಾತ್ರವಲ್ಲದೆ ಗಣನೀಯ ನಿವ್ವಳ ಮೌಲ್ಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ $100 ಮಿಲಿಯನ್ ನಿವ್ವಳ ಮೌಲ್ಯ ಅಂದರೆ ಸುಮಾರು ರೂ. 837 ಕೋಟಿ ಆದಾಯ ಹೊಂದಿದ್ದಾರೆ.