ಮಹಾರಾಷ್ಟ್ರ:- ಮಹಿಳೆಯ ಮೇಲೆ ಅಮಾನುಷವಾಗಿ ಠಾಣೆಯಲ್ಲಿ ಬಿಜೆಪಿ ಮುಖಂಡ ಹಲ್ಲೆ ನಡೆಸಿದ ಘಟನೆ ಜರುಗಿದೆ.
ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಶಿವ ತಾಯ್ಡೆ ಎಂಬಾತ ಮಹಿಳೆಯ ಮೇಲೆ ಅಮಾನುಷ ಹಲ್ಲೆ ನಡೆಸಿದ್ದಾರೆ. ಪೊಲೀಸರು ತಡೆಯಲು ಯತ್ನಿಸಿದರೂ ಶಿವ ತಾಯ್ಡೆ ಮಹಿಳೆಗೆ ಥಳಿಸುತ್ತಲೇ ಇದ್ದರು. ಈ ವಿಡಿಯೋವನ್ನು ಶಿವಸೇನಾ ಠಾಕ್ರೆ ಬಣದ ಶಾಸಕಿ ಸುಷ್ಮಾ ಅಂಧಾರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಎನ್ನಲಾಗಿದೆ.
ನನ್ನ ಗಂಡ ಹಾಗಾಗ ಕನಸಲ್ಲಿ ಬರ್ತಿದ್ದ ಅದಕ್ಕೆ ಮಗು ಹುಟ್ಟಿದೆ: ಸತ್ತ ಗಂಡನ ಬಗ್ಗೆ ಮಹಿಳೆ ಹೇಳಿಕೆ!
ಬುಲ್ಡಾನಾದ ಮಲ್ಕಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಏಪ್ರಿಲ್ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ ಮಹಿಳೆಯ ಸಂಬಂಧಿಯಾಗಿರುವ ಶಿವಚಂದ್ರ ತಾಯ್ಡೆ ವಿರುದ್ಧ ಮಹಿಳೆ, ಆಕೆಯ ಮಗ ಮತ್ತು ಸೊಸೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು.
ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುವಾಗ ಮಮಹಿಳೆ ಬಿಜೆಪಿ ನಾಯಕನ ಮಾತುಗಳನ್ನು ರೆಕಾರ್ಡ್ ಮಾಡಲು ಶುರುಮಾಡಿದ್ದರು, ಕೋಪಗೊಂಡ ತಾಯ್ಡೆ ಫೋನ್ ಕಿತ್ತುಕೊಂಡು ಮಹಿಳೆಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.