ಬೆಂಗಳೂರು – ಕೆಂಪು ತೋಟಕ್ಕೆ ಕಲರ್ ಕಲರ್ ಹೂಗಳು ಎಂಟ್ರಿ ಕೊಟ್ಟಾಗಿದೆ. ಹೂವಿನ ಲೋಕವೇ ಧರೆಗಿಳಿದಾಗಿದೆ. ಹೂಗಳಲ್ಲೇ ಜೀವನಗಾಥೆ ಅನಾವರಣಗೊಳ್ಳಲಿದೆ. ಈ ಅಂದ ಚಂದ ಸವಿಯೊಕೆ ಸಿಟಿ ಮಂದಿ ಕಾತುರಾರಾಗಿದು, ಹೂವಿನ ಲೋಕ ಚುಂಬಿಸಿ ಸಂತೈಸೋಕೆ ದಿನಗಣನೆ ಸ್ಟಾರ್ಟ್ ಆಗಿದೆ.
ಎಸ್… ಸಿಲಿಕಾನ್ ಸಿಟಿ ಬೆಂಗಳೂರಿನ ಹೂಗಳ ಹಬ್ಬ ಲಾಲ್ ಬಾಗ್ ಫವರ್ ಶೋಗೆ ಡೇಟ್ ಫಿಕ್ಸ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇದೇ ಆಗಸ್ಟ್ 8 ರಿಂದ ಫ್ಲವರ್ ಶೋ ಆರಂಭವಾಗಲಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಈ ಬಾರಿ 216 ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ವೆರಾಯಿಟಿ ಹೂಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾನ್ಸೆಪ್ಟ್ ಇರಲಿದೆ.
ಹೌದು….ಪ್ರತಿ ವರ್ಷ ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಅನಾವರಣಗೋಳ್ಳುತ್ತೆ, ಕಳೆದ ಬಾರಿಯೂ ಫಲಪುಷ್ಪ ಪ್ರದರ್ಶನವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು ಜನ ಮನ್ನಣೆಯನ್ನು ಪಡೆದುಕೊಂಡಿತ್ತು,
ಇನ್ನೂ…ಈ ಬಾರಿ ಪ್ಲವರ್ ಶೋನಲ್ಲಿ ಆಗಸ್ಟ್ 8 ರಿಂದ 19 ವರೆಗೆ ಈ ಪ್ರದರ್ಶನ ನಡೆಯಲಿದೆ.. ಅಂಬೇಡ್ಕರ್ ಅವರ ಜೀವನ ಆಧಾರಿತ ಪುಷ್ಪ ಪ್ರದರ್ಶನ ಇದಾಗಿದ್ದು, ಇನ್ನು ಆಗಸ್ಟ್ 8 ರಂದು ಬೆಳ್ಳಿಗೆ 10.30ಗಂಟೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ಇನ್ನು ವಿಶೇಷವಾಗಿ ಮುಖ್ಯ ಅಥಿತಿ ಆಗಿ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತ ಅಂಬೇಡ್ಕರ್ ಅವರು ಬರಲಿದ್ದಾರೆ. ಅದರಲ್ಲೂ ಲಾಲ್ಬಾಗ್ ಪರಿಸರದಲ್ಲಿ ಭೀಮ ಸಂದೇಶ ಅನಾವರಣಗೊಳ್ಳಲಿದೆ. 12 ದಿನದವರೆಗೂ 6 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಡೆಂಗೂ ಹೆಚ್ಚಾಗ್ತಾ ಇರುವ ಹಿನ್ನೆಲೆ ಸ್ವಚ್ಛತೆಗೆ ಆದ್ಯತೆ ಕೊಡಲಾಗಿದೆ. ಇನ್ನ ಪ್ಲವರ್ ಶೋ ಗೆ ಆನ್ಲೈನ್ ಟಿಕೆಟ್ ಕೂಡ ಲಭ್ಯ ವಿದೆ. ಸಾಮಾನ್ಯರಿಗೆ ಎಂಟ್ರಿ ಫೀ 100 ರೂಪಾಯಿ ಇದ್ರೆ, ಮಕ್ಕಳಿಗೆ 30, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಕಳೆದ ಬಾರಿ 60-70 ಲಕ್ಷ ಆದಾಯ ಬಂದಿತ್ತು..ಈ ಬಾರಿ ಕೂಡ ಸಾಕಷ್ಟು ಆದಾಯ ಬರುವ ನಿರೀಕ್ಷೆ ಇದೆ. ಒಟ್ಟು 12 ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನವನ್ನು ವಿಜೃಂಭಣೆಯಿಂದ ನಡೆಸಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ.
ಈ ಭಾರಿ ಫಲಪುಷ್ಪ ಪ್ರದರ್ಶನದ ತಯಾರಿ ಅದ್ದೂರಿಯಾಗಿ ಸಾಗಿ ಬರುತ್ತಿದ್ದು, ಒಟ್ನಲ್ಲಿ
ಬೆಂಗಳೂರಿಗರಂತೂ ಹೂವಿನ ಸೌಂದರ್ಯವನ್ನು ನೋಡಿ ಕಣ್ಣು ತುಂಬಿಕೊಳ್ಳಲು ಕಾತುರದಿಂದ ಕಾಯುತಿದ್ದಾರೆ…